ರಿಯೋ 2016: ಈಕೆಗೆ 41 ವಯಸ್ಸಾದ್ರು ಆಟ ಮಾತ್ರ ಕುಗ್ಗಿಲ್ಲ

By: ರಮೇಶ್ ಬಿ
Subscribe to Oneindia Kannada

ರಿಯೋ ಡಿ ಜನೈರೋ ಆಗಸ್ಟ್ 13: ಕ್ರೀಡೆಗಳಲ್ಲಿಯೇ ಅಪಾಯಕಾರಿ ಕ್ರೀಡೆಯಾಗಿರುವ ಜಿಮ್ನಾಸ್ಟಿಕ್ ನಲ್ಲಿ ಸ್ಪರ್ಧಿಸುವುದು ಸಾಮಾನ್ಯ ಮಾತಲ್ಲ ಆಳೆತ್ತರಕ್ಕೆ ಹಾರಿ ಗಾಳಿಯಲ್ಲಿ ಸುತ್ತು ಹಾಕಬೇಕೆಂದರೆ ಸುಮ್ನೆನಾ, ಅದಕ್ಕೆ ಯೌವನದ ಜೊತೆಗೆ ಅಭ್ಯಾಸ ಬಹಳ ಮುಖ್ಯವಾಗಿ ಬೇಕು. ಆದರೆ ಉಜ್ಬೇಕಿಸ್ತಾನದ ಜಿಮ್ನಾಸ್ಟ್ ಒಕ್ಸಾನಾ ಚುಸೋವಿಟಿನಾ ಅವರು ತಮಗೆ ವಯಸ್ಸು 41 ಆದರೂ ಇಳಿವಯಸ್ಸಿನವರು ನಾಚುವಾಗೆ ಸ್ಪರ್ಧೆಯಲ್ಲಿ ತಮ್ಮ ಆಟವನ್ನು ಪ್ರದರ್ಶಿಸುತ್ತಾಳೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ದೇಹಕ್ಕೆ ವಯಸ್ಸಾದರೇನಂತೆ ಆಟ ಕುಗ್ಗಿಲ್ಲ ಎನ್ನುವಾಗೆ ರಿಯೋ ಒಲಿಂಪಿಕ್ಸ್ ಜಿಮ್ನಾಸ್ಟಿಕ್ ನಲ್ಲಿ ಆಗಸ್ಟ್ 14 ಭಾನುವಾರ ಚಿನ್ನಕ್ಕೆ ಮುತ್ತಿಡಲು ಕಾಯುತ್ತಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಒಬ್ಬೊಬ್ಬ ಕ್ರೀಡಾಪಟುವಿನ ಜೀವನವನ್ನು ಕೆದಕಿದರೆ ಒಂದೊಂದು ಕಥೆ ಸಿಗಬಹುದೇನೋ. ಉಜ್ಬೇಕಿಸ್ತಾನದ ಜಿಮ್ನಾಸ್ಟ್ ಒಕ್ಸಾನಾ ಚುಸೋವಿಟಿನಾ ಕಥೆ ಕೇಳಿದರೆ ನಿಜಕ್ಕೂ ಕಂಗಳು ಮಂಜಾಗದಿರವು. [ಮೈಕಲ್ ಗೆ ಸೆಡ್ಡು, ಸ್ಕೂಲಿಂಗ್ ಗೆ ಚಿನ್ನ]

ಆಕೆಗೆ ಈಗ 41ರ ವಯಸ್ಸು. ಸಾಮಾನ್ಯವಾಗಿ ವೃತ್ತಿಜೀವನಕ್ಕೆ ಇಂಥ ವಯಸ್ಸಿನವರು ವಿದಾಯ ಹೇಳಿಬಿಡುತ್ತಾರೆ. ಆದರೆ ಒಕ್ಸಾನಾ ಅವರ 17 ವರ್ಷದ ಮಗ ಅಲಿಶೆರ್ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ.

