ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಥ್ಲೆಟಿಕ್ಸ್ : ಚೀನಾದ ಅಧಿಪತ್ಯಕ್ಕೆ ಅಂತ್ಯ ಹಾಡಿದ ಭಾರತ

By Mahesh

ಭುವನೇಶ್ವರ್, ಜುಲೈ 10: 22ನೇ ಏಷ್ಯನ್‌ ಅಥ್ಲೆಟಿಕ್ ಚಾಂಪಿಯನ್ ಶಿಪ್‌ ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಅಂತಿಮ ದಿನ ಐದು ಚಿನ್ನದ ಪದಕ ಗಳಿಸಿ, ಒಟ್ಟು 12 ಬಂಗಾರ ಗೆದ್ದು, ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೇ ಮೊದಲ ಬಾರಿಗೆ ಈ ಸಾಧನೆ ಮಾಡಿರುವ ಭಾರತ, ಈ ಮೂಲಕ ಚೀನಾದ ಅಧಿಪತ್ಯಕ್ಕೆ ಅಂತ್ಯ ಹಾಡಿದೆ.

ಏಷ್ಯನ್ ಅಥ್ಲೆಟಿಕ್ಸ್ ಗೆ ಕೊನೆಗೂ ಕನ್ನಡಿಗ ವಿಕಾಸ್ ಗೌಡಗೆ ಸಿಕ್ತು ಚಾನ್ಸ್ಏಷ್ಯನ್ ಅಥ್ಲೆಟಿಕ್ಸ್ ಗೆ ಕೊನೆಗೂ ಕನ್ನಡಿಗ ವಿಕಾಸ್ ಗೌಡಗೆ ಸಿಕ್ತು ಚಾನ್ಸ್

ಅತಿಥೇಯ ಭಾರತ ಒಟ್ಟು 29 ಪದಕಗಳನ್ನು ಗಳಿಸಿದೆ. ಈ ಹಿಂದೆ 1985ರಲ್ಲಿ 10 ಚಿನ್ನ, ಐದು ಬೆಳ್ಳಿ ಮತ್ತು ಏಳು ಕಂಚು ಗಳಿಸಿದ್ದೇ ಭಾರತದ ಇಲ್ಲಿವರೆಗಿನ ಉತ್ತಮ ಸಾಧನೆಯಾಗಿತ್ತು. ಆದರೆ, ಈ ಬಾರಿ ಭಾರತದ ಅಥ್ಲೀಟ್ ಗಳು 12 ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

Asian Athletics Championships: India finish on top in medals tally

ಕೊನೆಯ ದಿನ ಮೂರು ಚಿನ್ನ ಗಳಿಸಿದ ಚೀನಾ (ಒಟ್ಟು 8 ಚಿನ್ನ, 7 ಬೆಳ್ಳಿ. 5 ಕಂಚು) ಎರಡನೇ ಸ್ಥಾನ ಗಳಿಸಿದೆ. ಕಜಕಸ್ತಾನ 4 ಚಿನ್ನ, 5 ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ ಮೂರನೇ ಸ್ಥಾನದಲ್ಲಿದೆ.

ಅಂತಿಮ ದಿನದಂದು 800 ಮೀಟರ್ ಫೈನಲ್ ನಲ್ಲಿ ಭಾರತದ ಅಥ್ಲೀಟ್ ಅರ್ಚನಾ ಯಾದವ್ ಅವರಿಗೆ ಸ್ವಲ್ಪದರಲ್ಲೇ ಚಿನ್ನದ ಪದಕ ಕೈತಪ್ಪಿತು. ಶ್ರೀಲಂಕಾದ ನಿಮಾಲಿ ವಲಿವರ್ಷ ಅವರನ್ನು ಅಂತಿಮ ಸುತ್ತಿನಲ್ಲಿ ತಳ್ಳಿದ ಆರೋಪದ ಮೇಲೆ ಅರ್ಚನಾಗೆ ಸಿಕ್ಕ ಪದಕವನ್ನು ಹಿಂಪಡೆಯಲಾಯಿತು.

ಕೊನೆಯಲ್ಲಿ 4‍X400 ಮೀಟರ್ ಫೈನಲ್ ನಲ್ಲಿ ಭಾರತದ ಮಹಿಳಾ ತಂಡ ರೋಚಕ ಜಯ ದಾಖಲಿಸಿತು. ಮೂರನೇಯವರಾಗಿ ಓಡಿದ ಕರ್ನಾಟಕದ ಪೂವಮ್ಮ ಉತ್ತಮ ಅಂತರ ಕಾಯ್ದುಕೊಂಡರು. 3:31.34 ಸಮಯ ತೆಗೆದುಕೊಂಡು ಓಟ ಮುಕ್ತಾಯಗೊಳಿಸಿದ ತಂಡ ಜಯದ ಓಟ ಓಡಿತು.(ಐಎಎನ್ಎಸ್)

Story first published: Wednesday, January 3, 2018, 10:16 [IST]
Other articles published on Jan 3, 2018
Read in English: AAC: India top medals tally
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X