ಚಿತ್ರಗಳಲ್ಲಿ : ಮರ್ರೆ, ಸೆರೆನಾ ವಿಂಬಲ್ಡನ್ ಚಾಂಪಿಯನ್ಸ್

Posted By:
Subscribe to Oneindia Kannada

ಲಂಡನ್, ಜುಲೈ 10 : ಸ್ಕಾಟ್ ಟೆನಿಸ್ ತಾರೆ, ವಿಶ್ವದ ನಂ.2 ಆಟಗಾರ ಆಂಡಿ ಮರ್ರೆ ಮತ್ತೊಮ್ಮೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕೆನಡಾದ ಮಿಲೋಸ್ ರಾವೊನಿಕ್​ರನ್ನು ನೇರ ಸೆಟ್​ಗಳಲ್ಲಿ ಮಣಿಸಿದ್ದಾರೆ.

ಫೆಡರರ್ ಮಣಿಸಿದ್ದ ರಾವೊನಿಕ್ ಅವರು ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಫೈನಲ್​ಹಂತ ತಲುಪಿದ್ದೇ ಸಾಧನೆ.

ಮರ್ರೆ ಅವರ ಅನುಭವದ ಮುಂದೆ ರಾವೊನಿಕ್ ಆಟ ನಡೆಯಲಿಲ್ಲ. ಮರ್ರೆ ಅವರು ವೃತ್ತಿಜೀವನದ ಮೂರನೇ ಹಾಗೂ 2013ರ ಬಳಿಕ ಮತ್ತೊಮ್ಮೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್​ನ ಸೆಂಟರ್ ಕೋರ್ಟ್​ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 29 ವರ್ಷದ ಮರ್ರೆ ಅವರು 6-4, 7-6 (7), 7-6 (7) ರಿಂದ ರಾವೊನಿಕ್​ರನ್ನು ಸೋಲಿಸಿದರು. 2 ಗಂಟೆ 47 ನಿಮಿಷಗಳ ಕಾಲ ನಡೆದ ಆಟದಲ್ಲಿ ಮರ್ರೆ ಅವರು ಸ್ವಲ್ಪ ಶ್ರಮ ವಹಿಸಿ ಕಪ್ ಎತ್ತಿದರು. ವಿಂಬಲ್ಡನ್ ಪ್ರಶಸ್ತಿ ವಿಜೇತರ ಫೋಟೋಗಳನ್ನು ಮುಂದೆ ನೋಡಿ...

ವಿಂಬಲ್ಡನ್ ಗೆ ಎರಡನೇ ಬಾರಿ ಮುತ್ತಿಟ್ಟ ಮರ್ರೆ

ವಿಂಬಲ್ಡನ್ ಗೆ ಎರಡನೇ ಬಾರಿ ಮುತ್ತಿಟ್ಟ ಮರ್ರೆ

ಸ್ಕಾಟ್ ಟೆನಿಸ್ ತಾರೆ, ವಿಶ್ವದ ನಂ.2 ಆಟಗಾರ ಆಂಡಿ ಮರ್ರೆ ಮತ್ತೊಮ್ಮೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

ಸೆರೆನಾ ವಿಲಿಯಮ್ಸ್ ಮತ್ತೊಮ್ಮೆ ಚಾಂಪಿಯನ್

ಸೆರೆನಾ ವಿಲಿಯಮ್ಸ್ ಮತ್ತೊಮ್ಮೆ ಚಾಂಪಿಯನ್

ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಅಂತಿಮ ಹಣಾಹಣಿಯಲ್ಲಿ ಜರ್ಮನಿಯ ಏಂಜಲಿಕ್ ಕರ್ಬರ್ ಅವರನ್ನು ಸೋಲಿಸುವ ಮೂಲಕ ವೃತ್ತಿ ಬದುಕಿನ 22 ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಸ್ಟೆಫಿ ಗ್ರಾಫ್ ದಾಖಲೆ ಮುರಿದ ಸೆರೆನಾ

ಸ್ಟೆಫಿ ಗ್ರಾಫ್ ದಾಖಲೆ ಮುರಿದ ಸೆರೆನಾ

ಈ ಮೂಲಕ 7ನೇ ವಿಂಬಲ್ಡನ್ ಗೆದ್ದ ಸೆರೆನಾ ಅವರು, ಸ್ಟೆಫಿ ಗ್ರಾಫ್ ಅವರ 22 ಗ್ರ್ಯಾನ್ ಸ್ಲಾಮ್ ದಾಖಲೆಯಲ್ಲಿ ಸರಿಗಟ್ಟಿದರು.

