ಎಎಫ್ ಸಿ ಕಪ್‌: ಬೆಂಗ್ಳೂರು ತಂಡಕ್ಕೆ ನಿರಾಸೆ, ಏರ್‌ಫೋರ್ಸ್‌ ಗೆ ಕಪ್‌

Written By: Ramesh
Subscribe to Oneindia Kannada

ದೋಹಾ,ಕತಾರ್. ನವೆಂಬರ್. 06 : ಏಷ್ಯಾದ ಪ್ರಮುಖ ಫುಟ್ಬಾಲ್ ಟೂರ್ನಿಯಾಗಿರುವ ಎಎಫ್ ಸಿ ಕಪ್‌ನಲ್ಲಿ ಫೈನಲ್‌ ತಲುಪಿದ ಮೊದಲ ಭಾರತೀಯ ಕ್ಲಬ್‌ ಎಂಬ ಹೆಗ್ಗಳಿಕೆಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಪಾತ್ರವಾಗಿದೆ. ಆದರೆ ಪ್ರಶಸ್ತಿ ಗೆದ್ದು ಇತಿಹಾಸ ಬರೆಯುವ ಅದೃಷ್ಟ ಬೆಂಗಳೂರಿನ ತಂಡಕ್ಕೆ ಒಲಿಯಲಿಲ್ಲ.

ಸುಹೇಮ್ ಬಿನ್ ಹಮಾದ್ ಕ್ರೀಡಾಂಗಣದಲ್ಲಿ ನಡೆದ ಎಎಫ್ ಸಿ ಕಪ್‌ ಫೈನಲ್ ಪಂದ್ಯದಲ್ಲಿ ಬಿಎಫ್ ಸಿ ತಂಡದ ಎದುರು ಇರಾಕ್‌ನ ಏರ್‌ಫೋರ್ಸ್‌ ಕ್ಲಬ್‌ ತಂಡ (ಅಲ್‌ ಕ್ಯುವಾ ಅಲ್‌ ಜವಿಯಾ) 1-0 ಗೋಲಿನಿಂದ ಜಯಗಳಿಸಿತು. ಈ ಮೂಲಕ ಏರ್‌ಫೋರ್ಸ್‌ ತಂಡ ಈ ಪ್ರಶಸ್ತಿ ಗೆದ್ದ ಇರಾಕ್‌ನ ಮೊದಲ ಕ್ಲಬ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.[ಬೆಂಗಳೂರು ತಂಡದಿಂದ ಹೊಸ ಇತಿಹಾಸ, ಎಎಫ್ ಸಿ ಫೈನಲಿಗೆ ಲಗ್ಗೆ]

AFC Cup Final: Bengaluru FC lose 0-1 to Air Force Club

ಇರಾಕ್ ಪರ ಹಮಾದಿ ಅಹಮ್ಮದ್ ಅಬ್ದುಲ್ಲಾ ಅವರು 70ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿ ತಂಡದ ಗೆಲುವಿನ ರೂವಾರಿಯಾದರು. [ಬೆಂಗಳೂರು ಎಫ್ಸಿಗೆ ಕಾದಿದೆ 10 ಲಕ್ಷ ಡಾಲರ್ ಬಹುಮಾನ!]

ಈ ಮೂಲಕ ಹಮಾದಿ ಈ ಟೂರ್ನಿಯಲ್ಲಿ ತಾವು ಆಡಿದ 12 ಪಂದ್ಯಗಳಲ್ಲಿ 16 ಗೋಲುಗಳನ್ನು ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮೊದಲಾರ್ಧದಲ್ಲಿ ಬೆಂಗಳೂರು ತಂಡದ ಆಟಗಾರರು ರಕ್ಷಣಾ ತಂತ್ರಕ್ಕೆ ಹೆಚ್ಚು ಒತ್ತು ನೀಡಿದ್ದರು ಕೊನೆಯಲ್ಲಿ ನಿರಾಸೆಯಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Iraq's Al-Quwa Al-Jawiya (Air Force Club) beat Bengaluru FC 1-0 to lift the AFC Cup title thanks to a 70th minute strike from star striker Hammadi Ahmed here tonight (November 5). Bengaluru had created history by becoming the first Indian team to reach the title round.
Please Wait while comments are loading...