keyboard_backspace

ಸಿಂಘು ಗಡಿ ಹತ್ಯೆ ಪ್ರಕರಣ: ರೈತ vs ಕಾರ್ಮಿಕ, ಹೇಗೆ ಆದೀತು?

Google Oneindia Kannada News

ನವದೆಹಲಿ, ಅಕ್ಟೋಬರ್‌ 17: ಸಿಂಘು ಗಡಿಯಲ್ಲಿ ನಡೆದ ಹತ್ಯೆಯ ಬೆನ್ನಲ್ಲೇ ರೈತರೆಡೆಗೆ ಕೆಲವರ ಗಮನ ಹರಿದಿದ್ದು ಕೂಡಾ ಇದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಸಿಂಘು ಗಡಿಯಲ್ಲಿ ಕಳೆದ ಹಲವಾರು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಗಡಿಯಲ್ಲಿ ನಡೆದ ಈ ಹತ್ಯೆಯು ಭಾರೀ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಈ ಬಗ್ಗೆ ಭಾರತೀಯ ಕಿಸಾನ್‌ ಮೋರ್ಚಾ ಸ್ಪಷ್ಟನೆ ನೀಡಿದೆ. ಹಾಗೆಯೇ ಈ ಪ್ರಕರಣ ರೈತರಿಗೆ ಸಂಬಂಧಪಟ್ಟಿದ್ದಲ್ಲ, ಧಾರ್ಮಿಕ ನೆಲೆಗಟ್ಟಿನಲ್ಲಿ ನಡೆದ ಕ್ರಿಮಿನಲ್‌ ಪ್ರಕರಣ ಎಂಬುವುದು ಕೂಡಾ ಸ್ಪಷ್ಟವಾಗಿದೆ.

ಆದರೆ ಈ ಘಟನೆಯನ್ನು ರೈತರು ವರ್ಸಸ್‌ ಕಾರ್ಮಿಕರು ಎಂಬಂತೆ ಬಿಂಬಿಸಲಾಗುತ್ತಿದೆ. ಇನ್ನು ಈ ನಡುವೆ ಸಂತ್ರಸ್ತ ಹಾಗೂ ಕೊಲೆ ಮಾಡಿದ ವ್ಯಕ್ತಿ ಇಬ್ಬರು ದಲಿತ ಸಮುದಾಯಕ್ಕೆ ಸೇರಿದವರು ಎಂಬುವುದು ಇಲ್ಲಿ ನಾವು ಗಮನಿಸಬೇಕಾದ ವಿಷಯ. ಪಂಜಾಬ್‌ನಲ್ಲಿ ಜಾತಿಯ ವಿಚಾರಗಳು ಭಾರೀ ಪ್ರಭಾವ ಬೀರುತ್ತದೆ ಎಂಬುವುದು ನಿಜವಾದ ವಿಚಾರ. ಆದರೆ ಈ ಸಂದರ್ಭದಲ್ಲಿ ನಾವು ಪಂಜಾಬಿಗರು ಹಾಗೂ ಸಿಖರು ಎಂಬುವುದನ್ನು ಬೇರೆ ಬೇರೆಯಾಗಿ ನೋಡುವುದು ಅತ್ಯವಶ್ಯಕ.

ಸಿಂಘು ಗಡಿಯಲ್ಲಿ ಹತ್ಯೆಯಾದ ಲಖಬೀರ್ ಸಿಂಗ್ ಜೇಬಲ್ಲಿ 50 ರೂ.: ಕುಟುಂಬಸ್ಥರು ಹೇಳುವುದೇನು?ಸಿಂಘು ಗಡಿಯಲ್ಲಿ ಹತ್ಯೆಯಾದ ಲಖಬೀರ್ ಸಿಂಗ್ ಜೇಬಲ್ಲಿ 50 ರೂ.: ಕುಟುಂಬಸ್ಥರು ಹೇಳುವುದೇನು?

ಪಂಜಾಬ್‌ನಲ್ಲಿ ಜಾತಿ ಪದ್ಧತಿಯು ಅಧಿಕವಾಗಿದ್ದರೂ ಕೂಡಾ ಸಿಖ್‌ ಸಮುದಾಯದವರು ಜಾತಿ ಪದ್ಧತಿಯನ್ನು ಕಠಿಣವಾಗಿ ವಿರೋಧ ಮಾಡುತ್ತಾರೆ. ಸಿಖ್‌ ಸಮುದಾಯದಲ್ಲಿ ಜಾತಿ ಕ್ರಮವೇ ಇಲ್ಲ ಎಂದು ಕೂಡಾ ನಾವು ಹೇಳಬಹುದು. ಸಿಂಘು ಗಡಿ ಹತ್ಯೆಯನ್ನು ಖಂಡಿಸಿದ ರೈತರು ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.

