ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ

Posted By:
Subscribe to Oneindia Kannada

ನ್ಯೂಜೆರ್ಸಿ, ಜೂನ್ 27: ಅರ್ಜೆಂಟೀನಾದ ಸೂಪರ್ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅವರು ಸೋಮವಾರ(ಜೂನ್ 27) ಬೆಳಗ್ಗೆ ತಮ್ಮ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದನ್ನು ನೀಡಿದ್ದಾರೆ. ಕೋಪಾ ಅಮೆರಿಕಾ 2016 ಫೈನಲ್ ನಲ್ಲಿ ಸೋಲುಂಡ ನೋವಿನಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಸೋಮವಾರ ಬೆಳಗ್ಗೆ ನಡೆದ ಕೋಪಾ ಅಮೆರಿಕಾ 2016 ಅಂತಿಮ ಹಣಾಹಣಿಯಲ್ಲಿ ಚಿಲಿ ವಿರುದ್ಧ ಅರ್ಜೆಂಟೀನಾ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ 4-2 ಅಂತರದಿಂದ ಸೋಲು ಕಂಡಿದೆ. [ಪಂದ್ಯದ ವರದಿ ಓದಿ]

ಗಾಯದ ಮೇಲೆ ಬರೆ ಎಳೆದಂತೆ ಜಗದೇಕ ವೀರ, ಹತ್ತು ಹಲವು ಪ್ರಶಸ್ತಿ ಗೆದ್ದಿರುವ ಚಾಂಪಿಯನ್ ಆಟಗಾರ ಮೆಸ್ಸಿ ಅವರು ಪೆನಾಲ್ಟಿ ಮಿಸ್ ಮಾಡಿದ್ದು ಅಭಿಮಾನಿಗಳಿಗೆ ಇನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಈ ನೋವಿಗೆ ಇನ್ನೊಂದು ಪೆಟ್ಟು ಕೊಟ್ಟಂತೆ ಈಗ ವಿದಾಯದ ಸುದ್ದಿ ಅಪ್ಪಳಿಸಿದೆ. [ಮೆಸ್ಸಿ ಪಾಪಚ್ಚಿಗೆ ಹಿಂಗ್ ಮಾಡ್ಬಾರ್ದಿತ್ತು]

Lionel Messi retires from international football after Copa America final loss

ಅರ್ಜೆಂಟೀನಾ ತಂಡದ ಪರ ಇನ್ಮುಂದೆ 10ನೇ ನಂಬರ್ ಜರ್ಸಿ ತೊಟ್ಟು ಮೆಸ್ಸಿ ಅವರು ಮೈದಾನಕ್ಕೆ ಇಳಿಯುವುದಿಲ್ಲ. [ರೊನಾಲ್ಡೊ ಹಿಂದಿಕ್ಕಿ ಬ್ಯಾಲನ್ ಡಿ'ಓರ್ ಗೆದ್ದ ಮೆಸ್ಸಿ]

ಆದರೆ, ಐದು ಬಾರಿ ವಿಶ್ವ ಚಾಂಪಿಯನ್ ಮೆಸ್ಸಿ ಅವರು ಸ್ಪೇನಿನ ಬಾರ್ಸಿಲೋನಾ ಕ್ಲಬ್ ಪರ ಆಟ ಮುಂದುವರೆಸಲಿದ್ದಾರೆ.[ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳು]

ಅರ್ಜೆಂಟೀನಾ 23 ವರ್ಷಗಳ ನಂತರ ಜಾಗತಿಕವಾಗಿ ಕಪ್ ಎತ್ತುವ ಕನಸು ಇನ್ನೂ ನನಸಾಗಿಲ್ಲ. 2014ರ ವಿಶ್ವಕಪ್ ನಲ್ಲಿ ಜರ್ಮನಿ ವಿರುದ್ಧ, 2015 ಹಾಗೂ 2016ರ ಕೋಪಾ ಅಮೆರಿಕಾದಲ್ಲಿ ಚಿಲಿ ವಿರುದ್ಧ ಅರ್ಜೆಂಟೀನಾ ಸೋಲು ಕಂಡಿದೆ. ನೈತಿಕ ಹೊಣೆ ಹೊತ್ತು ಮೆಸ್ಸಿ ಅವರು ವಿದಾಯದ ಆಘಾತಕಾರಿ ನಿರ್ಣಯ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Argentina's superstar Lionel Messi today (June 27) announced his retirement from international football after losing the Copa America 2016 final to Chile.
Please Wait while comments are loading...