keyboard_backspace

ಕಚ್ಚಾತೈಲದ ನಂಟು: ಭಾರತದಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲದ ಬೆಲೆ ಏಕೆ ದುಬಾರಿ!?

Google Oneindia Kannada News

ನವದೆಹಲಿ, ಅಕ್ಟೋಬರ್ 20: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಚೇತರಿಕೆ ನಂತರ ಆರ್ಥಿಕ ಚಟುವಟಿಕೆ ಚುರುಕುಗೊಂಡಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ತೆರಿಗೆ ನೀತಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಆಕಾಶದೆತ್ತರಕ್ಕೆ ಮುಟ್ಟಿಸಿದೆ. ಇದರ ಮಧ್ಯೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆ ಏರಿಕೆ ಆಗುತ್ತಿರುವುದು ಗಾಯದ ಮೇಲೆ ಬರೆ ಎಳೆಯುವಂತಾ ಸ್ಥಿತಿ ಎದುರಾಗಿದೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಈಗಾಗಲೇ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ಕೆಲವು ರಾಜ್ಯಗಳಲ್ಲಿ ಈಗಾಗಲೇ 110ರ ಗಡಿಗೆ ಸಮೀಪಿಸಿದ್ದರೆ ಡೀಸೆಲ್ ದರ 100 ರೂಪಾಯಿ ಗಡಿ ದಾಟಿ ಹೋಗಿದೆ. ಇನ್ನೊಂದು ದಿಕ್ಕಿನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿದೆ. ಕಲ್ಲಿದ್ದಲು ಮತ್ತು ವಿದ್ಯುತ್ ಕೊರತೆ ಸಮಸ್ಯೆಯ ನಡುವೆ 2018ರ ನಂತರ ಮೊದಲ ಬಾರಿಗೆ ಕಚ್ಚಾತೈಲದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಆಗುವುದೇಕೆ?, ಕಚ್ಚಾತೈಲ ಉತ್ಪಾದಿಸುತ್ತಿರುವ ರಾಷ್ಟ್ರಗಳು ಪೂರೈಕೆ ಪ್ರಮಾಣವನ್ನು ತಗ್ಗಿಸುವುದಕ್ಕೆ ಒಪ್ಪಿದ್ದರ ಹಿಂದಿನ ಮುಖ್ಯ ಕಾರಣವೇನು?, ಚುರುಕುಗೊಂಡ ಆರ್ಥಿಕತೆಗೆ ಪೂರಕ ವೇಗದಲ್ಲಿ OPEC+ ರಾಷ್ಟ್ರಗಳು ಹಿಂದೆ ಬಿದ್ದಿವೆಯೇ?, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲಗಳ ಬೆಲೆಯ ಏರಿಳಿತ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲೆ ಪರಿಣಾಮ ಬೀರಬಲ್ಲದೇ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ವಿಶ್ವದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದ್ದಂತೆ ಜಾಗತಿಕ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆ ಬ್ರೆಂಟ್ ಕಚ್ಚಾತೈಲದ ಬೆಲೆ ಈ ವಾರದ ಆರಂಭದಲ್ಲಿ ಪ್ರತಿ ಬ್ಯಾರೆಲ್‌ಗೆ 85 ಡಾಲರ್ ಅನ್ನು ಮೀರಿದೆ. ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆಯ ಹೊರತಾಗಿಯೂ ಪ್ರಮುಖ ತೈಲ ಉತ್ಪಾದನಾ ದೇಶಗಳು ಕಚ್ಚಾತೈಲ ಪೂರೈಕೆಯನ್ನು ಮಾಡುತ್ತಿವೆ. ಒಂದು ವರ್ಷದ ಹಿಂದೆ ಪ್ರತಿ ಬ್ಯಾರೆಲ್‌ಗೆ 42.5 ಡಾಲರ್ ಆಗಿದ್ದು, ಈ ಬೆಲೆಗೆ ಹೋಲಿಸಿದರೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಬಹುಪಾಲು ಡಬಲ್ ಆಗಿದೆ.