 ಪಂಜಾಬ್‌ ಗ್ರಾಮ ಭಾಗದಲ್ಲಿ ದಲಿತರ ಸ್ಥಿತಿ ಶೋಚನೀಯ

ಪಂಜಾಬ್‌ ಗ್ರಾಮ ಭಾಗದಲ್ಲಿ ದಲಿತರ ಸ್ಥಿತಿ ಶೋಚನೀಯ

ಶ್ರೀ ಗುರು ಗ್ರಂಥ ಸಾಹಿಬ್‌ಗೆ ದಲಿತರು ಕೂಡಾ ಕೊಡುಗೆಯನ್ನು ನೀಡಿದ್ದಾರೆ. ಖಾಲ್ಸಾ ಪಂಥದ ಹಲವಾರು ಚಳವಳಿಗಳಲ್ಲಿ ದಲಿತರು ಕೂಡಾ ನಾಯಕರು ಆಗಿದ್ದರು. ಆದರೆ ಇಲ್ಲಿ ಪ್ರಮುಖವಾಗಿ ಜಾತಿ ಪದ್ಧತಿ ಎಂಬ ಸಮಸ್ಯೆ ಕಂಡು ಬರುವುದು ಗ್ರಾಮೀಣ ಪ್ರದೇಶದಲ್ಲಿ ಇಲ್ಲಿ ಹಿಂದುತ್ವ ಪಿತೃಪ್ರಧಾನ ವ್ಯವಸ್ಥೆಯು ಆಳವಾಗಿ ಬೇರೂರಿದೆ. ಪಂಜಾಬ್‌ನಲ್ಲಿ ಶೇಕಡ 33 ದಲಿತರು ಇದ್ದಾರೆ. ಆದರೆ ಶೇಕಡ 3 ರಷ್ಟು ಕೃಷಿ ಭೂಮಿಯನ್ನು ಮಾತ್ರ ದಲಿತರು ಹೊಂದಿದ್ದಾರೆ. ದಲಿತರು ದಿನ ನಿತ್ಯ ಈ ಗ್ರಾಮೀಣ ಪ್ರದೇಶದಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಇನ್ನು ಪಂಜಾಬ್‌ನಲ್ಲಿ ದಲಿತ ಮಹಿಳೆಯರ ಸ್ಥಿತಿಯು ಇನ್ನಷ್ಟು ಶೋಚನೀಯವಾಗಿದೆ. ದಲಿತ ಮುಖ್ಯಮಂತ್ರಿ ಇದ್ದರೂ, ದಲಿತ ಸಮುದಾಯಕ್ಕೆ ಸೇರಿದ ಪೊಲೀಸ್‌ ಮುಖ್ಯಸ್ಥರು ಇದ್ದರೂ, ದಲಿತ-ಸ್ತ್ರೀವಾದಿ-ಎಡ ಚಿಂತನೆಗಳು ಉಲ್ಲ ಗುಂಪುಗಳು ಬಹಳ ಸಕ್ರಿಯವಾಗಿ ಇದ್ದರೂ ಕೂಡಾ ಪಂಜಾಬಿನಲ್ಲಿ ದಲಿತರು ವಂಚನೆ ಒಳಗಾಗಿದ್ದಾರೆ, ಹಿಂದುಳಿದಿದ್ದಾರೆ ಹಾಗೂ ಸಾಮಾಜಿಕ ಶೋಷಣೆಗೆ ಒಳಾಗುತ್ತಿದ್ದಾರೆ.