ಫೈನಲ್ ಪಂದ್ಯದಲ್ಲಿ ಸೆರೆನಾ

ಫೈನಲ್ ಪಂದ್ಯದಲ್ಲಿ ಸೆರೆನಾ

ಫೈನಲ್ ಪಂದ್ಯದಲ್ಲಿ ಸೆರೆನಾ ಅವರು ಏಂಜಲಿಕ್ ವಿರುದ್ಧ 7-5,6-3 ಸೆಟ್ ಗಳ ಅಂತರದಲ್ಲಿ ಜಯ ದಾಖಲಿಸಿದರು.

ರನ್ನರ್ ​ಅಪ್ ಕರ್ಬರ್

ರನ್ನರ್ ​ಅಪ್ ಕರ್ಬರ್

ರನ್ನರ್ ​ಅಪ್ ಕರ್ಬರ್ 8.69 ಕೋಟಿ ರು. (1 ಮಿಲಿಯನ್ ಪೌಂಡ್) ಬಹುಮಾನ ಪಡೆದುಕೊಂಡರು.

ಸೆರೆನಾಗೆ ಡಬ್ಬಲ್ ಥ್ರಿಲ್

ಸೆರೆನಾಗೆ ಡಬ್ಬಲ್ ಥ್ರಿಲ್

ಸಿಂಗಲ್ಸ್ ಗೆದ್ದ ಐದು ಗಂಟೆ ಅಂತರದಲ್ಲೇ ಡಬಲ್ಸ್ ಪ್ರಶಸ್ತಿಯನ್ನು ಸೆರೆನಾ ಗೆದ್ದುಕೊಂಡಿದ್ದಾರೆ. ಸೋದರಿ ವೀನಸ್ ವಿಲಿಯಮ್ಸ್ ಜತೆಗೂಡಿ 14 ನೇ ಗ್ರ್ಯಾನ್ ಸ್ಲಾಮ್ ಬಾಚಿದ್ದಾರೆ.

ಮರ್ರೆ ಅವರಿಗೆ ವೃತ್ತಿಜೀವನದ ಮೂರನೇ ಗ್ರ್ಯಾನ್ ಸ್ಲಾಮ್

ಮರ್ರೆ ಅವರಿಗೆ ವೃತ್ತಿಜೀವನದ ಮೂರನೇ ಗ್ರ್ಯಾನ್ ಸ್ಲಾಮ್

ಮರ್ರೆ ಅವರು ವೃತ್ತಿಜೀವನದ ಮೂರನೇ ಹಾಗೂ 2013ರ ಬಳಿಕ ಮತ್ತೊಮ್ಮೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

ರಾವೊನಿಕ್​ರನ್ನು ಸೋಲಿಸಿದರು

ರಾವೊನಿಕ್​ರನ್ನು ಸೋಲಿಸಿದರು

ಆಲ್ ಇಂಗ್ಲೆಂಡ್ ಕ್ಲಬ್​ನ ಸೆಂಟರ್ ಕೋರ್ಟ್​ನಲ್ಲಿಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ 29 ವರ್ಷದ ಮರ್ರೆ ಅವರು 6-4, 7-6 (7), 7-6 (7) ರಿಂದ ರಾವೊನಿಕ್​ರನ್ನು ಸೋಲಿಸಿದರು.