ಭಾರತದ ಮೇಲೆ ಕಚ್ಚಾತೈಲ ಬೆಲೆ ಏರಿಕೆ ಪ್ರಭಾವ ಹೇಗಿದೆ?

ಭಾರತದ ಮೇಲೆ ಕಚ್ಚಾತೈಲ ಬೆಲೆ ಏರಿಕೆ ಪ್ರಭಾವ ಹೇಗಿದೆ?

ಭಾರತದಲ್ಲಿ 2021ರ ಆರಂಭದಿಂದಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ನಿಯಮಿತವಾಗಿ ಏರಿಕೆಯಾಗುತ್ತಿದ್ದು, ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿ ಆಗಿದೆ. ನವದೆಹಲಿಯಲ್ಲಿ ಕಳೆದ ಮೂರು ವಾರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 4.65 ರೂ ಹೆಚ್ಚಾಗಿದ್ದು, ಪ್ರತಿ ಲೀಟರ್‌ಗೆ 105.84 ರೂ. ಆಗಿದೆ. ಅದೇ ರೀತಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 5.75 ರೂ.ಗೆ ಏರಿಕೆಯಾಗಿದ್ದು 94.6 ರೂಪಾಯಿಗೆ ತಲುಪಿದೆ.

ಪೆಟ್ರೋಲ್ ಬಳಕೆ ಏರಿಕೆ, ಡೀಸೆಲ್ ಬಳಕೆ ಇಳಿಕೆ!

ಪೆಟ್ರೋಲ್ ಬಳಕೆ ಏರಿಕೆ, ಡೀಸೆಲ್ ಬಳಕೆ ಇಳಿಕೆ!

ಭಾರತವು ಪೆಟ್ರೋಲ್ ಬಳಕೆಯಲ್ಲಿ ತ್ವರಿತ ಚೇತರಿಕೆ ಕಂಡಿದ್ದು, ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದಂತೆ ನಿರ್ಬಂಧಗಳ ನಂತರ ಸೆಪ್ಟೆಂಬರ್‌ನಲ್ಲಿ ಪೆಟ್ರೋಲ್ ಬಳಕೆ ಶೇ.9ರಷ್ಟು ಹೆಚ್ಚಳವಾಗಿದ್ದು, ಡೀಸೆಲ್ ಬಳಕೆ 2020ರ ಮಟ್ಟಕ್ಕಿಂತ ಶೇ.6.5ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಶೇಕಡಾ 38 ರಷ್ಟು ಡೀಸೆಲ್ ಪಾಲು ಹೊಂದಿದೆ. ಇದು ಕೈಗಾರಿಕೆ ಮತ್ತು ಕೃಷಿಯಲ್ಲಿ ಬಳಸುವ ಪ್ರಮುಖ ಇಂಧನವಾಗಿದೆ. "ಭಾರತದಲ್ಲಿ ಮುಂಬರುವ ಹಬ್ಬದ ದಿನಗಳಲ್ಲಿ ಆರ್ಥಿಕ ಚೇತರಿಕೆಯನ್ನು ವೇಗಗೊಳಿಸಲು ಮತ್ತು ಡೀಸೆಲ್ ಬಳಕೆ ಹೆಚ್ಚಾಗಲಿದ್ದು, ಬೇಡಿಕೆಯೂ ಹೆಚ್ಚುವ ನಿರೀಕ್ಷೆಯಿದೆ," ಎಂದು ಎಸ್ & ಪಿ ಗ್ಲೋಬಲ್ ಪ್ಲಾಟ್ಸ್ ಅನಾಲಿಟಿಕ್ಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚುವರಿಯಾಗಿ 4 ಲಕ್ಷ ಬ್ಯಾರಲ್ ಕಚ್ಚಾತೈಲ ಉತ್ಪಾದನೆ