 ದಲಿತರು vs ಜತ್‌ ಸಮುದಾಯ/ ರೈತ vs ಕಾರ್ಮಿಕ

ದಲಿತರು vs ಜತ್‌ ಸಮುದಾಯ/ ರೈತ vs ಕಾರ್ಮಿಕ

ಈ ಎಲ್ಲಾ ಅಂಶಗಳ ನಡುವೆ ಇನ್ನೂ ಕೂಡಾ ಕೆಲವು ಅಂಶಗಳು ಪಂಜಾಬ್‌ನಲ್ಲಿ ಇದೆ. ಇದು ಮುಖ್ಯವಾಗಿ ದಲಿತರ ಕೆಲವು ವಿಚಾರಗಳ ಮೇಲೆ ಇರುವ ಕುತೂಹಲವೆಂದೂ ಹೇಳಬಹುದು. ಜಾತಿ ಶೋಷಣೆಯು ನಿಜವಾಗಿ ಇದೆ ಹಾಗೂ ಅದನ್ನು ನಾವು ಒಪ್ಪುವಂತಿಲ್ಲ. ದಲಿತರು ಮತ್ತು ಜತ್‌ ಸಮುದಾಯಕ್ಕೆ ಸೇರಿದವರ ನಡುವೆ ಹಾಗೂ ರೈತರು ಮತ್ತು ಕಾರ್ಮಿಕರ ನಡುವೆ ಪಂಜಾಬ್‌ನಲ್ಲಿ ನೂರಾರು ವಿಚಾರಗಳು ಇದೆ. ಇನ್ನು ಈ ಸಿಂಘು ಗಡಿಯಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ನಾವು ಮುಖ್ಯವಾಗಿ ಮೃತ ವ್ಯಕ್ತಿ ದಲಿತ ಎಂಬುವುದನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ನಾವು ಲಖಬೀರ್‌ ಸಿಂಗ್‌ ದಲಿತ ವ್ಯಕ್ತಿ ಎಂಬುವುದನ್ನು ಹೆಚ್ಚು ಸುಲಭವಾಗಿ ಕೇಂದ್ರೀಕರಿಸುತ್ತೇವೆ. ಆದರೆ ಈ ನಡುವೆ ಈ ಕೊಲೆಯನ್ನು ಮಾಡಿದ ಸರಬ್‌ಜೀತ್‌ ಸಿಂಗ್‌ ಹಾಗೂ ನಾರಾಯಣ ಸಿಂಗ್‌ ಇಬ್ಬರೂ ಕೂಡಾ ದಲಿತರು ಎಂಬುವುದನ್ನು ನಾವು ಹೆಚ್ಚಾಗಿ ಗಮನ ಹರಿಸುವುದಿಲ್ಲ. ಈ ಪ್ರಕರಣವು ಸ್ಪಷ್ಟವಾಗಿ ಧಾಮಿರ್ಕ ವಿಚಾರ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಸಿಂಘು ಗಡಿ ಹತ್ಯೆ ಪ್ರಕರಣ: ಪಂಜಾಬ್‌ನಲ್ಲಿ 2ನೇ ಆರೋಪಿ ನಾರಾಯಣ್ ಸಿಂಗ್ ಬಂಧನಸಿಂಘು ಗಡಿ ಹತ್ಯೆ ಪ್ರಕರಣ: ಪಂಜಾಬ್‌ನಲ್ಲಿ 2ನೇ ಆರೋಪಿ ನಾರಾಯಣ್ ಸಿಂಗ್ ಬಂಧನ

