ಟೆನಿಸ್ ಸಿಂಗಲ್ಸ್: ವಿಶ್ವ ನಂ.1 ಸ್ಥಾನಕ್ಕೇರಿದ ಆಂಡಿ ಮರ್ರೆ!

Written By: Ramesh
Subscribe to Oneindia Kannada

ಪ್ಯಾರಿಸ್‌, ನವೆಂಬರ್.06 : ಸ್ಕಾಟ್ ಟೆನಿಸ್ ತಾರೆ ಆಂಡಿ ಮರ್ರೆ ವಿಶ್ವ ಪುರುಷರ ಸಿಂಗಲ್ಸ್ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಆಗಿ ಹೊರ ಹೊಮ್ಮಿದ್ದಾರೆ. ಪ್ಯಾರಿಸ್‌ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್‌ ಪ್ರವೇ​ಶಿ​ಸುವ ಮೂಲಕ ಮರ್ರೆ ಈ ಸಾಧನೆ ಮಾಡಿದರು.

ಪ್ಯಾರಿಸ್‌ ಮಾಸ್ಟರ್ಸ್ ಫೈನಲ್ ಪ್ರವೇಶಿಸುವ ಮೂಲಕ ಅಗ್ರಸ್ಥಾನದಲ್ಲಿದ್ದ ನೊವಾಕ್ ಜೊಕೊ​ವಿಚ್ ಅವರನ್ನು ಹಿಂದಿಕ್ಕಿಅಗ್ರಸ್ಥಾನಕ್ಕೇರಿದ ಮೊದಲ ಬ್ರಿಟಿಷ್ ಆಟಗಾರ ಮರ್ರೆ ಎನಿಸಿಕೊಂಡರು. ಮೂರು ಗ್ಯ್ರಾನ್ ಸ್ಲಾಮ್ ಹಾಗೂ ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ 29 ವರ್ಷದ ಮರ್ರೆ ವರ್ಲ್ಡ್ ನಂ.1 ಸ್ಥಾನಕ್ಕೇರಿದ್ದಾರೆ. [ಚಿತ್ರಗಳಲ್ಲಿ : ಮರ್ರೆ, ಸೆರೆನಾ ವಿಂಬಲ್ಡನ್ ಚಾಂಪಿಯನ್ಸ್]

Andy Murray becomes first British to top ATP rankings

ಹಾಲಿ ಟೂರ್ನಿ​ಯಲ್ಲಿ ನೊವಾಕ್ ಅವ​ರನ್ನು ಹಿಂದಿಕ್ಕಿ ಅಗ್ರ​ಸ್ಥಾ​ನ​ಕ್ಕೇ​ರ​ಬೇ​ಕಾ​ದರೆ ಮರ್ರೆ, ಸೆಮಿ​ಫೈ​ನಲ್‌ ಪಂದ್ಯ​ದಲ್ಲಿ ಕೆನಡಾದ ಮಿಲೊಸ್ ರೊವೊ​ನಿ​ಕ್ ಅವ​ರನ್ನು ಮಣಿಸಿ ಫೈನಲ್‌ ಪ್ರವೇ​ಶಿ​ಸ​ಬೇ​ಕಿತ್ತು.

ಆದರೆ ಪಂದ್ಯ​ಕ್ಕೂ ಮುನ್ನವೇ ಗಾಯದ ಸಮ​ಸ್ಯೆ​ಯಿಂದಾಗಿ ಮಿಲೊಸ್ ರೊವೊ​ನಿಕ್ ಅವರು ಪಂದ್ಯ​ದಿಂದ ಹಿಂದೆ ಸರಿ​ದರು. ಹೀಗಾಗಿ, ಮರ್ರೆ ಅನಾ​ಯಾ​ಸ​ವಾಗಿ ಫೈನಲ್‌ ಪ್ರವೇ​ಶಿ​ಸಿ​ದ್ದ​ಲ್ಲದೆ, ವಿಶ್ವ ಶ್ರೇಯಾಂಕದಲ್ಲಿ ನಂಬ​ರ್ ​ಒನ್ ಸ್ಥಾನಕ್ಕೆ ಲಗ್ಗೆ​ಯಿ​ಟ್ಟರು.

ಮರ್ರೆ ಆಡಿದ ಒಟ್ಟು 73 ಪಂದ್ಯಗಳಪೈಕಿ 12 ಟೂರ್ನಿ​ಗ​ಳಲ್ಲಿ 11 ಪಂದ್ಯಗಳಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Andy Murray another achievement to rank alongside his three Grand Slam wins and two Olympic gold medals, but it's also the first time a British man has topped the ATP world rankings since they were launched 43 years ago.
Please Wait while comments are loading...