ಅನುರಾಗ್ ಠಾಕೂರ್ ಈಗ ಹಿಮಾಚಲದ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ

Posted By:
Subscribe to Oneindia Kannada

ಶಿಮ್ಲಾ, ಜನವರಿ 22: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮಾಜಿ ಅಧ್ಯಕ್ಷ ಅನುರಾಗ್ ಠಾಕೂರ್ ಅವರು ಹಿಮಾಚಲ ಪ್ರದೇಶ ಒಲಿಂಪಿಕ್ ಸಂಸ್ಥೆ (ಎಚ್​ಪಿಒಎ) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾದರು.

ಎಚ್​ಪಿಒಎ ವಾರ್ಷಿಕ ಮಹಾಸಭೆಯಲ್ಲಿ ಅನುರಾಗ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಬಿಸಿಸಿಐನಲ್ಲಿ ನ್ಯಾ. ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿ ಮಾಡಲು ಸಾಧ್ಯವಾಗದ ಕಾರಣಕ್ಕೆ ಅಲ್ಲಿ ಅಧ್ಯಕ್ಷ ಪದವಿ ಕಳೆದುಕೊಂಡಿದ್ದರು. ಈಗ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷರಾಗಿದ್ದಾರೆ.

Anurag Thakur appointed as HOPA President

ಹಿಮಾಚಲ ಪ್ರದೇಶದ ಸಂಸದರೂ ಆಗಿರುವ ಅನುರಾಗ್ ಠಾಕೂರ್ ಅವರು, ಈ ಬಗ್ಗೆ ಸಂತಸ ವ್ಯಕ್ತಪಡಿಸಿ, ಎಲ್ಲಾ ಬಗೆಯ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುವುದು ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಬಿಸಿಸಿಐ ಅಧ್ಯಕ್ಷ ಪದವಿ ಕಳೆದುಕೊಂಡಿದ್ದ ಅನುರಾಗ್ ಠಾಕೂರ್​ಅವರು ಈಗ ಎಚ್ ಪಿಒಎ ಅಧ್ಯಕ್ಷರಾಗಿ ಮಾತನಡಿ, 'ಗುಣಮಟ್ಟದ ಕ್ರೀಡೆಗೆ ಉತ್ತೇಜನ ನೀಡಬೇಕು. ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ಕ್ರೀಡೆಯೂ ಗುಣಮಟ್ಟ ಕಾಯ್ದುಕೊಂಡಿಲ್ಲ. ಕ್ರೀಡಾಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು' ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former -BCCI chief Anurag Thakur who was ousted as from the post following a Supreme Court order, has been unanimously elected head of the Himachal Pradesh Olympic Association (HPOA) for a four-year term
Please Wait while comments are loading...