ಏಷ್ಯನ್‌ ಕುಸ್ತಿ: ಬೆಳ್ಳಿಗೆ ತೃಪ್ತಿ ಪಟ್ಟ ಭಾರತದ ಸುಮಿತ್

Posted By:
Subscribe to Oneindia Kannada

ನವದೆಹಲಿ, ಮೇ 15 : ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಷಿಪ್ ನ ಅಂತಿಮ ದಿನವಾದ ಭಾನುವಾರದಂದು ಭಾರತದ ಕುಸ್ತಿಪಟು ಸುಮಿತ್ ಕುಮಾರ್ ಬೆಳ್ಳಿ ಪದಕ ಜಯಿಸಿದ್ದಾರೆ.

ಪುರುಷರ 125ಕೆ.ಜಿ ಫ್ರೀಸ್ಟೈಲ್ ವಿಭಾಗದ ಫೈನಲ್‌ ಪಂದ್ಯದಲ್ಲಿ ಸುಮಿತ್ ಇರಾನ್‌ ನ ಯಡೊಲ್ಲ ಮೊಹಮ್ಮದ ಕಜೆಮ್ ಮೊಹೆಬಿ ಎದುರು 2-6 ಅಂತರದಲ್ಲಿ ಪರಾಭವಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.[ಏಷ್ಯನ್ ಕುಸ್ತಿ: ಭಾರತಕ್ಕೆ ಮತ್ತೊಂದು ಪದಕ ಖಾತ್ರಿ ಪಡಿಸಿದ ಸುಮಿತ್]

Asian Wrestling Championships: Sumit Kumar takes silver on final day

ಈ ಮೂಲಕ ಭಾರತದ ಕುಸ್ತಿಪಟುಗಳು ಈ ಟೂರ್ನಿಯಲ್ಲಿ ಒಟ್ಟು10 ಪದಕಗಳನ್ನು ಗೆದ್ದು ಕೊಂಡಿದ್ದಾರೆ. ಒಂದು ಚಿನ್ನ, ಐದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳು ಭಾರತಕ್ಕೆ ಲಭಿಸಿವೆ. ಬ್ಯಾಂಕಾಕ್‌ ನಲ್ಲಿ ನಡೆದ ಹಿಂದಿನ ಚಾಂಪಿಯನ್ ಷಿಪ್ ನಲ್ಲಿ ಒಂಬತ್ತು ಪದಕ ಜಯಿಸಿತ್ತು.

ಮೊದಲರ್ಧದ ವೇಳೆಗೆ ಸುಮಿತ್ 2-5ರಲ್ಲಿ ಹಿಂದೆ ಇದ್ದರು. ಪಂದ್ಯದ ದ್ವಿತೀಯಾರ್ಧದಲ್ಲಿ ಇರಾನ್‌ನ ಆಟಗಾರ ಒಂದು ಪಾಯಿಂಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ಭಾರತದ ಸುಮಿತ್ ತಿರುಗೇಟು ನೀಡುವಲ್ಲಿ ವಿಫಲರಾದರು.

ಕ್ವಾರ್ಟರ್ ಫೈನಲ್ ನಲ್ಲಿ 6-3ರಲ್ಲಿ ಜಪಾನ್‌ ನ ತೈಕಿ ಯಮ ಮೊಟೊ ಅವರನ್ನು ಮಣಿಸಿದ್ದರು. ಇನ್ನು ಸೆಮಿಫೈನಲ್ ನಲ್ಲಿ 7-2 ಅಂತರದಲ್ಲಿ ತಜಕಿಸ್ತಾನದ ಫರ್ಕೂದ್ ಅನಕುಲೊವ್ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದರು.

ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಇತರ ಕುಸ್ತಿಪಟುಗಳಾದ ಹರ್ಪಲ್, ವಿನೋದ್ ಕುಮಾರ್ ಓಂಪ್ರಕಾಶ್‌ ಮತ್ತು ಸೋಮವೀರ್ ನಿರಾಸೆ ಅನುಭವಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sumit Kumar of India settled for silver in the men's Freestyle 125 kg category on the final day of the Asian Wrestling Championships here on Sunday (May 14).
Please Wait while comments are loading...