ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಸಿಗುತ್ತಿಲ್ಲ ಏಕೆ? ಬಿಂದ್ರಾರನ್ನು ಕೇಳಿ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 17: ಒಲಿಂಪಿಕ್ಸ್‌ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಏಕೈಕ ಭಾರತೀಯ ಅಭಿನವ್ ಬಿಂದ್ರಾ ಅವರು ಭಾರತ ಪದಕ ಸಿಗುತ್ತಿಲ್ಲ ಏಕೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ ಗೆ ಈ ಹಿಂದಿಗಿಂತಲೂ ಅತಿ ಹೆಚ್ಚು ಕ್ರೀಡಾಪಟು(118)ಗಳನ್ನು ಕಳಿಸಿರುವ ಭಾರತಕ್ಕೆ ಇನ್ನೂ ಪದಕ ಸಿಕ್ಕಿಲ್ಲ. ಕ್ರೀಡಾಕೂಟ ಆರಂಭವಾಗಿ 10 ದಿನಗಳು ಕಳೆದರೂ ಒಂದು ಕೂಡಾ ಪದಕ ಗೆಲ್ಲುವ ಆಸೆ ಹುಟ್ಟಿಲ್ಲ. [ಚಿನ್ನದ ಪದಕಕ್ಕಾಗಿ ಹೀಗೂ ಮಾಡ್ತಾರೆ]

Abhinav Bindra reveals why India fails to win medals at Olympics

ಶೂಟರ್ ಗಳು, ಹಾಕಿ ಟೀಮ್ ಅಥವಾ ವೈಯಕ್ತಿಕ ಅಥ್ಲೀಟ್ ಗಳು ಪದಕ ಪಡೆಯಲು ಸಾಧ್ಯವಾಗಿಲ್ಲ. ಗರಿಷ್ಠ ಜನಸಂಖ್ಯೆಯಿರುವ ದೇಶ ಒಂದೂ ಪದಕವನ್ನು ಏಕೆ ಪಡೆಯುತ್ತಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಕಾಡುತ್ತದೆ.

ಆದರೆ, 'ಪ್ರತೀ ಪದಕವೂ 5.5 ಮಿಲಿಯನ್ ಪೌಂಡ್ ಬೆಲೆ ಬಾಳುತ್ತದೆ. ಅಂತಹ ಹೂಡಿಕೆ ಇದಕ್ಕೆ ಅಗತ್ಯವಿದೆ' ಎಂದು ಟ್ವೀಟ್ ಮಾಡಿದ್ದಾರೆ. [ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ ಖೇಲ್ ರತ್ನ]

ಭಾರತದಲ್ಲಿ ಇಂಥ ವ್ಯವಸ್ಥೆಯನ್ನು ರೂಪಿಸುವವರೆಗೂ ಪದಕಗಳನ್ನು ನಿರೀಕ್ಷಿಸುವುದು ಬೇಡ ಎಂದಿದ್ದಾರೆ. ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಬ್ರಿಟನ್ ಹೇಗೆ ಅಥ್ಲೀಟ್‌ಗಳ ಮೇಲೆ ಅತ್ಯಧಿಕ ಮಟ್ಟದಲ್ಲಿ ಹಣ ಹೂಡುತ್ತಿದೆ ಎನ್ನುವ ಬರಹ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಿಂದ್ರಾ ತಮ್ಮ ಅಭಿಪ್ರಾಯವನ್ನು ಟ್ವೀಟ್ ಮೂಲಕ ಹಾಕಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
At a time when nation is getting disheartened over Indian contingent's dismal show at the ongoing Rio Olympics, India's lone individual gold medalist Abhinav Bindra has revealed why the India lags behind in winning medals at the sporting extravaganza.
Please Wait while comments are loading...