ರಿಯೋ 2016: ಬಿಲ್ಲುಗಾರಿಕೆಯಲ್ಲಿ ಅತನು ದಾಸ್ ಕ್ವಾರ್ಟರ್ ಫೈನಲಿಗೆ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 10: ರಿಯೋ ಒಲಿಂಪಿಕ್ಸ್ ನಲ್ಲಿ ಪದಕ ಜಯಿಸುವ ಭರವಸೆ ಮೂಡಿಸಿದ್ದ ಭಾರತದ ಆಟಗಾರರ ಕಳಪೆ ಪ್ರದರ್ಶನ ಮುಂದುವರೆದಿದ್ದರೆ, ಆರ್ಚರಿ (ಬಿಲ್ಲುಗಾರಿಕೆ) ವೈಯಕ್ತಿಕ ವಿಭಾಗದಲ್ಲಿ ಭಾರತದ ಬಿಲ್ಲುಗಾರ ಅತನು ದಾಸ್ ತಮ್ಮ ಗೆಲುವನ್ನು ಮುಂದುವರಿಸಿ ಕ್ವಾರ್ಟರ್​ಫೈನಲ್​ಗೆ ಪ್ರವೇಶ ಮಾಡಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಮಂಗಳವಾರ (ಅ.09) ರಂದು ನಡೆದ ಆರ್ಚರಿ (ಬಿಲ್ಲುಗಾರಿಕೆ) ವೈಯಕ್ತಿಕ ವಿಭಾಗದ ಪಂದ್ಯದಲ್ಲಿ ಅತನು ಮೊದಲನೇ ಪಂದ್ಯದಲ್ಲಿ ನೇಪಾಳದ ಜಿತ್ ಬಹದ್ದೂರ್ ಮುಕ್ತಾನ್​ರನ್ನು 6-0 ಅಂತರದಿಂದ ಸುಲಭವಾಗಿ ಸೋಲಿಸಿದ್ದರು.

Rio 2016: Unheralded Atanu Das enters men's archery quarterfinals

ಇನ್ನು 32ರ ಘಟ್ಟದ ಎರಡನೇ ಪಂದ್ಯದಲ್ಲಿ ದಾಸ್ 6-4ರಿಂದ ಕ್ಯೂಬಾದ ಆಡ್ರಿಯನ್ ಪ್ಯುಂಟೇಸ್ ಪರೇಜ್​ರನ್ನು ಮಣಿಸಿ ಶುಭಾರಂಭ ಮಾಡುವ ಮೂಲಕ ಕ್ವಾರ್ಟರ್ ಫೈನಲ್ ಎಂಟ್ರಿಕೊಟ್ಟಿದ್ದಾರೆ.

ಶುಕ್ರವಾರ (ಅ.12) ನಡೆಯಲಿರುವ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಹಿಂದೆ ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿದ್ದ ದಕ್ಷಿಣ ಕೊರಿಯಾದ ಆಟಗಾರ ಲೀ ಸಿಯುಂಗ್ ಯುನ್​ರನ್ನು ಎದುರಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Talented archer Atanu Das provided a silver lining on a disappointing day for the Indians by entering the quarter-finals of the Individual Recurve event at the Rio Olympics, here today (Aug 9).
Please Wait while comments are loading...