ಹೆಚ್ಚುವರಿಯಾಗಿ 4 ಲಕ್ಷ ಬ್ಯಾರಲ್ ಕಚ್ಚಾತೈಲ ಉತ್ಪಾದನೆ

ತೈಲ ಉತ್ಪಾದಿಸುವ OPEC+ ದೇಶಗಳ ಗುಂಪು ತನ್ನ ಇತ್ತೀಚಿನ ಸುತ್ತಿನ ಸಭೆಗಳಲ್ಲಿ ಹೆಚ್ಚುವರಿ ಕಚ್ಚಾತೈಲ ಉತ್ಪಾದಿಸುವ ಬಗ್ಗೆ ಚರ್ಚೆ ನಡೆಸಿವೆ. ನವೆಂಬರ್‌ನಲ್ಲಿ ತಿಂಗಳಲ್ಲಿ ಒಟ್ಟು ಕಚ್ಚಾತೈಲ ಪೂರೈಕೆಯನ್ನು 4,00,000 ಬ್ಯಾರೆಲ್‌ಗಳಷ್ಟು ಹೆಚ್ಚಿಸುವುದಾಗಿ ದೃಢಪಡಿಸಿವೆ. ಅಗ್ರ ತೈಲ ಉತ್ಪಾದಿಸುವ ದೇಶಗಳಾದ ಸೌದಿ ಅರೇಬಿಯಾ, ರಷ್ಯಾ, ಇರಾಕ್, ಯುಎಇ ಮತ್ತು ಕುವೈತ್-ಉತ್ಪಾದನೆಯ ಉಲ್ಲೇಖದ ಮಟ್ಟಕ್ಕಿಂತ ನವೆಂಬರ್‌ನಲ್ಲಿ ಹೆಚ್ಚಳದ ನಂತರವೂ ಶೇ.14ರಷ್ಟು ಕಡಿಮೆಯಾಗಿರುತ್ತದೆ.

2020ರಲ್ಲಿ ಕಚ್ಚಾತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ

2020ರಲ್ಲಿ ಕಚ್ಚಾತೈಲ ಉತ್ಪಾದನೆ ಕಡಿತಕ್ಕೆ ಒಪ್ಪಿಗೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ 2020ರಲ್ಲಿ OPEC+ ರಾಷ್ಟ್ರಗಳು ಕಚ್ಚಾತೈಲ ಉತ್ಪಾದನೆ ಮತ್ತು ಪೂರೈಕೆಯ ಪ್ರಮಾಣಯನ್ನು ಕಡಿತಗೊಳಿಸುವುದಕ್ಕೆ ಒಪ್ಪಿಗೆ ಸೂಚಿಸಿತ್ತು. ಆದರೆ ಬೇಡಿಕೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಕಚ್ಚಾತೈಲ ಉತ್ಪಾದನೆ ವೇಗವು ನಿಧಾನಗತಿಯಲ್ಲಿದೆ. ಭಾರತ ಮತ್ತು ಇತರ ತೈಲ ಆಮದು ರಾಷ್ಟ್ರಗಳು ತೈಲ ಪೂರೈಕೆಯನ್ನು ವೇಗವಾಗಿ ಹೆಚ್ಚಿಸಲು OPEC+ ಗೆ ಕರೆ ನೀಡಿವೆ. ಕಚ್ಚಾ ತೈಲ ಬೆಲೆ ಏರಿಕೆಯು ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಧಕ್ಕೆ ತರಬಹುದು ಎಂದು ರಾಷ್ಟ್ರಗಳು ವಾದಿಸಿದೆ.

