ಅರ್ಜುನ ಪ್ರಶಸ್ತಿ ವಿಜೇತನ ಮೇಲೆ ಅತ್ಯಾಚಾರದ ಆರೋಪ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 04: ರಾಷ್ಟ್ರೀಯ ಮಟ್ಟದ ಮಹಿಳಾ ಶೂಟರ್‌ ಮೇಲೆ ಆಕೆಯ ಆಪ್ತ ಗೆಳೆಯ, ತರಬೇತುದಾರ, ಅರ್ಜುನ ಪ್ರಶಸ್ತಿ ವಿಜೇತ ಶೂಟರ್ ರೊಬ್ಬರು ಅತ್ಯಾಚಾರ ಎಸಗಿದ್ದಾರೆ. ಆರೋಪಿ ಶೂಟರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಚಾಣಕ್ಯಪುರಿ ಪೊಲೀಸರು, ಎಫ್ಐಆರ್ ಹಾಕಿದ್ದಾರೆ.

ಕಳೆದ ಎರಡು ವರ್ಷಗಳ ಕಾಲ ನಿರಂತರ ಅತ್ಯಾಚಾರಕ್ಕೆ ಒಳಗಾಗಿದ್ದೇನೆ. ನನಗೆ ಮತ್ತೇರಿಸುವ ಔಷಧಿ ನೀಡಿ, ನನ್ನ ಮೇಲೆ ರೇಪ್ ಮಾಡಿದ್ದಾರೆ ಎಂದು ಮಹಿಳಾ ಶೂಟರ್ ಆರೋಪಿಸಿದ್ದಾರೆ.

Arjuna awardee Shooter Coach booked on rape charge

ಮಹಿಳೆಯ ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ಮಹಿಳಾ ಶೂಟರ್‌ ಮೇಲೆ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ. ನಂತರ ಆರೋಪಿ ವಿರುದ್ಧ ಎಫ್ ಐಆರ್ ಹಾಕಲಾಗಿದೆ.

ರಾಷ್ಟ್ರೀಯ ಚಾಂಪಿಯನ್‌ ಶಿಪ್‌ಗಾಗಿ ಸಂತ್ರಸ್ತೆ ಮಹಿಳೆ ಆರೋಪಿ ಬಳಿ ತರಬೇತಿ ಪಡೆದುಕೊಳ್ಳುತ್ತಿದ್ದಳು. ಆತ ಒಲಿಂಪಿಯನ್, ಆರ್ಜುನ ಪ್ರಶಸ್ತಿ ವಿಜೇತ ಶೂಟರ್ ಆಗಿರುವುದರಿಂದ ವೃತ್ತಿಗೆ ಸಂಬಂಧಿಸಿದಂತೆ ಇಬ್ಬರು ಚರ್ಚಿಸುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಕೊನೆಗೆ ಪ್ರೀತಿಗೆ ತಿರುಗಿತ್ತು. ಬಳಿಕ ಆತ, ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಇಬ್ಬರು ದೈಹಿಕ ಸಂಬಂಧ ಹೊಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Arjuna awardee shooter has been booked on rape charge following a complaint of a fellow sportsperson, police said today.
Please Wait while comments are loading...