ಚಾಂಪಿಯನ್ಸ್ ಟ್ರೋಫಿ ಹಾಕಿ: ಪಾಕಿಸ್ತಾನವನ್ನು ಸದೆಬಡಿದ ಭಾರತ

Written By: Ramesh
Subscribe to Oneindia Kannada

ಕೌಂಟಾನ್, ಅಕ್ಟೋಬರ್.24: ವಿಕೆಂಡ್ ನಲ್ಲಿ ಕ್ರೀಡಾಭಿಮಾನಿಗಳು ಭರ್ಜರಿ ಮಜಾ ಉಡಾಹಿಸಿದರು. ಶನಿವಾರ ಕಬಡ್ಡಿಯಲ್ಲಿ ಭಾರತಕ್ಕೆ ವಿಶ್ವಕಪ್ ಲಭಿಸಿದರೇ, ಭಾನುವಾರ ಹಾಕಿಯಲ್ಲಿ ಪಾಕಿಸ್ತಾನವನ್ನು 3-2 ಅಂತರದಿಂದ ಸೋಲಿಸಿದೆ. ಮತ್ತೊಂದೆಡೆ ಭಾರತ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಕಿವೀಸ್ ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದೆ. ಈ ಮೂರು ಕ್ರೀಡೆಗಳಲ್ಲಿ ಭಾರತ ವಿಜಯ ಪತಾಕೆ ಹಾರಿಸಿ ಅಭಿಮಾನಿಗಳಿಗೆಸಕತ್ ವಿಕೆಂಡ್ ಮಜಾ ನೀಡಿತು.

ಕೌಂಟಾನ್ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೌಂಡ್‌ ರಾಬಿನ್‌ ಲೀಗ್‌ ಪಂದ್ಯದಲ್ಲಿ ಪಿ.ಆರ್‌. ಶ್ರೀಜೇಶ್ ಬಳಗ 3-2 ಗೋಲುಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಪರಾಭವಗೊಳಿಸಿದೆ. ಈ ಮೂಲಕ ಭಾರತ ಆಡಿದ ಮೂರು ಪಂದ್ಯಗಳಲ್ಲಿ 7 ಅಂಕಗಳನ್ನು ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

Hockey

ಹಾಲಿ ಚಾಂಪಿಯನ್‌ ಪಾಕಿಸ್ತಾನ ತಂಡ ಶುರುವಿನಲ್ಲೇ ಎರಡು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಸೃಷ್ಟಿಸಿ ಕೊಂಡಿತ್ತು. ಆದರೆ ಭಾರತದ ಗೋಲ್ ಕೀಪರ್‌ ಶ್ರೀಜೇಶ್‌ ಅವರ ಕಣ್ತಪ್ಪಿಸಿ ಚೆಂಡನ್ನು ಗುರಿ ಮುಟ್ಟಿಸಲು ಈ ತಂಡದ ಆಟಗಾರರಿಗೆ ಸಾಧ್ಯವಾಗಲಿಲ್ಲ.

ತಲ್ವಿಂದರ್ ಸಿಂಗ್‌, ಬೀರೇಂದ್ರ ಲಾಕ್ರಾ ಮತ್ತು ಜಸ್‌ಜೀತ್‌ ಸಿಂಗ್‌ ಕುಲಾರ ಅವರು ಪರಸ್ಪರ ಚೆಂಡನ್ನು ವರ್ಗಾಯಿಸುತ್ತಾ ಎದುರಾಳಿ ತಂಡದ ರಕ್ಷಣಾ ಕೋಟೆಯನ್ನು ಭೇದಿಸುವ ಪ್ರಯತ್ನ ನಡೆಸಿದರೂ ಫಲ ಸಿಗಲಿಲ್ಲ. ಹೀಗಾಗಿ ಮೊದಲ ಕ್ವಾರ್ಟರ್‌ ಗೋಲು ರಹಿತವಾಗಿ ಅಂತ್ಯ ಕಂಡಿತು.

ಎರಡನೇ ಕ್ವಾರ್ಟರ್‌ನಲ್ಲಿ ಪಾಕಿಸ್ತಾನದ ಆಟಗಾರರು ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದರೆ, ಶ್ರೀಜೇಶ್ ಬಳಗ ಆಕ್ರಮಣ ಮುಂದುವರಿಸಿತು. ಇದರ ಫಲವಾಗಿ 22ನೇ ನಿಮಿಷದಲ್ಲಿ ತಂಡಕ್ಕೆ ಮೊದಲ ಯಶಸ್ಸು ಲಭಿಸಿತು.

1-0 ಗೋಲಿನ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋದ ಶ್ರೀಜೇಶ್ ಪಡೆ ಮೂರನೇ ಕ್ವಾರ್ಟರ್ ನಲ್ಲೂ ಛಲದ ಹೋರಾಟ ನಡೆಸಿತು. ಉತ್ತರಾರ್ಧದಲ್ಲಿ ಭಿನ್ನ ರಣತಂತ್ರದೊಂದಿಗೆ ಕಣಕ್ಕಿಳಿದಿದ್ದ ಪಾಕ್‌ ತಂಡ ಮೊದಲ (31ನೇ) ನಿಮಿಷದಲ್ಲೇ ಖಾತೆ ತೆರೆದು 1-1ರಲ್ಲಿ ಸಮಬಲ ಮಾಡಿಕೊಂಡಿತು.

ಇದರಿಂದ ಭಾರತದ ಆಟಗಾರರು ಹತಾಶರಾಗಲಿಲ್ಲ. ಗುಣಮಟ್ಟದ ಆಟ ಮುಂದುವರಿಸಿದ ತಂಡ 43ನೇ ನಿಮಿಷದಲ್ಲಿ 2-2ರಲ್ಲಿ ಸಮಬಲ ಮಾಡಿಕೊಂಡಿತು.

ರಮಣದೀಪ್ ಸಿಂಗ್‌ ಅವರು ಭಾರತ ಪರ 3ನೇ ಗೋಲು ಬಾರಿಸಿ ತಂಡದ ಅಂಕವನ್ನು 3-2 ಅಂತರವನ್ನು ಹೆಚ್ಚಿದರು. ಕೊನೆಗಳಿಗೆ ಪಾಕ್ ಸಮಬಲ ಸಾಧಿಸಲು ಹರಸಾಹಸ ಪಟ್ಟರು ಕೊನೆಗೆ ಗಳಿಗೆಯಲ್ಲಿ 3-2 ಅಂತರದಿಂದ ಭಾರತಕ್ಕೆ ಶರಣಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India produced a superb comeback to defeat Pakistan 3-2 in their third round robin match at the Asian Champions Trophy hockey tournament here on Sunday (October 23).
Please Wait while comments are loading...