 2015 ರ ಘಟನೆ: ವರ್ಷ ಹಲವು ಕಳೆದರೂ ಇನ್ನೂ ದೊರಕಿಲ್ಲ ನ್ಯಾಯ

2015 ರ ಘಟನೆ: ವರ್ಷ ಹಲವು ಕಳೆದರೂ ಇನ್ನೂ ದೊರಕಿಲ್ಲ ನ್ಯಾಯ

ಸರ್ಬಲೋಹ್ ಧಾರ್ಮಿಕ ಗ್ರಂಥಕ್ಕೆ ಅಪಮಾನ ಮಾಡಿದ ಆರೋಪದಲ್ಲಿ ನಿಹಾಂಗ್‌ ಗುಂಪು ಈ ದಲಿತ ವ್ಯಕ್ತಿಯ ಹತ್ಯೆಯನ್ನು ಮಾಡಿದೆ. ನಿಹಾಂಗ್‌ ಗುಂಪು ಮೊದಲು ಎಡ ಕೈಯನ್ನು ಕತ್ತರಿಸಿದ್ದು, ಬಳಿಕ ಈ ವ್ಯಕ್ತಿಯ ಕಾಲಿಗೆ ಹಾನಿ ಮಾಡಿದೆ. ವ್ಯಕ್ತಿಯ ಮೃತ ದೇಹವು ಪ್ರತಿಭಟನಾ ನಿರತ ರೈತರ ಮುಖ್ಯ ವೇದಿಕೆ ಬಳಿ ಬ್ಯಾರಿಕೇಡ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೂಪಾದ ಆಯುಧದಿಂದ ವ್ಯಕ್ತಿಯ ದೇಹದ ಮೇಲೆ ದಾಳಿ ಮಾಡಿದ ಗುರುತುಗಳು ಪತ್ತೆಯಾಗಿದ್ದವು. ಇಂತಹ ಘಟನೆಯು ಈ ಹಿಂದೆ 2015 ರಲ್ಲಿ ನಡೆದಿತ್ತು. 2015 ರಲ್ಲಿ ಶ್ರೀ ಗುರು ಗ್ರಂಥ ಸಾಹೀಬಗೆ ಹಾನಿ ಉಂಟು ಮಾಡಿದ ಘಟನೆ ನಡೆದಿದೆ. ಈ ಹಿನ್ನೆಲೆ ಅದನ್ನು ವಿರೋಧ ಮಾಡಿ ಮಾಡಿದ್ದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರು ಸಿಖ್‌ ಸಮುದಾಯದವರು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮೂರು ವಿಚಾರಣಾ ಆಯೋಗವನ್ನು ರಚನೆ ಮಾಡಲಾಗಿತ್ತು.ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮೂರು ಬಾರಿ ಮುಖ್ಯಮಂತ್ರಿ ಬದಲವಾವಣೆ ಆಗಿದೆ. ಆದರೆ ಈ ಪ್ರಕರಣದಲ್ಲಿ ಮೃತ ಕುಟುಂಬಕ್ಕೆ ಯಾವ ನ್ಯಾಯವು ದೊರಕಿಲ್ಲ.

 ಸಿಂಘು ಗಡಿ ಪ್ರಕರಣ: ಇನ್ನೂ ಪ್ರಶ್ನೆಯಾಗಿಯೇ ಇದೆ ಈ ಪ್ರಶ್ನೆಗಳು?

ಸಿಂಘು ಗಡಿ ಪ್ರಕರಣ: ಇನ್ನೂ ಪ್ರಶ್ನೆಯಾಗಿಯೇ ಇದೆ ಈ ಪ್ರಶ್ನೆಗಳು?

ಈ ಎಲ್ಲಾ ಬೆಳವಣಿಗೆಯ ನಡುವೆ ಈ ಸಿಂಘು ಗಡಿ ಪ್ರಕರಣದಲ್ಲಿ ಕೆಲವು ಪ್ರಶ್ನೆಗಳಿಗೆ ಇನ್ನೂ ಕೂಡಾ ಉತ್ತರವೇ ದೊರೆತಿಲ್ಲ. ಆ ಪ್ರಶ್ನೆಗಳು ಯಾವುದು?, ಈ ಕೆಳಗೆ ವಿವರಿಸಲಾಗಿದೆ. ಮುಂದೆ ಓದಿ.

1. ಸಿಂಘು ಗಡಿಗೆ ಲಖಬೀರ್‌ ಸಿಂಗ್‌ರನ್ನು ಕರೆ ತಂದವರು ಯಾರು?
2. ಧಾರ್ಮಿಕ ಗ್ರಂಥಕ್ಕೆ ಅಪಮಾನ ಮಾಡಲಾಗಿದೆ ಎಂಬುವುದಕ್ಕೆ ಸಾಕ್ಷಿ ಏನಿದೆ?
3. ಈ ಧಾರ್ಮಿಕ ಗ್ರಂಥಕ್ಕೆ ಅಪಮಾನ ಮಾಡಿದ ವ್ಯಕ್ತಿಯನ್ನು ಅವರು ಪೊಲೀಸ್‌ ಠಾಣೆಗೆ ಕರೆದೊಯ್ದಿಲ್ಲ ಯಾಕೆ?
4. ಸಂಯುಕ್ತ ಕಿಸಾನ್‌ ಮೋರ್ಚಾ ಹೇಗೆ ಬೇಜವಾಬ್ದಾರಿ ಆಗುತ್ತದೆ?

(ಒನ್‌ಇಂಡಿಯಾ ಸುದ್ದಿ)

English summary
Singhu Incident: Questions which still remains unanswered. Read more.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X