ಸಿಂಧು-ಮರೀನ್ ನಡುವಿನ ಬಂಗಾರದ ಪಂದ್ಯವನ್ನು ವೀಕ್ಷಿಸಿದವರೆಷ್ಟು?

By: ಕ್ರೀಡಾ ಡೆಸ್ಕ್
Subscribe to Oneindia Kannada

ಮುಂಬೈ ಆಗಸ್ಟ್.31 : ವಿಶ್ವದ ನಂ 1 ಆಟಗಾರ್ತಿ ಸ್ಪೇನಿನ ಕರೋಲಿನಾ ಮರೀನ್ ಹಾಗೂ ಭಾರತದ ತಾರೆ ಪಿವಿ ಸಿಂಧು ನಡುವಿನ ಬಂಗಾರ ಬೇಟೆಯ ಪಂದ್ಯ ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಡಿ ಜನೈರೋದಲ್ಲಿ ನಡೆದ ರಿಯೋ ಒಲಿಂಪಿಕ್ಸ್ ಕೂಟದ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಪಿ.ವಿ.ಸಿಂಧು ಹಾಗೂ ಸ್ಪೇನಿನ ಕರೋಲಿನಾ ಮರೀನ್ ಅವರ ನಡುವೆ ನಡೆದ ಫೈನಲ್ ಪಂದ್ಯವನ್ನು ವಿಶ್ವದಾದ್ಯಂತ ಜನರು ವೀಕ್ಷಿಸಿದ್ದಾರೆ ಎಂದು ಸ್ಟಾರ್ ಇಂಡಿಯಾ ತಿಳಿಸಿದೆ

ಪಿ.ವಿ.ಸಿಂಧು ಹಾಗೂ ಸ್ಪೇನಿನ ಕರೋಲಿನಾ ಮರೀನ್ ಅವರ ನಡುವೆ ನಡೆದ ಫೈನಲ್ ಪಂದ್ಯವನ್ನು ಸ್ಟಾರ್ ಸ್ಫೋರ್ಟ್ ನೆಟ್ವರ್ಕ್ ನೇರ ಪ್ರಸಾರ ಮಾಡಿತ್ತು. ಈ ಪಂದ್ಯವನ್ನು ವಿಶ್ವದ್ಯಾಂತ ಸುಮಾರು 17.2 ದಶಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ ಎಂದು ಬುಧವಾರ ಸ್ಟಾರ್ ಇಂಡಿಯಾ ಬ್ರಾಡ್ಕಾಸ್ಟ್ ಸಂಸ್ಥೆ ತಿಳಿಸಿದೆ. [ಪಿವಿ ಸಿಂಧು ಯಾರು?]

17 million TV viewers watched PV Sindhu's Rio Olympics gold medal match: Star

17.2 ಮಿಲಿಯನ್ ಜನರು ವೀಕ್ಷಣೆ ಮಾಡಿರುವುದು ನೂತನ ದಾಖಲೆಯಾಗಿದೆ ಎಂದು ಬಾರ್ಕ್ ಹೇಳಿದೆ. ಈ ಫೈನಲ್ ಪಂದ್ಯದಲ್ಲಿ ಕರೋಲಿನಾ ಮರೀನ್ ವಿರುದ್ಧ ಪಿ.ವಿ.ಸಿಂಧು ಸೋಲನುಭವಿಸಿ ಬೆಳ್ಳಿ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು. ಸಿಂಧು vs ಮರೀನ್, ಚಿನ್ನದ ಪದಕಕ್ಕಾಗಿ ಹಣಾಹಣಿ, ಶುಕ್ರವಾರ (ಆಗಸ್ಟ್ 19) ರಂದು ನಡೆದಿತ್ತು. [ಪಿವಿ ಸಿಂಧು ಈಗ 13 ಕೋಟಿ ರು ಒಡತಿ]

ರಿಯೋ ಒಲಿಂಪಿಕ್ಸ್ ಮಾಹಾಕೂಟವನ್ನು 10 ಮಿಲಿಯನ್ ಭಾರತದ ಜನರು ಲೈವ್ ವೀಕ್ಷಣೆ ಮಾಡಿದ್ದಾರೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ ಇತರೆ ಬಗೆ ಬಗೆಯ ಕ್ರೀಡೆಗಳನ್ನು ವೀಕ್ಷಕರಿಗೆ ಸ್ಟಾರ್ ಸ್ಪೋರ್ಟ್ಸ್ ನೀಡುತ್ತಾ ಬಂದಿದೆ ಎಂದು ಸ್ಟಾರ್ ಸ್ಪೋರ್ಟ್ಸ್ ಸಿಇಒ ನಿತೀನ್ ಕುಕ್ರೇಜ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Rio Olympics gold medal contest in badminton women's singles between India's PV Sindhu and Spain's Carolina Marin attracted 17.2 million TV viewers, according to the broadcasters.
Please Wait while comments are loading...