ಏಷ್ಯಾಕಪ್‌ ಹಾಕಿ: ಗೆಲುವಿನ ನಾಗಾಲೋಟ ಮುಂದುವರೆಸಿದ ಭಾರತ

Posted By:
Subscribe to Oneindia Kannada

ಢಾಕಾ, ಅಕ್ಟೋಬರ್ , 19: 10ನೇ ಪುರುಷರ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಏಷ್ಯಾಕಪ್‌ ಹಾಕಿ : ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಗುರುವಾರ ನಡೆದ 'ಎ' ವಿಭಾಗದ ಪಂದ್ಯದಲ್ಲಿ ಭಾರತ ತಂಡ ಮಲೇಷ್ಯಾ ವಿರುದ್ಧ 6-2 ಅಂತರ ಗೋಲುಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ ತನ್ನ ಫೈನಲ್ ಹಾದಿಯನ್ನು ಸುಲಭ ಮಾಡಿಕೊಂಡಿತು.

Asia cup hockey, India beat Malaysia 6-2

ಭಾರತಪರ ಆಕಾಶ್ ದೀಪ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಉತ್ತಪ್ಪ, ಗುರುಜಂತ್ ಸಿಂಗ್, ಎಸ್.ವಿ ಸುನೀಲ್ ಹಾಗೂ ಸರ್ಧಾರ್ ಸಿಂಗ್ ತಲಾ ಒಂದೊಂದು ಗೋಲು ಬಾರಿಸಿ ತಂಡದ ಗೆಲುವಿಗೆ ಪಾತ್ರರಾದರು.

ಭಾರತ ತನ್ನ ಮೊದಲ ಪಂದ್ಯದಲ್ಲಿ ಜಪಾನ್ ವಿರುದ್ಧ 5-1ರಿಂದ ಗೆಲುವು ಸಾಧಿಸಿತ್ತು. ಬಳಿಕ ಬಾಂಗ್ಲಾದೇಶವನ್ನು 0-7 ಅಂತರದಲ್ಲಿ, ಪಾಕಿಸ್ತಾನವನ್ನು ಭಾರತ 3-1 ಗೋಲುಗಳಿಂದ ಮಣಿಸಿತ್ತು. ಇದೀಗ ಮಲೇಷ್ಯಾ ತಂಡವನ್ನು ಸೋಲಿಸಿರುವ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Asia cup hockey: India jumped to top of the Super 4s standings with a comprehensive 6-2 victory over Malaysia in their second match of the stage on Oct 19th.
Please Wait while comments are loading...