OPEC+ ಸದಸ್ಯ ರಾಷ್ಟ್ರಗಳ ಬಗ್ಗೆ ತಿಳಿಯೋಣ

OPEC+ ಸದಸ್ಯ ರಾಷ್ಟ್ರಗಳ ಬಗ್ಗೆ ತಿಳಿಯೋಣ

ಕಚ್ಚಾತೈಲ ಉತ್ಪಾದಿಸುವ ರಾಷ್ಟ್ರಗಳ ಒಕ್ಕೂಟಕ್ಕೆ OPEC+ ಎಂಬ ಹೆಸರಿದೆ. ಅಲ್ಜೀರಿಯಾ, ಅಂಗೋಲಾ, ಈಕ್ವಟೋರಿಯಲ್ ಗಿನಿಯಾ, ಗ್ಯಾಬೊನ್, ಇರಾನ್, ಇರಾಕ್, ಕುವೈತ್, ಲಿಬಿಯಾ, ನೈಜೀರಿಯಾ, ರಿಪಬ್ಲಿಕ್ ಆಫ್ ಕಾಂಗೋ, ಸೌದಿ ಅರೇಬಿಯಾ (ವಾಸ್ತವಿಕ ನಾಯಕ), ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ವೆನಿಜುವೆಲಾ ಈ ಒಕ್ಕೂಟದ ಸದಸ್ಯ ರಾಷ್ಟ್ರಗಳಾಗಿವೆ. ಈ ರಾಷ್ಟ್ರಗಳಲ್ಲಿ ಕಚ್ಚಾತೈಲವನ್ನು ಉತ್ಪಾದನೆ ಮಾಡಲಾಗುತ್ತದೆ.

ನೈಸರ್ಗಿಕ ಅನಿಲ ವಿತರಣೆಯಲ್ಲಿ ಸಾರ್ವಕಾಲಿಕ ದಾಖಲೆ

ನೈಸರ್ಗಿಕ ಅನಿಲ ವಿತರಣೆಯಲ್ಲಿ ಸಾರ್ವಕಾಲಿಕ ದಾಖಲೆ

ಏಷ್ಯಾಕ್ಕೆ ನೈಸರ್ಗಿಕ ಅನಿಲ ವಿತರಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು ಪ್ರತಿ ಮೆಟ್ರಿಕ್ ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್ (MMBTU)ಗೆ 56.3 ಡಾಲರ್ ಅನ್ನು ತಲುಪಿದೆ ಎಂದು SP ಗ್ಲೋಬಲ್ ಪ್ಲಾಟ್ಸ್ ಹೇಳಿದೆ. ಐಡಾ ಚಂಡಮಾರುತದಿಂದ ಉಂಟಾದ ಅಡೆತಡೆ ಮತ್ತು ಯುರೋಪಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯ ನಡುವೆ ರಷ್ಯಾದಿಂದ ನಿರೀಕ್ಷಿತ ಪ್ರಮಾಣದ ನೈಸರ್ಗಿಕ ಅನಿಲ ಪೂರೈಕೆ ಆಗುತ್ತಿಲ್ಲ. ಇದರಿಂದ ಚಳಿಗಾಲದ ಹೊತ್ತಿಗೆ ಯುಎಸ್ನಲ್ಲಿ ನೈಸರ್ಗಿಕ ಅನಿಲದ ಕೊರತೆ ಹೆಚ್ಚಾಗುವ ಸಾಧ್ಯತೆಗಳಿವೆ.

ಕಲ್ಲಿದ್ದಲು ಕೊರತೆ ಸೃಷ್ಟಿಸಿದ ಅವಾಂತರಗಳು

ಕಲ್ಲಿದ್ದಲು ಕೊರತೆ ಸೃಷ್ಟಿಸಿದ ಅವಾಂತರಗಳು

ಚೀನಾ ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲ್ಲಿದ್ದಲು ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಇನ್ನೊಂದು ಕಡೆಯಲ್ಲಿ ಚೀನಾದಾದ್ಯಂತ ಕಾರ್ಖಾನೆಗಳು ವಿದ್ಯುತ್ ಕಡಿತವನ್ನು ಎದುರಿಸುತ್ತಿದೆ. ಜಾಗತಿಕ ಬೇಡಿಕೆಯಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ಇಂಡೋನೇಷಿಯಾದಲ್ಲಿ ಕಳೆದ ಮಾರ್ಚ್ ನಲ್ಲಿ ಪ್ರತಿ ಟನ್‌ಗೆ 60 ಡಾಲರ್ ಇದ್ದ ಬೆಲೆಯು ಅಕ್ಟೋಬರ್ ವೇಳೆಗೆ ಪ್ರತಿ ಟನ್‌ಗೆ 200 ಡಾಲರ್ ಗೆ ಏರಿಕೆಯಾಗಿದೆ.

ದೇಶದಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆ

ದೇಶದಲ್ಲಿ ನೈಸರ್ಗಿಕ ಅನಿಲ ಬೆಲೆ ಏರಿಕೆ

ಹೆಚ್ಚಿನ ಅಂತರಾಷ್ಟ್ರೀಯ ಅನಿಲ ಬೆಲೆಗಳು ದೇಶೀಯವಾಗಿ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯಲ್ಲಿ ಪರಿಷ್ಕರಣೆಗೆ ಕಾರಣವಾಗಿದೆ. ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶವು (ಪಿಪಿಎಸಿ) ನಾಮನಿರ್ದೇಶನದ ಅಡಿಯಲ್ಲಿ ಸರ್ಕಾರಿ ಸ್ವಾಮ್ಯದ ONGC ಮತ್ತು ಆಯಿಲ್ ಇಂಡಿಯಾ ಉತ್ಪಾದಿಸುವ ನೈಸರ್ಗಿಕ ಅನಿಲದ ಬೆಲೆಯನ್ನು ಹಿಂದಿನ ಆರು ತಿಂಗಳ ಅವಧಿಯಲ್ಲಿ ಪ್ರತಿ MMBTUಗೆ 1.79 ಡಾಲರ್ ನಿಂದ 2.9 ಡಾಲರ್ ಗೆ ನಿಗದಿಪಡಿಸಿತು. ಪಿಪಿಎಸಿ ಆಳದ ನೀರು, ಹೆಚ್ಚಿನ ಒತ್ತಡ ಮತ್ತು ತಾಪಮಾನಗಳಿಂದ ಹೊರ ತೆಗೆದ ಗ್ಯಾಸ್‌ಗೆ ಕಳೆದ ಆರು ತಿಂಗಳ ಹಿಂದೆ ಪ್ರತಿ MMBTUಗೆ 3.62 ಡಾಲರ್ ಇದ್ದು, ಈಗ ಅದರ ಬೆಲೆ ಪ್ರತಿ MMBTUಗೆ 6.13 ಡಾಲರ್ ಆಗಿದೆ.

ಗ್ಯಾಸ್ ಬೆಲೆಯಲ್ಲಿನ ಹೆಚ್ಚಳವು ಸಾರಿಗೆ ಇಂಧನವಾಗಿ ಬಳಸುವ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್ ಜಿ) ಮತ್ತು ಅಡುಗೆ ಇಂಧನವಾಗಿ ಬಳಸುವ ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್ ಜಿ) ಎರಡರ ಬೆಲೆಯ ಏರಿಕೆಯಾಗಿದೆ. ಸಿಎನ್ಜಿಯ ಬೆಲೆಯು ಈ ತಿಂಗಳಲ್ಲಿ ಪ್ರತಿ ಕೆಜಿಗೆ 4.56 ರೂ.ಗಳಿಂದ ರಾಷ್ಟ್ರೀಯ ರಾಜಧಾನಿಯಲ್ಲಿ 49.8 ರೂ.ಗಳಿಗೆ ಹೆಚ್ಚಾಗಿದೆ. ಮತ್ತು ಪಿಎನ್ಜಿಯ ಪ್ರತಿ ಪಿಎಂಜಿಗೆ ಪ್ರತಿ ರೂ. 4.2 ರಷ್ಟು ಏರಿಕೆಯಾಗಿದ್ದು, 35.11 ರೂಪಾಯಿ ತಲುಪಿದೆ.

English summary
Soaring Fuel Prices How Impact on Indian Petrol And Diesel Rates; Explained in Kannada.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X