ಏಷ್ಯನ್ ಕುಸ್ತಿ: ಭಾರತಕ್ಕೆ ಮತ್ತೊಂದು ಪದಕ ಖಾತ್ರಿ ಪಡಿಸಿದ ಸುಮಿತ್

Posted By:
Subscribe to Oneindia Kannada

ನವದೆಹಲಿ, ಮೇ 04 : ಇಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ಸ್ ಷಿಪ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸುವುದು ಖಾತ್ರಿಯಾಗಿದೆ.

ಪುರುಷರ 125ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಭಾರತದ ಕುಸ್ತಿಪಟು ಸುಮಿತ್ ಭಾನುವಾರ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ನಲ್ಲಿ ತಜಕಿಸ್ತಾನದ ಫರ್ಖೋದ್ ಅನಾಕುಲೋವ್ ಅವರನ್ನು ಸುಮಿತ್ 7-2 ಅಂತರದಲ್ಲಿ ಮಣಿಸಿ ಪೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಬೆಳ್ಳಿ ಇಲ್ಲ ಬಂಗಾರದ ಪದಕ ಖಚಿತ ಪಡಿಸಿದ್ದಾರೆ.[ಏಷ್ಯನ್ ಕುಸ್ತಿ: ಭಾರತಕ್ಕೆ ಚಿನ್ನ ತಂದುಕೊಟ್ಟ ಬಜರಂಗ್ ಪೂನಿಯಾ]

Asian Wrestling Champions: Sumit enters final, assures India another medal

ಸುಮಿತ್ ಕ್ವಾರ್ಟರ್ ಫೈನಲ್ ನಲ್ಲಿ ಜಪಾನಿನ ತೈಕಿ ಯಮಾಮೊಟೊ ವಿರುದ್ಧ 6-3ರಲ್ಲಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.

ಮತ್ತೊಂದಡೆ ಭಾರತದ ಕುಸ್ತಿ ಪಟುಗಳಾದ ಸೋಮ್ ದೇವ್( 86 ಕೆ.ಜಿ) ಮತ್ತು ವಿನೋದ್ ಕುಮಾರ್ ಓಂಪ್ರಕಾಶ್ (70 ಕೆ,ಜೆ) ಫ್ರೀಸ್ಟೈಲ್‌ ವಿಭಾಗದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರ ಬಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India's Sumit cruised into the gold medal round of men's 125kg Freestyle on the final day of the Asian Wrestling Championship here on Sunday (May 14).
Please Wait while comments are loading...