ಸೀನಿಯರ್ ಬಾಲ್ ಬಾಡ್ಮಿಂಟನ್ ಲೀಗ್ ಗೆದ್ದ ಆಳ್ವಾಸ್

Posted By:
Subscribe to Oneindia Kannada

ಮೈಸೂರು, ಡಿ. 26: ಕರ್ನಾಟಕ ಬಾಲ್ ಬಾಡ್ಮಿಂಟನ್ ಸಂಸ್ಥೆ ಹಾಗೂ ಮಹಾರಾಜ ಬಾಲ್ ಬಾಡ್ಮಿಂಟನ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡಿದ್ದ ಬಾಲ್ ಬಾಡ್ಮಿಂಟನ್ ಲೀಗ್ ಚಾಂಪಿಯನ್ ಶಿಪ್ ಮೈಸೂರಿನಲ್ಲಿ ಮುಕ್ತಾಯಗೊಂಡಿದೆ.

ರಾಜ್ಯ ಸೀನಿಯರ್ ಬಾಲ್ ಬಾಡ್ಮಿಂಟನ್ ಲೀಗ್ ಚಾಂಪಿಯನ್ ಶಿಪ್ ಮಹಿಳೆಯರ ವಿಭಾಗದಲ್ಲಿ ಮೂಡಬಿದ್ರೆ ಆಳ್ವಾಸ್ ತಂಡ 9ನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಆಳ್ವಾಸ್ ‘ಬಿ' ತಂಡ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. [ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ವನಿತೆಯರಿಗೆ ಫೆಡರೇಷನ್ ಕಪ್]

Alvas College Win State-level Senior Ball Badminton Tourney

ಫೈನಲ್ ನಲ್ಲಿ ಆಳ್ವಾಸ್ ‘ಎ' ತಂಡ ಆಳ್ವಾಸ್ ‘ಬಿ' ತಂಡವನ್ನು 35-24, 35-21 ಹಾಗೂ 35-28 ನೇರ ಸೆಟ್ ಗಳಿಂದ ಸೋಲಿಸಿತ್ತು. ಸೆಮಿಫೈನಲ್ ನಲ್ಲಿ ಆಳ್ವಾಸ್ ‘ಎ' ತಂಡ ಜಯ ಸ್ಪೋರ್ಟ್ಸ್ ಕ್ಲಬ್ ಬೆಂಗಳೂರು ತಂಡವನ್ನು ಹಾಗೂ ಆಳ್ವಾಸ್ ‘ಬಿ' ತಂಡ ತುಮಕೂರಿನ ಎಸ್.ಬಿ.ಬಿ.ಸಿ ತಂಡವನ್ನು ಸೋಲಿಸಿ ಫೈನಲ್ಸ್ ತಲುಪಿತ್ತು. ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡ ತೃತೀಯ ಸ್ಥಾನವನ್ನು ಗಳಿಸಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Alvas College, Moodibidre Win State-level Senior Ball Badminton Tourney in women category. Alvas A team beat Alvas B team in the final held at Mysuru.
Please Wait while comments are loading...