ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್: ಆಸೀಸ್ ಬೃಹತ್ ಮೊತ್ತ,ಭಾರತ 71/1

By Mahesh

ಸಿಡ್ನಿ, ಜ.7: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಭರ್ಜರಿ ಶತಕದ ನಂತರ ನಾಯಕ ಸ್ಟೀವ್ ಸ್ಮಿತ್ ಕೂಡಾ ಶತಕ ದಾಖಲಿಸುವ ಮೂಲಕ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಹಿಡಿತ ಸಾಧಿಸಿದೆ.

ಭಾರತದ ಇನ್ನಿಂಗ್ಸ್ : ಬೃಹತ್ ಮೊತ್ತ ಬೆನ್ನು ಹತ್ತಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ಮೊದಲ ಓವರ್ ನಲ್ಲೇ ಮುರಳಿ ವಿಜಯ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಆದರೆ, ದಿನದ ಅಂತ್ಯಕ್ಕೆ ಚೇತರಿಕೆ ಕಂಡು 71/1 ಸ್ಕೋರ್ ಮಾಡಿದೆ. ಕೆಎಲ್ ರಾಹುಲ್ 31 ರನ್ ಹಾಗೂ ರೋಹಿತ್ ಶರ್ಮ 40 ರನ್ ಸ್ಕೋರ್ ಮಾಡಿ ವಿಕೆಟ್ ಕಾಯ್ದುಕೊಂಡಿದ್ದಾರೆ.

ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಿದೆ.. ವಾರ್ನರ್ ಹೊಡೆತಕ್ಕೆತತ್ತರಿಸಿದ್ದ ಟೀಂ ಇಂಡಿಯಾ ಬೌಲರ್ ಗಳು ಎರಡನೇ ದಿನ ಸ್ಟೀವ್ ಸ್ಮಿತ್ ಹಾಗೂ ಶೇನ್ ವಾಟ್ಸನ್ ಪ್ರಹಾರಕ್ಕೆ ಸಿಲುಕಿದರು. [ಸಿಡ್ನಿ ಟೆಸ್ಟ್ : ಮೊದಲ ದಿನದ ವರದಿ]

ನಾಲ್ಕನೇ ಟೆಸ್ಟ್ ನ ಮೊದಲ ದಿನದ ಅಂತ್ಯಕ್ಕೆ ಶೇನ್ ವ್ಯಾಟ್ಸನ್ 61 ರನ್ ಹಾಗೂ ನಾಯಕ ಸ್ಮಿತ್ 82 ರನ್ ಗಳಿಸಿ ಔಟಾಗದೆ ಉಳಿದಿದ್ದರು. ಭಾರತದ ಪರ ಮಹಮ್ಮದ್ ಶಮಿ ಹಾಗೂ ಆರ್ ಅಶ್ವಿನ್ ತಲಾ 1 ವಿಕೆಟ್ ಗಳಿಸಿದ್ದರು. ಮೊದಲ ದಿನದ ಅಂತ್ಯಕ್ಕೆ ಆಸೀಸ್ ತಂಡ 348/2 ಸ್ಕೋರ್ ಮಾಡಿತ್ತು.

Day 2: Australia declare at 572/7 after Smith's century

ಎರಡನೇ ದಿನದ ಆಟದಲ್ಲಿ ನಾಯಕ ಸ್ಮಿತ್ ಶತಕ(117), ಶೇನ್ ವಾಟ್ಸನ್ (81) ಗಳಿಸಿದರೆ 196 ರನ್ ಗಳ ಜೊತೆಯಾಟ ಕಲೆಹಾಕಿದರು. ಎಲ್ಲಾ ಟಾಪ್ 6 ಆಟಗಾರರು 50 ಪ್ಲಸ್ ರನ್ ಗಳಿಸಿ ಬ್ಯಾಟಿಂಗ್ ಶಕ್ತಿ ಪ್ರದರ್ಶನ ಮಾಡಿದರು. [ಕ್ರಿಕೆಟ್ : ತ್ರಿಕೋನ ಸರಣಿಗೂ ಉತ್ತಪ್ಪ ಆಯ್ಕೆ ಇಲ್ಲ]

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಎರಡನೇ ದಿನದ ಭೋಜನ ವಿರಾಮದ ವೇಳೆಗ್ 420/4 ಸ್ಕೋರ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಚಹಾ ವಿರಾಮದ ವೇಳೆಗೆ 538/5 ಸ್ಕೋರ್ ಗಳಿಸಿತು. ಕೊನೆಗೆ 152.3 ಓವರ್ ಗಳಲ್ಲಿ 572/7 ಮೊತ್ತ ಕಲೆ ಹಾಕಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X