ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಬೇಟೆಗೆ ಸಜ್ಜಾದ ಕನ್ನಡಿಗರು

By: ಕ್ರೀಡಾ ಡೆಸ್ಕ್
Subscribe to Oneindia Kannada

ಸಾಂಬಾ ನಾಡು ಬ್ರೆಜಿಲ್ ದೇಶದಲ್ಲಿ ಆಗಸ್ಟ್ 5 ರಿಂದ ಆರಂಭವಾಗಲಿರುವ ರಿಯೋ ಒಲಿಂಪಿಕ್ಸ್​ 2016ಗೆ ರಿಯೋ ಡಿ ಜನೈರೋ ಸರ್ವ ರೀತಿಯಲ್ಲೂ ಸಜ್ಜುಗೊಂಡಿದೆ. ರಿಯೋ ನಲ್ಲಿ ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾರಿಸಲು ಹೆಮ್ಮೆಯ ಕನ್ನಡಿಗರು ಸನ್ನದ್ಧರಾಗಿದ್ದಾರೆ.

ರಿಯೋ ಒಲಿಂಪಿಕ್ಸ್ ವಿಶೇಷ ಪುಟ ಕ್ಲಿಕ್ಕಿಸಿ| ಸುಂದರ ಸ್ಟೇಡಿಯಂಗಳತ್ತ ಒಂದು ನೋಟ

ಈ ಬಾರಿಯ ರಿಯೋ ಒಲಿಂಪಿಕ್ಸ್ 2016 ನಲ್ಲಿ ಕರ್ನಾಕದ 11 ಕಲಿಗಳು ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ಹಾಕಿ ಸೇರಿದಂತೆ ವಿವಿಧ ಅಥ್ಲೆಟಿಕ್ ಗಳಲ್ಲಿ ನಮ್ಮ ಅಥ್ಲೀಟ್ ಗಳು ಪದಕ ಬೇಟೆಗೆ ತುದಿಗಾಲಲ್ಲಿ ನಿಂತಿದ್ದಾರೆ. [ ಪದಕ ವಿಜೇತರು: ಲಿಯಾಂಡರ್ ನಿಂದ ಸೈನಾ ತನಕ]

ಇಡೀ ವಿಶ್ವವನ್ನೇ ಘಮ ಘಮವೆನಿಸುವ ಕರ್ನಾಟಕದ ಕೊಡಗಿನ ಕಾಫಿ ನಾಡಿನ ಆರು ಜನರು ರಿಯೋನಲ್ಲಿ ಭಾರತ ಪರವಾಗಿ ಆಡುತ್ತಿರುವುದು ವಿಶೇಷ. ಹಾಕಿಯಲ್ಲಿ 3, ಅಥ್ಲೆಟಿಕ್ ನಲ್ಲಿ ಇಬ್ಬರು ಬ್ಯಾಡ್ಮಿಂಟನ್ ಒಬ್ಬರು ರಿಯೋಗೆ ಸ್ಥಾನಗಿಟ್ಟಿಸಿಕೊಂಡು ಸಾಂಬಾ ನಾಡಿನಲ್ಲಿ ಘಮ ಘಮಿಸಲಿದ್ದಾರೆ. [ಒಲಿಂಪಿಕ್ಸ್ 2016 : 10 ಸಾವಿರ ಕ್ರೀಡಾಪಟುಗಳು] || [ಒಲಿಂಪಿಕ್ಸ್ ಲೈವ್ ಯಾವ ವಾಹಿನಿಯಲ್ಲಿ ನೋಡ್ಬಹುದು?]

ಹಾಗಿದ್ದರೆ ಯಾರು, ಯಾವ ಕ್ರೀಡೆಯಲ್ಲಿ ಮಿಂಚಲಿದ್ದಾರೆ ಎಂಬುದನ್ನು ಸ್ಲೈಡ್ ಗಳಲ್ಲಿ ನೋಡಿ.

ಆಳೆತ್ತರದ ಮೈಸೂರಿನ ಹುಲಿ ವಿಕಾಸ್ ಗೌಡ

ಆಳೆತ್ತರದ ಮೈಸೂರಿನ ಹುಲಿ ವಿಕಾಸ್ ಗೌಡ

* ಮೂಲತಃ ಮೈಸೂರು.
* ಇವರು ಡಿಸ್ಕಸ್ (ಚಕ್ರ) ಎಸೆತದ ಕ್ರೀಡಾಪಟುವಾಗಿ ರಿಯೋನಲ್ಲಿ ಮಿಂಚಲಿದ್ದಾರೆ.
* ಏಷ್ಯನ್ ಅಥ್ಲೆಟಿಕ್ 2013ರಲ್ಲಿ ಮೊದಲ ಬಾರಿಗೆ ಅಂತರಾಷ್ಡ್ರೀಯ ಸ್ವರ್ಣ ಪದಕವನ್ನು ಸಂಪಾದಿಸಿರುವ ಸಾಧನೆ.
* 2014ರಲ್ಲಿ ಗ್ಲಾಸ್ಗೋ ಗೇಮ್ಸ್ ನಲ್ಲಿ ಸ್ವರ್ಣಕ್ಕೆ ಮುತ್ತಿಟ್ಟರು.
* 2014ರ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದರು.

ಓಟದ ರಾಣಿ ಕಾಫಿ ನಾಡು ಕೊಡಗಿನ ಪೂವಮ್ಮ

ಓಟದ ರಾಣಿ ಕಾಫಿ ನಾಡು ಕೊಡಗಿನ ಪೂವಮ್ಮ

* ಮೂಲತಃ ಕಾಫಿ ನಾಡು ಕೊಡಗಿನವರಾಗಿದ್ದಾರೆ.
* 400 ಮೀ. ಹಾಗು 4 ‍X 400ಮೀ ರಿಲೇಯಲ್ಲಿ ರಿಯೋನಲ್ಲಿ ಭಾಗವಹಿಸಲಿದ್ದಾರೆ.
* 400 ಮೀ. ರನ್ನಿಂಗ್ ನಲ್ಲಿ 51.75 ಸೆಕೆಂಡ್ ಗಳಲ್ಲಿ ಓಡಿದ ವೈಯಕ್ತಿಕ ದಾಖಲೆ.
* 2008ರ ಕಾಮನ್ ವೆಲ್ತ್ ಯೂತ್ ಗೇಮ್ಸ್ ನಲ್ಲಿ 4‍X400ಮೀ ರಿಲೇಯಲ್ಲಿ ಭಾರತಕ್ಕೆ ಚಿನ್ನದ ಪದಕ
* 400 ಮೀ. ರನ್ನಿಂಗ್ ನಲ್ಲಿ ಏಷ್ಯಾದ ಅಗ್ರಮಾನ್ಯ 2 ನೇ ಸ್ಥಾನ.

ಕೊಡಗಿನ ಬ್ಯಾಡ್ಮಿಂಟನ್ ಕುವರಿ ಅಶ್ವಿನಿ ಪೊನ್ನಪ್ಪ

ಕೊಡಗಿನ ಬ್ಯಾಡ್ಮಿಂಟನ್ ಕುವರಿ ಅಶ್ವಿನಿ ಪೊನ್ನಪ್ಪ

* ಅಶ್ವಿನಿ ಪೊನ್ನಪ್ಪ ಮೂಲತಃ ಕೊಡಗಿನವರು.
* ಇವರು ಚುರುಕಿನ ಬ್ಯಾಡಿಂಟನ್ ಆಟದಲ್ಲಿ ಹೆಸರು ಮಾಡಿದವರು.
* ಜ್ವಾಲಾ ಗುಟ್ಟಾ ಅವರ ಜೊತೆಗೂಡಿ ಈ ಬಾರಿಯ ರಿಯೋ ಒಲಿಂಪಿಕ್ ನಲ್ಲಿ ಕಣಕ್ಕಿಳಿಯಲಿದ್ದಾರೆ.
* ಅಶ್ವಿನಿ ಪೊನ್ನಪ್ಪ ಹಾಗು ಜ್ವಾಲಾ ಗುಟ್ಟಾ ಜೋಡಿ ವಿಶ್ವ ಅಗ್ರಕ್ರಮಾಂಕ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದುಕೊಂಡಿದೆ.

ಶಾರ್ಪ್ ಶೂಟರ್ ಪ್ರಕಾಶ್ ನಂಜಪ್ಪ.

ಶಾರ್ಪ್ ಶೂಟರ್ ಪ್ರಕಾಶ್ ನಂಜಪ್ಪ.

* ಉದ್ಯಾನ ನಗರಿ ಬೆಂಗಳೂರು ಮೂಲದವರಾದ ಪ್ರಕಾಶ್ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಇವರು 1999ರಲ್ಲಿ ಶೂಟ್ ಮಾಡಲು ಆರಂಭಿಸಿದರು.
* 10 ಮೀ ಮತ್ತು 50 ಮೀ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಲಗ್ಗೆ ಹಾಕಿ ಗನ್ ಹಿಡಿಯಲಿದ್ದಾರೆ.
* 2013 ರಲ್ಲಿ ನಡೆದ ಅಂತರಾಷ್ಟ್ರೀಯ ಶೂಟಿಂಗ್ ಸ್ಫೋರ್ಟ್ಸ್ ನ ಫೆಡರೇಷನ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪದಕ ತಂದುಕೊಟ್ಟ ಏಕೈಕ ಶೂಟರ್ ಎನಿಸಿಕೊಂಡಿದ್ದಾರೆ.

ಕೊಡಗಿನ ಟೆನಿಸ್ ಭೂಪ ರೋಹನ್ ಬೋಪಣ್ಣ

ಕೊಡಗಿನ ಟೆನಿಸ್ ಭೂಪ ರೋಹನ್ ಬೋಪಣ್ಣ

ತಮ್ಮ 11ನೇ ವಯಸ್ಸಿನಲ್ಲಿಯೇ ಟೆನಿಸ್ ರಾಕೆಟ್ ಹಿಡಿದ ಈ ಕೊಡಗಿನ ರೋಹನ್ ಭೂಪಣ್ಣ ಡಬಲ್ಸ್ ನಲ್ಲಿ ವಿಶ್ವದ ಅಗ್ರಕ್ರಮಾಂಕದಲ್ಲಿ 10ನೇ ಸ್ಥಾನದಲ್ಲಿದ್ದಾರೆ.
* ರಿಯೋ ಒಲಿಪಿಂಕ್ 2016 ನಲ್ಲಿ ಲಿಯಾಂಡರ್ ಪೇಸ್ ಜೊತೆಗೂಡಿ ಪದಕ ಬೇಟೆಯಾಡಲಿದ್ದಾರೆ.
* ಇವರೆಗೆ ಎಟಿಪಿ ಟೂರ್ ನಲ್ಲಿ ಭೂಪಣ್ಣ 14 ಡಬಲ್ಸ್ ಚಾಪಿಂಯನ್ ಆಗಿ ಹಾಗು 23 ಟೂರ್ನಿಗಳಲ್ಲಿ ರನ್ನರ್ ಆಪ್ ಆಗಿ ಹೊರಹೊಮ್ಮಿರುವ ಸಾಧನೆಯಾಗಿದೆ.

ರಿಯೋ ಒಲಿಂಪಿಕ್ಸ್ ಟೂರ್ನಿಯ ಕಿರಿಯ ಗಾಲ್ಫರ್ ಅದಿತಿ

ರಿಯೋ ಒಲಿಂಪಿಕ್ಸ್ ಟೂರ್ನಿಯ ಕಿರಿಯ ಗಾಲ್ಫರ್ ಅದಿತಿ

18 ವಯಸ್ಸಿನ ಬೆಂಗಳೂರಿನ ಅದಿತಿ ಅಶೋಕ್ ಅವರು ಕರ್ನಾಟಕದಿಂದ ದೇಶವನ್ನು ಪ್ರತಿನಿಧಿಸಿದ್ದಾರೆ. ರಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಅತ್ಯಂತ ಕಿರಿಯ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
* ವಿಶ್ವದಲ್ಲಿ 11ನೇ ಕ್ರಮಾಂಕದ ಆಟಗಾರ್ತಿಯಾಗಿ ಅಮೆಚೂರ್ ವೃತ್ತಿ ಬದುಕನ್ನು ಪೂರ್ಣಗೊಳಿಸಿದ್ದಾರೆ.

ಕುಂದಾಪುರದ ಬೆಡಗಿ ಅಶ್ವಿನಿ ಅಕ್ಕುಂಜಿ

ಕುಂದಾಪುರದ ಬೆಡಗಿ ಅಶ್ವಿನಿ ಅಕ್ಕುಂಜಿ

* ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದವರಾದ ಇವರು ರಿಯೋನಲ್ಲಿ 4 ‍X 400ಮೀ ರಿಲೇಯಲ್ಲಿ ಓಡಲಿದ್ದಾರೆ.
* 2010 ರ ಕಾಮನ್ ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಜಯಿಸಿರುವ ಇವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವ ತವಕದಲ್ಲಿದ್ದಾರೆ.

ಸೋಮವಾರಪೇಟೆಯ ಹಾಕಿಪಟು ಎಸ್ ವಿ ಸುನೀಲ್

ಸೋಮವಾರಪೇಟೆಯ ಹಾಕಿಪಟು ಎಸ್ ವಿ ಸುನೀಲ್

ಶರವೇಗದ ಆಟಗಾರ ಕರ್ನಾಟಕದ ಹಾಕಿ ಆಟಗಾರ ಭಾರತ ಹಾಕಿ ತಂಡದಿಂದ ಪ್ರತಿನಿಧಿಸಿದ್ದಾರೆ. ಇವರಿಗೆ ರಿಯೋ ಒಲಿಂಪಿಕ್ಸ್ ಟೂರ್ನಿಗೆ ಭಾರತ ಹಾಕಿ ತಂಡದ ಉಪನಾಯಕನ ಜವಬ್ದಾರಿ ವಹಿಸಲಾಗಿದೆ. 2012 ರ ಚಾಂಪಿಯನ್ಸ್ ಟ್ರೋಪಿಯಲ್ಲಿ ಭಾರತ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ಪದಕ ಗೆಲ್ಲುವಲ್ಲಿ ಈ ಸುನೀಲ್ ಅವರ ಪಾತ್ರ ಬಹುಮುಖ್ಯವಾಗಿತ್ತು. 2009ರ ಅಜ್ಲಾನ್ ಶಾ ಕಪ್ ಟೂರ್ನಿ ವೇಳೆ ತಂದೆಯ ಸಾವಿನ ಸುದ್ದಿ ಬಂದರು ಅವರು ತಂದೆಯ ಅಂತ್ಯಕ್ರಿಯೆಗೆ ಹೋಗದೆ ದೇಶಕ್ಕಾಗಿ ಆಟ ಆಡಿದ ಮಹಾನ್ ಪ್ರತಿಭಾನ್ವಿತ ಈ ಸುನೀಲ್

 ಡಿಫೆಂಡರ್ ವಿ.ಆರ್ ರಘುನಾಥ್

ಡಿಫೆಂಡರ್ ವಿ.ಆರ್ ರಘುನಾಥ್

27 ಹರೆಯದ ಕೊಡಗಿನ ಹಾಕಿ ಪಟು ವಿ.ಆರ್ ರಘುನಾಥ್(ಚಿತ್ರದಲ್ಲಿ ಎಡಬದಿ) ತಮ್ಮ 17ನೇ ವಯಸ್ಸಿನಲ್ಲಿ ಭಾರತ ಹಾಕಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ಇವರು ತಂಡದ ಬಲಿಷ್ಠ ಡಿಫೆಂಡರ್ ಆಗಿ ಇಂದು ರಿಯೋ ಒಲಿಂಪಿಕ್ ಟೂರ್ನಿಯಲ್ಲಿ ತಮ್ಮ ಕೈಚಳಕ ತೋರಿಸಲು ಸಜ್ಜಾಗಿದ್ದಾರೆ. ರಘುನಾಥ್ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ಭಾರಿಸುವ ಸೂಪರ್ ಸ್ಪೆಷಲಿಸ್ಟ್ ಎಂಬ ಹೆಗ್ಗಳಿಕೆ ಇವರದಾಗಿದೆ.

ಕೊಡಗಿನ ಕಲಿ ನಿಕಿನ್ ತಿಮ್ಮಯ್ಯ

ಕೊಡಗಿನ ಕಲಿ ನಿಕಿನ್ ತಿಮ್ಮಯ್ಯ

ಕರ್ನಾಟಕದ ನಾಲ್ವರು ಹಾಕಿ ಪಟುಗಳಲ್ಲಿ ಒಬ್ಬರಾಗಿರುವ ಇವರು, ಇದೇ ಚೊಚ್ಚಲ ಒಲಿಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ. ತಮ್ಮ ಮೊದಲ ಒಲಿಂಪಿಕ್ಸ್ ನಲ್ಲಿ ಪದಕ ಪಡೆಯುವ ಬಯಕೆ ಇವರದ್ದಾಗಿದೆ.

ಮತ್ತೊಬ್ಬ ಕೊಡಗಿನ ಕುವರ ಎಸ್.ಕೆ ಉತ್ತಪ್ಪ

ಮತ್ತೊಬ್ಬ ಕೊಡಗಿನ ಕುವರ ಎಸ್.ಕೆ ಉತ್ತಪ್ಪ

ಕೊಡಗಿನ ಮೂವರು ಆಟಗಾರರು ಭಾರತ ಹಾಕಿ ತಂಡಕ್ಕೆ ಆಯ್ಕೆಯಾಗಿರುವವರಲ್ಲಿ ಉತ್ತಪ್ಪ ಒಬ್ಬರಾಗಿದ್ದಾರೆ. 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿದ ಅನುಭವ ಹೊಂದಿರುವ ಇವರು ರಿಯೋ ಒಲಿಂಪಿಕ್ಸ್ ನಲ್ಲಿ ತಮ್ಮ ಆಟವನ್ನು ಪ್ರದರ್ಶಿಸಲು ಕಾತುರರಾಗಿದ್ದಾರೆ. 2016ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಬೆಳ್ಳಿ ಪದಕ ಜಯಿಸಿದ ತಂಡದಲ್ಲಿ ಇವರ ಪಾತ್ರವು ಮುಖ್ಯವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meet the athletes from Karnataka who have been qualified to compete in various sports in Rio Olympics 2016.
Please Wait while comments are loading...