ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾದ ಫುಟ್ಬಾಲ್ ಆಟಗಾರ

Posted By:
Subscribe to Oneindia Kannada

ಮಸಾಚುಸೆಟ್ಸ್ (ಅಮೆರಿಕ), ಏಪ್ರಿಲ್ 19: ಇಲ್ಲಿನ ಜೈಲೊಂದರಲ್ಲಿ ಬಂಧಿತನಾಗಿದ್ದ ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್ ಎಫ್ ಎಲ್) ಆರೋನ್ ಹರ್ನಾಂಡೆಜ್ (27) ತಮ್ಮ ಜೈಲು ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ.

ತನ್ನ ಪ್ರೇಯಸಿಯ ತಂಗಿಯೊಂದಿಗೆ ದೈಹಿಕ ಸಂಬಂಧವನ್ನಿಟ್ಟುಕೊಂಡಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಹರ್ನಾಂಡೆಜ್, ಆ ಪ್ರಕರಣದಲ್ಲಿ ಆರೋಪ ಸಾಬೀತಾಗಿತ್ತು.

Aaron Hernandez, ex-NFL player, kills himself in prison

ಕಳೆದ ವಾರವಷ್ಟೇ ಅವರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿತ್ತು. ಆಗಲೇ ನ್ಯಾಯಾಲಯದಲ್ಲಿ ಅತ್ತಿದ್ದ ಹರ್ನಾಂಡೇಜ್, ನ್ಯಾಯಾಧೀಶರಿಗೆ ಧನ್ಯವಾದ ಹೇಳಿದ್ದ!

ಬುಧವಾರ ಆತನ ತನ್ನ ಜೈಲು ಕೊಠಡಿಯಲ್ಲಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿತ್ತು. ತಕ್ಷಣವೇ ಜೈಲು ಸಿಬ್ಬಂದಿ ಆತನನ್ನು ಹಗ್ಗದ ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಸೇರಿಸಿದರು. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆಂದು ಬಿಬಿಸಿ ಹೇಳಿದೆ.

(ಚಿತ್ರ ಕೃಪೆ: WPRI.com)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former NFL footballer Aaron Hernandez has been found dead in his cell in Massachusetts, officials say. Hernandez hanged himself at the Souza Baranowski Correctional Center and was pronounced dead later at hospital.
Please Wait while comments are loading...