ಕಬಡ್ಡಿಯಿಂದ ವಿರಮಿಸುವ ಯೋಚನೆಯೇ ಇಲ್ಲ :ಅನೂಪ್ ಕುಮಾರ್

Written By: Ramesh
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್. 18 : ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕಬಡ್ಡಿಗೆ ನಿವೃತ್ತಿ ಹೇಳಲಿದ್ದಾರೆಂಬ ವದಂತಿಯನ್ನು ಭಾರತ ಕಬಡ್ಡಿ ತಂಡದ ನಾಯಕ ಅನೂಪ್ ಕುಮಾರ್ ತಳ್ಳಿ ಹಾಕಿದ್ದಾರೆ.

ಅನೂಪ್ ಪ್ರೋ ಕಬಡ್ಡಿ ಬಿಟ್ಟು ಉಳಿದ ಎಲ್ಲಾ ಮಾದರಿಯ ಕಬಡ್ಡಿಗೆ ವಿದಾಯ ಹೇಳುತ್ತಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಹಬ್ಬಿತ್ತು. ಈ ಬಗ್ಗೆ ಸೋಮವಾರ (ಅಕ್ಟೋಬರ್. 18) ಸುದ್ದಿಗಾರರೊಂದಿಗೆ ಮಾತನಾಡಿರುವ 32 ಹರೆಯದ ಅನೂಪ್ ಅಂತಾರಾಷ್ಟ್ರೀಯ ಕಬಡ್ಡಿಯಿಂದ ನಿವೃತ್ತಿ ಹೊಂದುವ ಯೋಚನೆಯೇ ಇಲ್ಲ ಎಂದು ಹೇಳುವ ಮೂಲಕ ಹಬ್ಬಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

Anup Kumar

"ಒಂದಲ್ಲ ಒಂದು ದಿನ ಪ್ರತಿಯೋಬ್ಬ ಆಟಗಾರನು ನಿವೃತ್ತಿಯಾಗುತ್ತಾನೆಂದು ಹೇಳಿದ್ದೆ. ಆದರೆ ಇದನ್ನು ತಪ್ಪಾಗಿ ಅರ್ಥೈಹಿಸಿಕೊಂಡಿದ್ದರಿಂದ ಈ ವದಂತಿ ಹಬ್ಬಿದೆ" ಎಂದು ಅನೂಪ್ ಕುಮಾರ್ ಸ್ಪಷ್ಟಪಡಿಸಿದರು.

ಸಂವಹನದ ಕೊರತೆಯಿಂದಾಗಿ ಈ ತರಹದ ಸುಳ್ಳು ಸುದ್ದಿ ಹಬ್ಬಿದ್ದು. ನಾನು ಇನ್ನು ಫಿಟ್ ಆಗಿದ್ದೇನೆ ನಾನೇಕೆ ನಿವೃತ್ತಿಯಾಗಬೇಕು. ಸಧ್ಯಕ್ಕೆ ಅಂತಾರಾಷ್ಟ್ರೀಯ ಕಬಡ್ಡಿಯಿಂದ ನಿವೃತ್ತಿಯಾಗುವ ಯೋಚನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಭವಿಷ್ಯದ ಬಗ್ಗೆ ಹೆಚ್ಚು ಏನು ಹೇಳಲು ಬಯಸುವುದಿಲ್ಲ 2016 ರ ವಿಶ್ವಕಪ್ ಗೆಲ್ಲುವುದು ನನ್ನ ಮುಂದಿನ ಗುರಿಯಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian kabaddi team captain Anup Kumar on Monday (Oct 17) trashed media reports about his imminent retirement from the international arena after the World Cup, currently underway at the TransStadia here.
Please Wait while comments are loading...