ಅಥ್ಲೆಟಿಕ್ಸ್ ನಲ್ಲಿ ತನ್ನ ದಾಖಲೆ ತಾನೇ ಮುರಿದ ಕೇರಳ ಅಥ್ಲೀಟ್

Posted By:
Subscribe to Oneindia Kannada

ನವದೆಹಲಿ, ಮೇ 16: ಕೇರಳದ ಓಟಗಾರ್ತಿ ಮುಹಮ್ಮದ್ ಅನಾಸ್ ಅವರು, ಇಲ್ಲಿ ನಡೆಯುತ್ತಿರುವ ಮೂರನೇ ಆವೃತ್ತಿಯ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ ಅಥ್ಲೆಟಿಕ್ಸ್ ಮೀಟ್ ನಲ್ಲಿ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿಯುವ ಮೂಲಕ ಈ ಬಾರಿಯ ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

ಮಂಗಳವಾರ ನಡೆದ ಪುರುಷರ 400 ಮೀ. ವಿಭಾಗದ ಸ್ಪರ್ಧೆಯಲ್ಲಿ ನಿಗದಿತ ದೂರವನ್ನು 45.32 ಸೆಕೆಂಡ್ ಗಳಲ್ಲಿ ಕ್ರಮಿಸಿದ ಅವರು, ಕಳೆದ ವರ್ಷ ಪೋಲೆಂಡ್ ನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 45.40 ಸೆಕೆಂಡ್ ಗಳಲ್ಲಿ ಕ್ರಮಿಸುವ ಮೂಲಕ ಸೃಷ್ಟಿಸಿದ್ದ ದಾಖಲೆಯನ್ನು ಮುರಿದರು.

Anas sets a new National mark breaking his own record

ವಿಶ್ವ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಅವರು, 45.50 ಸೆಕೆಂಡ್ ಗಳಲ್ಲಿ ಗುರಿ ಕ್ರಮಿಸಬೇಕಿತ್ತು. ಆದರೆ, ಅದಕ್ಕಿಂತಲೂ ಉತ್ತಮ ರೀತಿಯ ಪ್ರದರ್ಶನವನ್ನು 22 ವರ್ಷದ ಮೊಹಮ್ಮದ್ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muhammed Anas qualified for the World Championship in style by breaking his own National record with a time of 45.32 seconds in the men’s 400 metres in the third Indian Grand Prix athletics meet at the Nehru Stadium here on Monday.
Please Wait while comments are loading...