ರಿಯೋ: ತ್ರಿವರ್ಣ ಧ್ವಜ ಹಿಡಿದು ತಂಡ ಮುನ್ನಡೆಸಲಿರುವ ಬಿಂದ್ರಾ

Posted By:
Subscribe to Oneindia Kannada

ನವದೆಹಲಿ, ಜೂನ್ 10 : ಅಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಿಡಿದು ತಂಡವನ್ನು ಮುನ್ನಡೆಸುವ ಗೌರವ ಅಭಿನವ್ ಬಿಂದ್ರಾಗೆ ಪಾತ್ರವಾಗಿದೆ.

ಪಥ ಸಂಚಲನದಲ್ಲಿ ಭಾರತದ ಆಟಗಾರರ ತಂಡವನ್ನು ಮುನ್ನಡೆಸಲು ಶೂಟರ್ ಅಭಿನವ್ ಬಿಂದ್ರಾ ಆಯ್ಕೆಯಾಗಿದ್ದಾರೆ. ಬಹುತೇಕ ಇದು ಬಿಂದ್ರಾ ಅವರ ಕೊನೆಯ ಒಲಿಂಪಿಕ್ಸ್ ಆಗುವ ಸಾಧ್ಯತೆಯಿದೆ. [10 ಸಾವಿರ ಕ್ರೀಡಾಳುಗಳಿಗೆ 4 ಲಕ್ಷ ಕಾಂಡೋಮ್ಸ್]

33ರ ಹರೆಯದ ಅಭಿನವ್ ಬಿಂದ್ರಾ ಅವರು ಬೀಜಿಂಗ್ ಒಲಿಂಪಿಕ್ ಚಿನ್ನದ ಪದಕ ವಿಜೇತರಾಗಿದ್ದಾರೆ. ಬಿಂದ್ರಾ ಅವರನ್ನು ಆಯ್ಕೆ ಮಾಡಿ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಪ್ರಕಟಿಸಿದೆ.[ಡಿಸ್ಕಸ್ ಥ್ರೋ ಪಟು ಸೀಮಾ ಒಲಿಂಪಿಕ್ಸ್ ಗೆ ಆಯ್ಕೆ]

Abhinav Bindra chosen as Indian contingent's flagbearer at Rio Olympics

ಅಭಿನವ್ ಅವರು 10 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಏಕೈಕ ಚಿನ್ನದ ಪದಕ ಗೆದ್ದ ಆಟಗಾರರಾಗಿದ್ದಾರೆ. ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ ಅತ್ಯುತ್ತಮ ಕ್ರೀಡಾಪಟು ಎಂಬ ಗೌರವವನ್ನು ಪಡೆದಿರುವ ಬಿಂದ್ರಾ, ಒಟ್ಟು ಏಳು ಕಾಮನ್​ವೆಲ್ತ್ ಪದಕ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಮೂರು ಪದಕಗಳನ್ನು ಗೆದ್ದಿದ್ದಾರೆ. [ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತಕ್ಕೆ ಎರಡು ಚಿನ್ನ]

ಶೂಟಿಂಗ್ ಗೆ ಗುಡ್ ಬೈ: 33 ವರ್ಷ ವಯಸ್ಸಿನ ಬಿಂದ್ರಾ ಅವರು ಆಗಸ್ಟ್ 8 ರಂದು 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 2008 ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಿಂದ್ರಾ ಅವರು ಬ್ರೆಜಿಲ್ಲಿನ ರಿಯೋ ಒಲಿಂಪಿಕ್ಸ್ ನಂತರ 20 ವರ್ಷಗಳ ವೃತ್ತಿ ಬದುಕಿಗೆ ಗುಡ್ ಬೈ ಹೇಳಲಿದ್ದಾರೆ.
(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Olympic champion shooter Abhinav Bindra was today (June 10) chosen as the flagbearer of the Indian contingent at the Rio Games' opening ceremony on August 5.
Please Wait while comments are loading...