keyboard_backspace

ಸ್ಯಾಂಡಲ್ ವುಡ್ ಡ್ರಗ್ ಡೀಲ್: ಮಾದಕ ವ್ಯಸನಿಗಳು, ಅವರಿಗೆ ವಿಧಿಸಲಿರುವ ಜೈಲು ಶಿಕ್ಷೆ EXCLUSIVE ವಿವರ

Google Oneindia Kannada News

ಬೆಂಗಳೂರು, ಆ. 25: ಕನ್ನಡ ಸಿನಿ ರಂಗವನ್ನೇ ನಡುಗಿಸಿದ್ದ ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣಕ್ಕೆ ಹೈದರಾಬಾದ್ ನ ಸಿಎಫ್ಎಸ್ಎಲ್ ನೀಡಿರುವ ವರದಿ ನಟಿ ರಾಗಿಣಿ, ಸಂಜನಾ ಸೇರಿದಂತೆ ಡ್ರಗ್ ಡೀಲ್ ಕೋರರ ಪಾಲಿಗೆ ಮುಳುವಾಗಲಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ ಡೀಲ್ ಪ್ರಕರಣದ ಆರೋಪಿಗಳು ಸೇವಿಸಿರುವ ಡ್ರಗ್ ಯಾವುದು? ಯಾವ ಡ್ರಗ್ಸ್‌ ಸೇವನೆ ಮಾಡಿದರೆ ಎಷ್ಟು ವರ್ಷ ಶಿಕ್ಷೆ ಆಗುತ್ತದೆ ? ಸಿಎಫ್ಎಸ್ ಎಲ್ ವರದಿಯಲ್ಲಿರುವ ಡ್ರಗ್ ಸೇವನೆ ವಿವರಗಳು ಇಲ್ಲಿದೆ.

ಸ್ಯಾಂಡಲ್ ವುಡ್ ಪ್ರಕರಣ ದಾಖಲಾಗಿ ತನಿಖೆ ಆರಂಭವಾಗುತ್ತಿದ್ದಂತೆ ಕೆಲವು ಕಿಂಗ್ ಪಿನ್‌ಗಳು ಮತ್ತು ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಡ್ರಗ್ ಸೇವನೆ ಮಾಡಿ ಹಲವು ದಿನ ಕಳೆದಿದ್ದರಿಂದ ಮೂತ್ರದ ಮಾದರಿ ಪರೀಕ್ಷೆ ಹಾಗೂ ರಕ್ತದ ಮಾದರಿ ಪರೀಕ್ಷೆಯಲ್ಲಿ ಯಾವುದೇ ಮಹತ್ವದ ಸಾಕ್ಷ್ಯಾಧಾರ ಕಲೆ ಹಾಕಲು ಸಿಸಿಬಿ ಪೊಲೀಸರಿಗೆ ಹಿನ್ನೆಡೆಯುಂಟಾಗಿತ್ತು. ಆ ಬಳಿಕ ಡ್ರಗ್ ಡೀಲ್ ಕೋರರ ಕೂದಲು ