ಏಷ್ಯನ್ ಕುಸ್ತಿ: ಭಾರತಕ್ಕೆ ಮೂರು ಬೆಳ್ಳಿ, ಒಂದು ಕಂಚು

Posted By:
Subscribe to Oneindia Kannada

ನವದೆಹಲಿ, ಮೇ 12: ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಶುಕ್ರವಾರ 4 ಪದಕಗಳು ಲಭ್ಯವಾಗಿವೆ. ಒಲಿಂಪಿಕ್ಸ್ ಕಂಚಿನ ವಿಜೇತೆ ಸಾಕ್ಷಿ ಮಲಿಕ್, ದಿವ್ಯಾ ಕಾಕ್ರನ್ ಹಾಗೂ ವಿನೇಶ್ ಫೋಗಟ್, ತಲಾ ಒಂದೊಂದು ಬೆಳ್ಳಿ ಪದಕ ತಂದರೆ, ಭಾರತದ ಮತ್ತೊಬ್ಬ ಕುಸ್ತಿಪಟು ರಿತು ಫೋಗಟ್ ಅವರು ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಸಾಕ್ಷಿ (60 ಕೆಜಿ ವಿಭಾಗ), ದಿವ್ಯಾ ಕಾಕ್ರನ್ (69 ಕೆಜಿ) ಹಾಗೂ ವಿನೇಶ್ ಫೋಗಟ್ (55 ಕೆಜಿ) ತಮ್ಮ ವಿಭಾಗಗಳ ಫೈನಲ್ ಸುತ್ತು ಪ್ರವೇಶಿಸಿದ್ದರು. ಆದರೆ, ಅಂತಿಮ ಸುತ್ತಿನ ಪಂದ್ಯದಲ್ಲಿ ಈ ಮೂವರೂ ಕುಸ್ತಿಪಟುಗಳ ಜಪಾನ್ ಆಟಗಾರ್ತಿಯರ ವಿರುದ್ಧ ಸೋಲು ಕಾಣಬೇಕಾಯಿತು. ಹಾಗಾಗಿ, ಇವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

Asian Wrestling: India gets 4 medals on Friday

ಇನ್ನು, 48 ಕೆಜಿ ವಿಭಾಗದ 3ನೇ ಹಾಗೂ 4ನೇ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ವಾಕ್ ಓವರ್ ಸಿಕ್ಕಿದ್ದರಿಂದಾಗಿ ರಿತು ಫೋಗಟ್ ಅವರಿಗೆ ಕಂಚಿನ ಪದಕ ಲಭ್ಯವಾಯಿತು. ಈ ಪಂದ್ಯದಲ್ಲಿ ಸೆಣಸಬೇಕಿದ್ದ ಚೀನಾದ ಸುನ್ ಯನಾನ್ ಗಾಯಗೊಂಡು ಪಂದ್ಯಕ್ಕೆ ವಿದಾಯ ಹೇಳಿದ ಹಿನ್ನೆಲೆಯಲ್ಲಿ ಈ ಪಂದ್ಯದಲ್ಲಿ ರಿತು ಅವರನ್ನು ಜಯಶಾಲಿಯೆಂದು ಘೋಷಿಸಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Three Indian women wrestlers, including Rio Olympics bronze medallist Sakshi Malik and Vinesh Phogat, settled for a silver medal each in their respective weight categories at the Asian Wrestling Championship on Friday. Ritu Phogat, meanwhile, bagged a bronze medal in women's 48kg category.
Please Wait while comments are loading...