keyboard_backspace

ಚೀನಾದಲ್ಲಿ ಕೊರೊನಾ ಆಘಾತ: 4 ಮಿಲಿಯನ್‌ ಜನಸಂಖ್ಯೆ ಇರುವ ನಗರ ಲಾಕ್‌ಡೌನ್‌

Google Oneindia Kannada News

ಬೇಜಿಂಗ್‌, ಅಕ್ಟೋಬರ್‌, 26: ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಮತ್ತೆ ಏರಿಕೆ ಆಗುತ್ತಿದೆ. ಈ ನಿಟ್ಟಿನಲ್ಲಿ ನಾಲ್ಕು ಮಿಲಿಯನ್‌ (ದಶಲಕ್ಷ) ಜನರು ಇರುವ ನಗರವನ್ನು ಸಂಪೂರ್ಣವಾಗಿ ಲಾಕ್‌ಡೌನ್‌ ಮಾಡಲಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಇಲ್ಲದೆ ಮನೆಯಿಂದ ಹೊರಗೆ ಬರಬಾರದು ಎಂದು ಈ ನಗರದ ಎಲ್ಲಾ ಜನರಿಗೆ ಸೂಚನೆ ನೀಡಲಾಗಿದೆ.

ಕೊರೊನಾ ಮೊದಲ ಬಾರಿಗೆ ಕಾಣಿಸಿಕೊಂಡ ಚೀನಾವು ಸೋಂಕು ಕಡಿಮೆ ಆದ ಹಿನ್ನೆಲೆಯಲ್ಲಿ ಕೊಂಚ ಆರ್ಥಿಕವಾಗಿ ಚೇತರಿಸಿಕೊಳ್ಳುತ್ತಿತ್ತು. ಆದರೆ ಈ ನಡುವೆ ಕೊರೊನಾವೈರಸ್‌ ಸೋಂಕು ಮತ್ತೆ ಏರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಚೀನಾದಲ್ಲಿ ಎಲ್ಲಾ ಗಡಿಗಳಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಚೀನಾದಲ್ಲಿ ಮತ್ತೆ ಬಂತು ಕೋವಿಡ್; ವಿಮಾನ, ಶಾಲೆ ಬಂದ್ಚೀನಾದಲ್ಲಿ ಮತ್ತೆ ಬಂತು ಕೋವಿಡ್; ವಿಮಾನ, ಶಾಲೆ ಬಂದ್

ಚೀನಾದಲ್ಲಿ ಸ್ಥಳೀಯವಾಗಿ 29 ಮಂದಿಗೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ವಾಯುವ್ಯ ಪ್ರಾಂತ್ಯದ ಗನ್ಸುವಿನ ಪ್ರಾಂತೀಯ ರಾಜಧಾನಿ ಲಾಂಝೌನಲ್ಲಿ ಆರು ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿಯು ಹೇಳಿದೆ. ಈ ನಗರದ ಎಲ್ಲಾ ನಾಗರಿಕರಿಗೆ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಚೀನಾದಲ್ಲಿ ಡೆಲ್ಟಾ ದಾಳಿ

ಚೀನಾದಲ್ಲಿ ಡೆಲ್ಟಾ ದಾಳಿ

ಭಾರತದಲ್ಲಿ ಮೊದಲು ಹುಟ್ಟಿಕೊಂಡ ಈ ಕೊರೊನಾವ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರವು ಈಗ ಚೀನಾದಲ್ಲಿ ಭಾರೀ ಆತಂಕವನ್ನು ಉಂಟು ಮಾಡಿದೆ. ಅಕ್ಟೋಬರ್‌ 17 ರಿಂದ ಈವರೆಗೆ ಹೊಸದಾಗಿ 198 ಪ್ರಕರಣಗಳು ದಾಖಲು ಆಗಿದೆ. ಈ ಎಲ್ಲಾ ಪ್ರಕರಣಗಳು ಡೆಲ್ಟಾ ರೂಪಾಂತರವಾಗಿದೆ. "ಈ ನಗರದ ಒಳಗೆ ಜನರು ಬರುವುದು ಹಾಗೂ ಹೋಗುವುದು, ಎಲ್ಲಾ ವಿಚಾರವನ್ನು ಪ್ರಸ್ತುತ ನಿಯಂತ್ರಣ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಸಾಗಾಟ ಹಾಗೂ ವೈದ್ಯಕೀಯ ಚಿಕಿತ್ಸೆಗೆ ಮಾತ್ರ ಸಂಚಾರವನ್ನು ಸೀಮಿತಗೊಳಿಸಲಾಗಿದೆ," ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚೀನಾದಲ್ಲಿ ಅಧಿಕ ಪ್ರಕರಣಗಳು ಡೆಲ್ಟಾ ರೂಪಾಂತರವಾಗಿದೆ. ಪ್ರಸ್ತುತ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಇನ್ನೂ ಕೂಡಾ ಅಧಿಕವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೇಶೀಯವಾಗಿ ಪ್ರವಾಸಿಗರಲ್ಲಿ ಅಧಿಕವಾಗಿ ಕೊರೊನಾ ಸೋಂಕು ಕಾಣಿಸುತ್ತಿದೆ ಎಂದು ವರದಿ ಆಗಿದೆ. ಉತ್ತರ ಚೀನಾದಲ್ಲಿ ಮನೆಯಲ್ಲಿಯೇ ಇರುವಂತೆ ಎಲ್ಲಾ ನಾಗರಿಕರಿಗೆ ಆದೇಶ ನೀಡಲಾಗಿದೆ.

