'ಸೆಂಚುರಿ ಸ್ಟಾರ್' ಅಥ್ಲೀಟ್ ಮಾನ್ ಕೌರ್ ಗೆ ಶತ ನಮನ

Posted By:
Subscribe to Oneindia Kannada

ವ್ಯಾಂಕೊವರ್, ಆಗಸ್ಟ್ 31: ಅಮೆರಿಕಾದ ಮಾಸ್ಟರ್ಸ್‌ ಗೇಮ್ಸ್‌ ನಲ್ಲಿ ಭಾರತದ 'ಸೆಂಚುರಿ ಸ್ಟಾರ್' ಮಾನ್ ಕೌರ್ ಅವರು 100 ಮೀಟರ್ ಓಟದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.ಇದಲ್ಲದೆ ಟ್ರ್ಯಾಕ್ ಅಂಡ್ ಫೀಲ್ಡ್ ಗೇಮ್ ನಲ್ಲಿ ಶಾಟ್ ಪುಟ್ ಹಾಗೂ ಜಾವೆಲಿನ್ ಸ್ಪರ್ಧೆಯಲ್ಲೂ ಚಿನ್ನಕೊರಳಿಗೇರಿಸಿಕೊಂಡಿದ್ದಾರೆ.

ಭಾರತದ ಶತಾಯುಷಿ ಮಾನ್ ಕೌರ್ ಚಿನ್ನದ ಪದಕವನ್ನು ಜಯಿಸಿ ಗಮನ ಸೆಳೆದಿದ್ದಾರೆ. 100 ವರ್ಷದ ವಯೋಮಿತಿ ವಿಭಾಗದಲ್ಲಿ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದ ಮಾನ್ ಕೌರ್ ಅವರು ಒಂದು ನಿಮಿಷ ಹಾಗೂ 21 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. ಕೌರ್ ಅವರ ಸಾಧನೆ ಯುವ ಅಥ್ಲೀಟ್ ಗಳಿಗೆ ಥ್ರಿಲ್ಲಿಂಗ್ ವಿಷಯವಾಗಿದೆ.

100-year-old Indian runner Man Kaur wins gold medal at American Masters Games

ಚಂಡೀಗಢ ಮೂಲದ ಕೌರ್ ಅವರು ಫಿನಿಶ್ ಲೈನ್ ಮುಟ್ಟುವ ಸಮಯದಲ್ಲಂತೂ ಅಲ್ಲಿ ನೆರೆದಿದ್ದ 70 ಹಾಗೂ 80ರ ಹರೆಯದ ಇತರೆ ಸ್ಪರ್ಧಿಗಳು ಹುರಿದುಂಬಿಸಿದರು. ಈ ಮಾಸ್ಟರ್ಸ್ ಗೇಮ್ ನಲ್ಲಿ 30ಕ್ಕೂ ಅಧಿಕ ಅಥ್ಲೀಟ್‌ ಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಾಸ್ಟರ್ಸ್‌ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಕೌರ್ ಪುತ್ರ ಗುರುದೇವ್ ಸಿಂಗ್, '100 ವಯೋಮಿತಿ ವಿಭಾಗದಲ್ಲಿ ನನ್ನ ತಾಯಿ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಇಳಿ ವಯಸ್ಸಿನಲ್ಲೂ ಸ್ಪರ್ಧೆಯಲ್ಲಿ ಭಾಗವಹಿಸಿರುವ ಅವರು ವೃದ್ದೆಯರಿಗೆ ಸ್ಫೂರ್ತಿಯಾಗಿದ್ದಾರೆ' ಎಂದಿದ್ದಾರೆ..

100-year-old Indian runner Man Kaur wins gold medal at American Masters Games

ಮಹಾನ್ ಸಾಧಕಿ ಮಾನ್ : ವಿಶ್ವದೆಲ್ಲೆಡೆ ನಡೆಯುವ ಮಾಸ್ಟರ್ಸ್‌ ಗೇಮ್ಸ್‌ ಗಳಿಂದ ಇಲ್ಲಿ ತನಕ ಮಾನ್ ಕೌರ್ 20ಕ್ಕೂ ಅಧಿಕ ಪದಕಗಳನ್ನು ಬಾಚಿಕೊಂಡಿದ್ದಾರೆ. 1984ರಲ್ಲಿ ಮಹಿಳೆಯರ 400 ಮೀ. ರಿಲೇಯಲ್ಲಿ ಸ್ಪರ್ಧಿಸಿದ್ದ ಕೆನಡಾದ ಪರ ಬೆಳ್ಳಿ ಪದಕ ಜಯಿಸಿದ್ದ ಚಾರ್ಮೈನ್ ಕ್ರೂಕ್ಸ್ ಅವರು ಮಾಸ್ಟರ್ಸ್‌ ಗೇಮ್ಸ್‌ನ ರಾಯಭಾರಿ ಆಗಿದ್ದಾರೆ.

ಮಾಸ್ಟರ್ಸ್‌ ಗೇಮ್ಸ್‌ನಲ್ಲಿ ಭಾಗವಹಿಸಲು ಸರಾಸರಿ 49 ವರ್ಷ ಪ್ರಾಯವಾಗಿರಬೇಕು. ಕೌರ್ ಹೊರತುಪಡಿಸಿದರೆ 101 ಪ್ರಾಯದ ಬ್ರಿಟಿಷ್ ಕೊಲಂಬಿಯದ ನಿಹಾಲ್ ಗಿಲ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದ ಹಿರಿಯ ಅಥ್ಲೀಟ್ ಆಗಿದ್ದರು. ನಾಲ್ಕು ವರ್ಷಗಳಿಗೊಮ್ಮೆ ಈ ಮಾಸ್ಟರ್ಸ್ ಗೇಮ್ಸ್ ಆಯೋಜಿಸಲಾಗುತ್ತದೆ.(ಎಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Man Kaur from India needed almost a minute-and-a-half to cross the finish line in the 100-meter dash, but she still picked up a gold medal Monday at the American Masters Games.
Please Wait while comments are loading...