ಇಟ್ಟಮಡುವಿನಲ್ಲಿ ಬಾಡ್ಮಿಂಟನ್ ಪ್ರೀಮಿಯರ್ ಲೀಗ್ ಆರಂಭ

Posted By:
Subscribe to Oneindia Kannada

ಬೆಂಗಳೂರು, ಮೇ 27: ಅನಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಪ್ರೀಮಿಯರ್ ಬ್ಯಾಡ್ಮಿಂಟನ್ ಅಕಾಡೆಮಿ ಸೇರಿ ಆಯೋಜಿಸಿರುವ ಆರ್. ವಿ. ಶೆಲ್ಟರ್ಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್- 2016 (ಐಪಿಎಲ್ ಮಾದರಿಯಲ್ಲಿ) ಪಂದ್ಯಾವಳಿಗಳನ್ನು ಶುಕ್ರವಾರ ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್. ಅಶೋಕ್ ಅವರು ಉದ್ಘಾಟನೆ ಮಾಡಿದರು.

ಈ ಟೂರ್ನಿಯಲ್ಲಿ 10 ಪ್ರಾಂಚೈಸಿಗಳು ಭಾಗವಹಿಸಲಿವೆ, 150 ಆಟಗಾರರು ಭಾಗವಹಿಸುವರು. ಬೆಳಗ್ಗೆ 9:30 ರಿಂದ ರಾತ್ರಿ 10 ಗಂಟೆಯವರಿಗೆ ನಡೆಯಲಿವೆ.

ಈ ಟೂರ್ನಿ ಉದ್ಘಾಟನಾ ಸಮಾರಂಭದಲ್ಲಿ ವೆಂಕಟೇಶ್ (ಸಂಗಾತಿ), ಬಿಬಿಎಂಪಿ ಸದಸ್ಯರು, ರಮೇಶ್ ಬಾಬು, ಆರ್.ವಿ. ಶಲ್ಟರ್ಸ್ ಮಾಲೀಕರು,ಡಾ. ಚೆನ್ನಕೇಶವ ಗೌಡ, ಡಿ.ಜೆ. ಪ್ರೇರಣ ಆಸ್ಪತ್ರೆ ಮಾಲಿಕರು, ಮಂಜುನಾಥ್, ಬಿಜೆಪಿ ಮುಖಂಡರು,

ANI’s Sports Club Badminton Premier League - 2016, season 1

10 ಫ್ರಾಂಚೈಸಿಗಳು ಭಾಗವಹಿಸಲಿವೆ. ವಿವರಗಳು:
* ಅನೀಸ್ ಅಟ್ಯಾಕರ್ಸ್ - ಅನಿಲ್ ಕುಮಾರ್
* ಅಕಿಲೆಶ್ ಸ್ಟೋರ್ಟ್ಸ್ ಸೆಂಟ್ರಲ್- ಉಮೇಶ್,
* ಎನ್. ಲಿವೆನ್. ಫೈಟರ್ಸ್ - ಶಿವಕುಮಾರ್,
* ಯಂಗ್ ಒನ್ಸ್ - ಗಿರಿಬಾಬು
* ಸಿಲ್ಕ್ ಸಿಟಿ ಸ್ಮ್ಯಾಮರ್ಸ್ - ರಾಮನಗರ ರಘು
* ಡಿ-ಎಬಿಎಸ್ ಚಾಲೆಂಜರ್ಸ್ - ದೀಪಕ್
* ಮಲೆನಾಡು ಪೈಟರ್ಸ್ - ಶಿವಮೊಗ್ಗ ಪ್ರದೀಪ್
* ಮಮತ ಕನ್ಸ್ ಟ್ರೆಕ್ಷನ್ - ದೊರೆಬಾಬು
* ಜೆ.ವಿ. ಪೈಟರ್ಸ್- ವರಪ್ರಸಾದ್
* ಎಫ್.ಟಿ.ಎಸ್.ಎ. ವಾರಿಯರ್ಸ್ - ನರೇಂದ್ರ

ಇಟ್ಟಮಡುವಿನಲ್ಲಿ ಬಾಡ್ಮಿಂಟನ್ ಪ್ರೀಮಿಯರ್ ಲೀಗ್ ಆರಂಭ

ಇಟ್ಟಮಡುವಿನಲ್ಲಿ ಬಾಡ್ಮಿಂಟನ್ ಪ್ರೀಮಿಯರ್ ಲೀಗ್ ಆರಂಭ

-
-
-
-
-

ಗ್ರಾಮೀಣ ಪ್ರತಿಭೆಗಳನ್ನು ಮೇಲೆತ್ತುವುದು ಪಂದ್ಯಾವಳಿಯ ಮುಖ್ಯ ಉದ್ದೇಶವಾಗಿದ್ದು, ಪ್ರಸ್ತುತ ಮೊದಲ ಹಂತದ ಪಂದ್ಯಾವಳಿ ನಡೆಸಲಾಗುತ್ತಿದೆ. ಒಂದು ಪ್ರಮುಖ ತಂಡ, 2 ಮಧ್ಯಂತರ ಪುರುಷರ ತಂಡ, 35 ರಿಂದ 45ರ ನಡುವಿನ ಪುರುಷರ ತಂಡ, ಮಹಿಳೆಯರ ತಂಡ ಮತ್ತು ಮಿಕ್ಸ್ ಡ್ ಡಬಲ್ಸ್ ವಿಭಾಗಗಳಲ್ಲಿತಂಡಗಳು ಭಾಗವಹಿಸುತ್ತಿವೆ.

ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರು ಒಂದೇ ಮೈದಾನದಲ್ಲಿ ಆಡುತ್ತಾರೆ. ಗ್ರಾಮೀಣ ಆಟಗಾರರಿಗೆ ಈ ಶ್ರೇಷ್ಠ ಆಟಗಾರರ ಜೊತೆ ಬೆರೆಯುವ ಆವಕಾಶ ಸಿಗುತ್ತದೆ 29ರವರೆಗೆ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್- 2016 ನಡಸಲು ಉದ್ದೇಶಿಸಲಾಗಿದೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
First RV SHELTERS Badminton Premier League 2016 – Season 1, unique and first of its kind, which will be held in Ani’s Sports Club, Ittamadu, Bangalore on 21stMay and Between 27th May to 29th May 2016.
Please Wait while comments are loading...