ಗ್ರ್ಯಾನ್ ಸ್ಲಾಮ್ ಫೈನಲ್​ಹಂತ ತಲುಪಿದ್ದ ರೊವೊನಿಕ್

ಗ್ರ್ಯಾನ್ ಸ್ಲಾಮ್ ಫೈನಲ್​ಹಂತ ತಲುಪಿದ್ದ ರೊವೊನಿಕ್

ಫೆಡರರ್ ಮಣಿಸಿದ್ದ ರಾವೊನಿಕ್ ಅವರು ಇದೇ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್ ಫೈನಲ್​ಹಂತ ತಲುಪಿದ್ದೇ ಸಾಧನೆ.

ಯುವ ವಿಂಬಲ್ಡನ್ ಪ್ರಶಸ್ತಿ ಡೆನಿಸ್ ಪಾಲು

ಯುವ ವಿಂಬಲ್ಡನ್ ಪ್ರಶಸ್ತಿ ಡೆನಿಸ್ ಪಾಲು

ಡೆನಿಸ್ ಶಾಪೊವಲೊವ್ ಅವರು ಬಾಯ್ಸ್ ವಿಂಬಲ್ಡನ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಫೈನಲ್ ನಲ್ಲಿ ಅಲೆಕ್ಸ್ ಡಿ ಮಿನಾರ್ ಅವರನ್ನು ಸೋಲಿಸಿದರು.

ಬಾಯ್ಸ್ ವಿಂಬಲ್ಡನ್ ಪ್ರಶಸ್ತಿ ವಿಜೇತರು

ಬಾಯ್ಸ್ ವಿಂಬಲ್ಡನ್ ಪ್ರಶಸ್ತಿ ವಿಜೇತರು

ಬಾಯ್ಸ್ ವಿಂಬಲ್ಡನ್ ಪ್ರಶಸ್ತಿ ವಿಜೇತ ಕೆನಡಾದ ಡೆನಿಸ್ ಶಾಪೊವಲೊವ್ ಹಾಗೂ ರನ್ನರ್ ಅಪ್ ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನಾರ್

 ಆಹಾ ಎಂಥಾ ಆ ಕ್ಷಣ, ಮರ್ರೆ ಪತ್ನಿ

ಆಹಾ ಎಂಥಾ ಆ ಕ್ಷಣ, ಮರ್ರೆ ಪತ್ನಿ

ಆಹಾ ಎಂಥಾ ಆ ಕ್ಷಣ, ಮರ್ರೆ ಪತ್ನಿ ಕಿಮ್ ಸೀಯರ್ಸ್ ಅವರು ಮರ್ರೆ ಗೆಲುವಿನ ಕ್ಷಣಕ್ಕಾಗಿ ಕಾತುರದಿಂದ ನೋಡುತ್ತಿದ್ದಾರೆ.

ಮಿಶ್ರ ಡಬಲ್ಸ್ ಪ್ರಶಸ್ತಿ ವಿಜೇತರು

ಮಿಶ್ರ ಡಬಲ್ಸ್ ಪ್ರಶಸ್ತಿ ವಿಜೇತರು

ಬಲಗಡೆ ಬ್ರಿಟನ್ನಿನ ಹೀಥರ್ ವಾಟ್ಸನ್ ಹಾಗೂ ಫಿನ್ಲೆಂಡ್ ನ ಹೆನ್ರಿ ಕೊಂಟಿನೆನ್ ಅವರು ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಡಬಲ್ಸ್ ಪ್ರಶಸ್ತಿ ವಿಜೇತರು

ಡಬಲ್ಸ್ ಪ್ರಶಸ್ತಿ ವಿಜೇತರು

ಬಲಗಡೆ ಫ್ರಾನ್ಸಿನ ನಿಕೊಲಾಸ್ ಮಹೂತ್ ಹಾಗೂ ಎಡಗಡೆ ಪಿಯರ್ ಹ್ಯೂಸ್ ಹರ್ಬಟ್ ಡಬಲ್ಸ್ ಪ್ರಶಸ್ತಿ ವಿಜೇತರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Scot tennis star Andy Murray beat Canadian Milos Raonic in straight sets to clinch his second Wimbledon men's singles title here on Sunday(July 10).
Please Wait while comments are loading...