ಆತನ ಚಿಕಿತ್ಸೆಗೆ ಈಗಾಗಲೇ ಅಪಾರ ಹಣ ಖರ್ಚಾಗಿದೆ.ಆದರೆ, ಆತನಿಗಿನ್ನೂ ಉನ್ನತ ಮಟ್ಟದ ಚಿಕಿತ್ಸೆಯ ಅವಶ್ಯಕತೆಯಿದೆ. ಹಾಗಾಗಿ, ಒಕ್ಸಾನಾ ಇನ್ನೂ ಕ್ರೀಡಾಲೋಕದಲ್ಲೇ ಮುನ್ನಡೆಯುತ್ತಿದ್ದಾರೆ. ರಿಯೋ ಅವರ 7ನೇ ಒಲಿಂಪಿಕ್ ಆಗಿದೆ.

ಉಳಿದಂತೆ ರಿಯೋದಲ್ಲಿ ಚಿನ್ನದ ಮೀನು 31 ವರ್ಷ ವಯಸ್ಸಿನ ಮೈಕಲ್ ಫೆಲ್ಫ್ಸ್, ಈಜಪಟು ಅಂಥೋಣಿ ಇರ್ವಿನ್(35). ಯುಎಸ್ ಸೈಕಲಿಸ್ಟ್ , ಈ ಬಾರಿ ಚಿನ್ನದ ಪದಕ ವಿಜೇತೆ ಕ್ರಿಸ್ಟಿನ್ ಆರ್ಮ್ ಸ್ಟ್ರಾಂಗ್ (43) ಅವರನ್ನು ಹಿರಿಯ ಪಟ್ಟಿಗೆ ಸೇರಿಸಬಹುದು.

2009 ರಲ್ಲಿ ವಿದಾಯ ಹೇಳಿದ್ದರು

2009 ರಲ್ಲಿ ವಿದಾಯ ಹೇಳಿದ್ದರು

ಈಕೆಯ ಎದುರಾಳಿಗಳಲ್ಲಿ ಹಲವರು ಹೆಚ್ಚು ಕಮ್ಮಿ ಅವರ ಮಗನ ವಯಸ್ಸಿನವರು.
2009 ರಲ್ಲಿ ವಿದಾಯ ಹೇಳಿ 2012 ರ ಲಂಡನ್ ಒಲಿಂಪಿಕ್ಸ್ ಗೆ ಮರಳಿ ಕಣಕ್ಕಿಳಿದಿದ್ದರು.
ಮಗನ ಆರೈಕೆಗಾಗಿ ತನ್ನೆಲ್ಲಾ ಮಾನಸಿಕ ಅಡೆತಡೆಗಳನ್ನು ಎದುರಿಸುತ್ತಲೇ ಒಲಿಂಪಿಕ್ಸ್ ನಲ್ಲಿ ತಮ್ಮ ಆಟವನ್ನು ಮುಂದುವರಿಸಿದ್ದಾರೆ.

1992ರಲ್ಲಿ ಜಿಮ್ನಾಸ್ಟ್ ಒಕ್ಸಾನಾ ಚುಸೋವಿಟಿನಾ

1992ರಲ್ಲಿ ಜಿಮ್ನಾಸ್ಟ್ ಒಕ್ಸಾನಾ ಚುಸೋವಿಟಿನಾ

2008ರಲ್ಲಿ ಜಿಮ್ನಾಸ್ಟ್ ಒಕ್ಸಾನಾ ಚುಸೋವಿಟಿನಾ

2008ರಲ್ಲಿ ಜಿಮ್ನಾಸ್ಟ್ ಒಕ್ಸಾನಾ ಚುಸೋವಿಟಿನಾ

2012 ರಲ್ಲಿ ಮತ್ತೆ ಕಣಕ್ಕೆ ಜಿಗಿಪ ಒಕ್ಸಾನಾ

2012 ರಲ್ಲಿ ಮತ್ತೆ ಕಣಕ್ಕೆ ಜಿಗಿಪ ಒಕ್ಸಾನಾ

ಒಕ್ಸಾನಾ ಚುಸೋವಿಟಿನಾ ಬಗ್ಗೆ ಬಿಬಿಸಿ ವಿಡಿಯೋ

ಒಕ್ಸಾನಾ ಚುಸೋವಿಟಿನಾ ಬಗ್ಗೆ ಬಿಬಿಸಿ ವಿಡಿಯೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At 41, Chusovitina is the oldest Olympic female gymnast in history, competing in her seventh Summer Games. The 5-foot tall, 94-pound dynamo is representing Uzbekistan and will be vying for a medal in the vault final this Sunday.
Please Wait while comments are loading...