ಹಾಕಿ ಇಂಡಿಯಾ ಕ್ಯಾಪ್ಟನ್ ಸರ್ದಾರ್ ಮೇಲೆ ರೇಪ್ ಕೇಸ್

Posted By:
Subscribe to Oneindia Kannada

ಲೂಧಿಯಾನಾ, ಫೆ. 03: ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ವಿರುದ್ಧ ಆತನ ಗೆಳತಿಯೇ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ದೂರು ದಾಖಲಿಸಿರುವ ಸುದ್ದಿ ಬಂದಿದೆ.

ಲೂಧಿಯಾನದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ 21 ವರ್ಷದ ಯುವತಿ ಕೂಡಾ ಹಾಕಿ ಆಟಗಾರ್ತಿಯಾಗಿದ್ದಾರೆ. 2012ರ ಲಂಡನ್ ಒಲಂಪಿಕ್ಸ್ ಸಮಯದಲ್ಲಿ ಸರ್ದಾರ್ ಸಿಂಗ್ ಅವರನ್ನು ಭೇಟಿ ಮಾಡಿದ್ದೆ. ನಂತರ ಇಬ್ಬರ ನಡುವೆ ಸ್ನೇಹ ಬೆಳೆಯಿತು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆಕೆ ದೂರಿದ್ದಾರೆ.

ಇದಲ್ಲದೆ ಸರ್ದಾರ್ ಸಿಂಗ್ ನನಗೆ ಬೆದರಿಕೆ ಒಡ್ಡಿ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ನನ್ನ ಮೇಲೆ ತುಂಬಾ ಪ್ರೀತಿ, ಕಾಳಜಿ ತೋರಿಸುತ್ತಿದ್ದರು. ಆದರೆ, ಈಗ ನನ್ನ ಫೋನ್ ಕರೆ ಕೂಡಾ ಸ್ವೀಕರಿಸುತ್ತಿಲ್ಲ ಎಂದಿದ್ದಾರೆ.

Attempt to rape charge on Indian Hockey captain- Sardar Singh

ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿರುವ ಲೂಧಿಯಾನಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಇನ್ನೂ ಎಫ್​ಐಆರ್ ದಾಖಲಿಸಲಾಗಿಲ್ಲ ಪೊಲೀಸ್ ಕಮಿಷನರ್ ಪಿ.ಎಸ್.ಉಮ್ರನಾಂಗಲ್ ಹೇಳಿದ್ದಾರೆ.

ಸರ್ದಾರ್ ಸಿಂಗ್ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್​ಪಿ)ಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು. ನಾನು ಇಲ್ಲಿ ಡಿಎಸ್ ಪಿ ಆಗಿದ್ದೇನೆ, ನೀನು ವಿದೇಶಿಯಾಗಿದ್ದೀಯ ನೀನು ಯಾರಿಗಾದರೂ ದೂರು ನೀಡು ಪ್ರಯೋಜನವಿಲ್ಲ ಎಂದು ಸರ್ದಾರ್ ಸಿಂಗ್ ಬೆದರಿಸಿದ್ದಾರೆ ಎಂದು ದೂರುದಾರೆ ಹೇಳಿದ್ದಾರೆ. ಯುಕೆ ನಿವಾಸಿಯಾದ ಈಕೆ ದೂರು ದಾಖಲಿಸಿದ ಬಳಿಕೆ ಸದ್ಯ ತನ್ನ ಕುಟುಂಬದೊಡನೆ ನೆಲೆಸಿದ್ದಾರೆ.

(ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a shocking revelation, the Indian Hockey captain Sardar Singh has been accused of attempt to rape by his long-time girlfriend and fiancee. The complaint has been filed in Ludhiana.
Please Wait while comments are loading...