ಏಷ್ಯನ್ ಕುಸ್ತಿ: ಭಾರತಕ್ಕೆ ಚಿನ್ನ ತಂದುಕೊಟ್ಟ ಬಜರಂಗ್ ಪೂನಿಯಾ

Posted By:
Subscribe to Oneindia Kannada

ನವದೆಹಲಿ, ಮೇ 14 : ಪುರುಷರ ಏಷ್ಯನ್ ಕುಸ್ತಿ ಚಾಂಪಿಯನ್ ಷಿಪ್ ನಲ್ಲಿ ಶನಿವಾರ ಬಜರಂಗ್ ಪೂನಿಯಾ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇನ್ನು ಮಹಿಳೆಯರ 58ಕೆ.ಜಿ ವಿಭಾಗದಲ್ಲಿ ಭಾರತದ ಸರಿತಾಗೆ ಬೆಳ್ಳಿ ಲಭಿಸಿದೆ.

ಪುರುಷರ 65ಕೆ.ಜಿ ಫ್ರೀಸ್ಟೈಲ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಬಜರಂಗ್ 6-2 ಅಂತರದಲ್ಲಿ ಕೊರಿಯಾದ ಸೆವುಂಗ್ ಚಲ್ ಲೀ ಅವರನ್ನು ಮಣಿಸುವ ಮೂಲಕ ಚಿನ್ನಕ್ಕೆ ಕೊರಳೊಡ್ಡಿದರು.[ಏಷ್ಯನ್ ಕುಸ್ತಿ: ಭಾರತಕ್ಕೆ ಮೂರು ಬೆಳ್ಳಿ, ಒಂದು ಕಂಚು]

Asian Wrestling Championships: Bajrang Punia wins gold medal, Sarita settles for silver

ಸೆಮಿಫೈನಲ್ ನಲ್ಲಿ ಬಜರಂಗ್ 3-2 ರಲ್ಲಿ ಕುಕವಾಂಗ್ ಕಿಮ್ ಎದುರು ಪ್ರಯಾಸದ ಗೆಲುವು ದಾಖಲಿಸಿ ಫೈನಲ್ ತಲುಪಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿದ್ದ ಬಜರಂಗ್ 7-5ರಲ್ಲಿ ಹಿಂದಿನ ಏಷ್ಯನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಜಯಿಸಿದ್ದ ಇರಾನ್‌ನ ಸಾಸಿರಿ ಮೈಸಮ್ ಅವರನ್ನು ಮಣಿಸಿದ್ದರು.

ಪೂನಿಯಾ ತಮ್ಮ ಅರ್ಹತಾ ಸುತ್ತಿನಲ್ಲಿ 4-3ರಲ್ಲಿ ಉಜ್ಬೇಕಿಸ್ತಾನದ ಕುಸ್ತಿಪಟು ಸಿರೊಜಿದ್ದೀನ್ ಹಸನೊವ್ ಅವರನ್ನು ಸೋಲಿಸಿದ್ದರು.

ಸರಿತಾಗೆ ಬೆಳ್ಳಿ: ಮಹಿಳೆಯರ 58ಕೆ.ಜಿ ವಿಭಾಗದ ಫೈನಲ್‌ನಲ್ಲಿ ಸರಿತಾ 0-6ರಲ್ಲಿ ಕಿರ್ಗಿಸ್ತಾನದ ಅಸುಲು ತನೆಬೆಕೊವಾ ಎದುರು ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟರು.

ಸರಿತಾ ಟೂರ್ನಿಗೂ ಮೊದಲು ಎರಡು ಕೆ.ಜಿ ತೂಕ ಕಳೆದುಕೊಂಡಿದ್ದರು. ಆದ್ದರಿಂದ ಸಾಕ್ಷಿ ಮಲಿಕ್ (60ಕೆ.ಜಿ) ಹಾಗೂ ಸರಿತಾ ತಮ್ಮ ವಿಭಾಗಗಳಲ್ಲಿ ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದ್ದರು.

ಸೆಮಿಫೈನಲ್ ನಲ್ಲಿ ಅವರು 12-0 ರಲ್ಲಿ ವಿಯೆಟ್ನಾಮ್‌ನ ಹುವಾಂಗ್ ಡುಯೊ ಎದುರು ಗೆದ್ದು ಚಿನ್ನದ ಪದಕದ ಸುತ್ತಿಗೆ ಲಗ್ಗೆಯಿಟ್ಟಿದ್ದರು.

ಕ್ವಾರ್ಟರ್ ಫೈನಲ್‌ನಲ್ಲಿ ಸರಿತಾ 10-0ರಲ್ಲಿ ಉಜ್ಬೇಕಿಸ್ತಾನದ ಅಸೆಮ್ ಸೆಡ ಮೆಟೋವಾ ಎದುರು ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bajrang Punia gave India it's first gold medal as he registered a come-from-behind victory over Seungchul Lee of Korea in men's 65kg freestyle on the penultimate day of the Asian Wrestling Championship here on Saturday (May 13).
Please Wait while comments are loading...