 ಚೀನಾ ರಾಜಧಾನಿಯಲ್ಲಿ ಹಲವು ಮನೆಗಳು ಲಾಕ್‌ಡೌನ್‌

ಚೀನಾ ರಾಜಧಾನಿಯಲ್ಲಿ ಹಲವು ಮನೆಗಳು ಲಾಕ್‌ಡೌನ್‌

ಬೇಜಿಂಗ್‌ನಲ್ಲಿ ಮಂಗಳವಾರ ಮೂರು ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಕೆಲವು ಪ್ರದೇಶಗಳಿಗೆ ಮಾತ್ರ ಪ್ರವೇಶವನ್ನು ನೀಡಲು ಅವಕಾಶ ನೀಡಲಾಗಿದೆ. ನಿರ್ಬಂಧ ವಿಧಿಸಲಾಗಿದೆ. ಯಾವುದೇ ಅಗತ್ಯ, ತುರ್ತು ಇಲ್ಲದೆ ಮನೆಯಿಂದ ಹೊರಗೆ ಹೋಗದಂತೆ ಎಲ್ಲಾ ನಾಗರಿಕರಿಗೆ ಸೂಚನೆ ನೀಡಲಾಗಿದೆ. ರಾಷ್ಟ್ರದ ರಾಜಧಾನಿ ಬೇಜಿಂಗ್‌ನಲ್ಲೂ ಹಲವಾರು ಮನೆಗಳನ್ನು ಲಾಕ್‌ಡೌನ್‌ ಮಾಡಲಾಗಿದೆ. ಮೂರು ಸಾವಿರದಷ್ಟು ಮಂದಿ ಓಟಗಾರರು ಭಾಗಿಯಾಗಲಿದ್ದ ಮ್ಯಾರಥಾನ್‌ ಅನ್ನು ಭಾನುವಾರ ಸಂಘಟಕರು ಅನಿರ್ದಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಾರೆ.

ಎಚ್ಚರ ಎಚ್ಚರ: ಚೀನಾದಲ್ಲಿ ಮತ್ತೆ ಸ್ಫೋಟಗೊಂಡಿದೆ ಕೊರೊನಾವೈರಸ್ 3ನೇ ಅಲೆ!ಎಚ್ಚರ ಎಚ್ಚರ: ಚೀನಾದಲ್ಲಿ ಮತ್ತೆ ಸ್ಫೋಟಗೊಂಡಿದೆ ಕೊರೊನಾವೈರಸ್ 3ನೇ ಅಲೆ!

 ಒಂದೆರಡು ಸೋಂಕು ಪ್ರಕರಣಕ್ಕೆ ಯಾಕೆ ಚೀನಾದಲ್ಲಿ ಆತಂಕ?

ಒಂದೆರಡು ಸೋಂಕು ಪ್ರಕರಣಕ್ಕೆ ಯಾಕೆ ಚೀನಾದಲ್ಲಿ ಆತಂಕ?

ಬೇರೆ ಎಲ್ಲಾ ದೇಶಗಳಿಗೆ ಹೋಲಿಕೆ ಮಾಡಿದಾಗ ಚೀನಾದಲ್ಲಿ ಪ್ರಸ್ತುತ ದಾಖಲು ಆಗುತ್ತಿರುವ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ಕಡಿಮೆ ಆಗಿದೆ. ಆದರೆ ಚೀನಾದಲ್ಲಿ ಹಲವು ಸಮಯದಿಂದ ಯಾವುದೇ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿರಲಿಲ್ಲ. ಚೀನಾವು ಜಿರೋ ಕೊರೊನಾ ವೈರಸ್‌ ಪ್ರಕರಣಗಳನ್ನು ದಾಖಲು ಮಾಡಿತ್ತು. ಈ ಹಿನ್ನೆಲೆಯಲ್ಲಿ ಚೀನಾದಲ್ಲಿ ಮತ್ತೆ ಕೊರೊನಾ ವೈರಸ್‌ ಸೋಂಕು ಕಾಣಿಸಿಕೊಂಡಿರುವುದು ಮುಂದಿನ ಅಲೆಯ ಆತಂಕ ಸೃಷ್ಟಿ ಮಾಡಿದೆ. ಅಲ್ಲಿನ ಸರ್ಕಾರ ಈ ನಿಟ್ಟಿನಲ್ಲಿ ಈಗಲೇ ಲಾಕ್‌ಡೌನ್‌ನಂತಹ ಕಠಿಣ ಕ್ರಮವನ್ನು ಕೈಗೊಳ್ಳುತ್ತಿದೆ.

ಕುಸಿದು ಬಿತ್ತು ಚೀನಾ ಜಿಡಿಪಿ! 'ಡ್ರ್ಯಾಗನ್' ಆರ್ಥಿಕತೆ ಸೋಲಿಗೆ ಕಾರಣವೇನು?ಕುಸಿದು ಬಿತ್ತು ಚೀನಾ ಜಿಡಿಪಿ! 'ಡ್ರ್ಯಾಗನ್' ಆರ್ಥಿಕತೆ ಸೋಲಿಗೆ ಕಾರಣವೇನು?

 ಕೋವಿಡ್‌ ಹೆಚ್ಚಳ: ಪಕ್ಷದ ಕಾರ್ಯದರ್ಶಿ ಅಮಾನತು

ಕೋವಿಡ್‌ ಹೆಚ್ಚಳ: ಪಕ್ಷದ ಕಾರ್ಯದರ್ಶಿ ಅಮಾನತು

ಈ ನಡುವೆ ಕೊರೊನಾ ವೈರಸ್‌ ಸೋಂಕನ್ನು ಸರಿಯಾಗಿ ನಿಯಂತ್ರಣ ಮಾಡದ ಆರೋಪದಲ್ಲಿ ಚೀನಾದ ಉತ್ತರ ಒಳ ಮಂಗೋಲಿಯಾ ಪ್ರದೇಶದ ಎಜಿನ್ ಬ್ಯಾನರ್‌ನ ಪಕ್ಷದ ಕಾರ್ಯದರ್ಶಿಯನ್ನು ಸ್ಥಾನದಿಂದ ತೆಗೆದು ಹಾಕಲಾಗಿದೆ. ಕೊರೊನಾ ವೈರಸ್‌ ಸೋಂಕು ಕಂಡರೂ ಅದನ್ನು ಸರಿಯಾಗಿ ನಿಯಂತ್ರಣ ಮಾಡದ ಕಾರಣ, ನಿಯಮಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರದ ಕಾರಣದಿಂದಾಗಿ ಪಕ್ಷದ ಕಾರ್ಯದರ್ಶಿಯನ್ನು ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಕಮ್ಯೂನಿಸ್ಟ್‌ ಆಡಳಿತವಿರುವ ಚೀನಾ ದೇಶದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ನಗರದಲ್ಲಿ ಕೊರೊನಾ ವೈರಸ್‌ ಸೋಂಕಿನ ಮುಂದಿನ ಅಲೆಯು ಕಾಣಿಸಿಕೊಂಡಿದೆ. ಲಾಂಝೌ ನಗರ ಮತ್ತು ಒಳ ಮಂಗೋಲಿಯಾ ಪ್ರದೇಶದ ಕೆಲವು ಭಾಗಗಳಿಗೆ ಈಗಾಗಲೇ ಬಸ್ ಮತ್ತು ಟ್ಯಾಕ್ಸಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

(ಒ‌ನ್‌ಇಂಡಿಯಾ ಸುದ್ದಿ)

English summary
China Puts City Of 4 Million Under Lockdown Due To Spike In Covid Cases. Read on.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X