ಏಷ್ಯಾನ್ ಕುಸ್ತಿ: ಭಾರತದ ಸಾಕ್ಷಿ ಮಲಿಕ್ ಫೈನಲ್ ಗೆ ಲಗ್ಗೆ

Posted By:
Subscribe to Oneindia Kannada

ನವದೆಹಲಿ, ಮೇ 12 : ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ಜಯಿಸಿದ್ದ ಭಾರತದ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಏಷ್ಯಾನ್ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ 60 ಕೆ.ಜಿ ವಿಭಾಗದ ಸೆಮಿ ಫೈನಲ್ ನಲ್ಲಿ ಖಜಕಿಸ್ತಾನದ ಅಯೊಲೈಮ್ ಕಸಿಮೊವಾ ಅವರನ್ನು ಸಾಕ್ಷಿ 15-3 ಅಂತರದಲ್ಲಿ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟರು. ಫೈನಲ್ ಪಂದ್ಯದಲ್ಲಿ ಸಾಕ್ಷಿ ಒಲಿಂಪಿಕ್ಸ್ ಚಿನ್ನ ವಿಜೇತೆ ಜಪಾನಿನ ಕುಸ್ತಿ ಪಟು ರಿಸಾಕೊ ಕವೈ ಅವರನ್ನು ಎದುರಿಸಲಿದ್ದಾರೆ.[ಏಷ್ಯಾ ಕುಸ್ತಿ: 3 ಬಾರಿ ವಿಫಲರಾಗಿದ್ದ ಸಾಕ್ಷಿ ಮಲಿಕ್ ದಂಪತಿಗೆ ಸ್ಥಾನ]

Asian Wrestling Championships: India's Sakshi Malik enters final

ಕಳೆದ ಮೂರು ಬಾರಿ ಏಷ್ಯಾನ್ ಕುಸ್ತಿ ಚಾಂಪಿಯನ್ ಷಿಪ್ ಗೆ ಅರ್ಹತೆಯಾಗದೆ ಹೊರಗುಳಿದಿದ್ದ ಸಾಕ್ಷಿ ಮಲಿಕ್ ಈ ಬಾರಿಯ ಏಷ್ಯಾನ್ ಕುಸ್ತಿ ಚಾಂಪಿಯನ್ ಷಿಪ್ ಗೆ ಅರ್ಹತೆ ಪಡೆದು ಈ ಸಾಧನೆ ಮಾಡಿದ್ದರೆ.

ಏಷ್ಯಾನ್ ಕುಸ್ತಿ ಚಾಂಪಿಯನ್ ಷಿಪ್ ಅರ್ಹತೆ ಪಂದ್ಯದಲ್ಲಿ ಸಾಕ್ಷಿ ಅವರು ರಾಷ್ಟ್ರೀಯ ಚಾಂಪಿಯನ್ ಮಂಜು ಕುಮಾರಿ ಅವರನ್ನು 10-3 ಅಂತರದಲ್ಲಿ ಮಣಿಸಿ 2017 ಏಪ್ಯಾನ್ ಕುಸ್ತಿ ಚಾಂಪಿಯನ್ ಷಿಪ್ ಗೆ ಅರ್ಹತೆ ಪಡೆದಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rio Olympic Games bronze medallist Sakshi Malik assured herself of a silver medal in the ongoing Asian Wrestling Championships after the grappler entered the finals of the 60 kg weight category here on Friday (May 12).
Please Wait while comments are loading...