ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ದಾರುಣ್ ರಿಯೋಗೆ ಅರ್ಹತೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮೂಡಬಿದಿರೆ, ಜುಲೈ 25: ಆಳ್ವಾಸ್ ಕಾಲೇಜಿನ ಹೆಮ್ಮೆಯ ಕ್ರೀಡಾಪಟು ದಾರುಣ್ ಅಯ್ಯಸ್ವಾಮಿ ಆಗಸ್ಟ್ 5 ರಿಂದ ಆರಂಭಗೊಳ್ಳಲಿರುವ ರಿಯೋ ಒಲಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ.

ಮೂಲತಃ ತಮಿಳುನಾಡಿನ ತಿರುಪುರ್ ಜಿಲ್ಲೆಯವರಾದ ದಾರುಣ್ ಅವರು 4X 400 ಮೀಟರ್ ರಿಲೇಯಲ್ಲಿ ಸ್ಪರ್ಧಿಸಲು ಭಾರತ ತಂಡವನ್ನು ಪ್ರತಿನಿಧಿಸಲಿರುವ ಆರು ಆಟಗಾರರ ಪೈಕಿ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಕ್ರೀಡಾಪಟು. ಇವರು ಪ್ರಸ್ತುತ ಆಳ್ವಾಸ್‌ನ ಬಿಹೆಚ್ಆರ್ ಡಿ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದು ಆಳ್ವಾಸ್‌ನ ಕ್ರೀಡಾ ದತ್ತು ಯೋಜನೆಯಡಿ ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.[ರಿಯೋ ಒಲಿಂಪಿಕ್ಸ್ ವಿಶೇಷ ಪುಟ 2016]

20ವರ್ಷದ ಪ್ರಾಯದ ದಾರುಣ ರಿಲೇಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಆಟಗಾರರ ಪೈಕಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಇವರು ಇತ್ತೀಚಿಗೆ ಗುಹಾವಾಟಿಯಲ್ಲಿ ನಡೆದ ಏಷಿಯನ್ ಗೇಮ್ಸ್‌ನಲ್ಲಿ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು.[ಶಾಟ್‌ಪುಟ್‌ ಪಟು ಇಂದ್ರಜಿತ್‌ ಡೋಪಿಂಗ್ ಟೆಸ್ಟ್ ನಲ್ಲಿ ಫೇಲ್]

ಅಲ್ಲದೆ ಕಳೆದ ವರ್ಷ ಅಖಿಲ ಭಾರತ ಅಥ್ಲೆಟಿಕ್ಸ್ 400 ಮೀಟರ್ ಓಟದಲ್ಲಿ ಚಿನ್ನ , ಹರ್ಡಲ್ಸ್‌ನಲ್ಲಿ ಕೂಡಾ ದಾಖಲೆ ಮತ್ತು ಚಿನ್ನ ಗೆದ್ದು ದಾಖಲೆಯನ್ನು ಬರೆದಿದ್ದಾರೆ.

400 ಮೀಟರ್ ಓಟವನ್ನು 46.31 ಸೆಕೆಂಡ್ಸ್‌ನಲ್ಲಿ ಗುರಿ

400 ಮೀಟರ್ ಓಟವನ್ನು 46.31 ಸೆಕೆಂಡ್ಸ್‌ನಲ್ಲಿ ಗುರಿ

400 ಮೀಟರ್ ಓಟವನ್ನು 46.31 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿರುವುದು ದಾರುಣ ಅವರ ಜೀವನ ಶ್ರೇಷ್ಟ ಸಾಧನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಂಟು ಬಾರಿ ಬೇರೆ ಬೇರೆ ಪದಕಗಳನ್ನು ಗಳಿಸಿ ದೇಶಕ್ಕೆ ಕೀರ್ತಿ ತಂದ ಹೆಗ್ಗಳಿಕೆ ಇವರದ್ದು.

ಆಳ್ವಾಸ್ ನಿಂದ 1ಲಕ್ಷ ರೂ. ಪುರಸ್ಕಾರ

ಆಳ್ವಾಸ್ ನಿಂದ 1ಲಕ್ಷ ರೂ. ಪುರಸ್ಕಾರ

ಆಳ್ವಾಸ್ ನಿಂದ 1ಲಕ್ಷ ರೂ. ಪುರಸ್ಕಾರ: ರಿಯೋ ಒಲಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ದಾರುಣ್ ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವತಿಯಿಂದ ಒಂದು ಲಕ್ಷ ನಗದು ಪುರಸ್ಕಾರವನ್ನು ಡಾ. ಎಂ. ಮೋಹನ್ ಆಳ್ವ ನೀಡಿದ್ದಾರೆ. ಅಲ್ಲದೆ ತರಬೇತಿಗಾಗಿ ಪ್ರತಿ ತಿಂಗಳು ಸುಮಾರು ರೂ. 20 ಸಾವಿರ ಸಂಸ್ಥೆ ಖರ್ಚು ಮಾಡಿದೆ.

ಆಳ್ವಾಸ್ ಸಂಸ್ಥೆಗೆ ಕೀರ್ತಿ ಬರಲಿದೆ.

ಆಳ್ವಾಸ್ ಸಂಸ್ಥೆಗೆ ಕೀರ್ತಿ ಬರಲಿದೆ.

ದಾರುಣ್ ಜತೆಗೆ ಸಂಸ್ಥೆಯ ಪ್ರಾಯೋಜಿತ ವಿದ್ಯಾರ್ಥಿ ಇಂದ್ರಜಿತ್ , ಹಳೇ ವಿದ್ಯಾರ್ಥಿಗಳಾದ ಪೂವಮ್ಮ ಮತ್ತು ಅಶ್ವಿನಿ ಅಕ್ಕುಂಜೆ ಕೂಡಾ ಈ ಬಾರಿಯ ಒಲಂಪಿಕ್ಸ್‌ನಲ್ಲಿ ಭಾಗವಹಿಸಲಿದ್ದು ಇವರ ಉತ್ತಮ ನಿರ್ವಹಣೆಯಿಂದ ದೇಶಕ್ಕೆ ಹಾಗೂ ಆಳ್ವಾಸ್ ಸಂಸ್ಥೆಗೆ ಕೀರ್ತಿ ಬರಲಿದೆ.

ಮೂಡಬಿದಿರೆಯ ಏಕಲವ್ಯ ಕ್ರೀಡಾ ಸಂಸ್ಥೆ

ಮೂಡಬಿದಿರೆಯ ಏಕಲವ್ಯ ಕ್ರೀಡಾ ಸಂಸ್ಥೆ

ಮೂಡಬಿದಿರೆಯಲ್ಲಿ ಏಕಲವ್ಯ ಕ್ರೀಡಾ ಸಂಸ್ಥೆಯನ್ನು ಹುಟ್ಟು ಹಾಕಿ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾಗಲೇ ಭವಿಷ್ಯದಲ್ಲಿ ಒಲಂಪಿಕ್‌ನಲ್ಲಿ ಕ್ರೀಡಾಪಟುಗಳು ಭಾಗವಹಿಸುವ ಕನಸು ಕಂಡಿದ್ದೆ ಎಂದು ಡಾ. ಎಂ ಮೋಹನ್ ಆಳ್ವ ಹರ್ಷ ವ್ಯಕ್ತ ಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dharun Ayyaswamy, a lad from a small village near Aviniashi in Tamil Nadu is all set to represent India in Rio Olympics, scheduled to be held from August 5 in the 4×400 mts relay. Dharun Ayyaswamy is B A (human resources) student of Alvas institution, Mangaluru.
Please Wait while comments are loading...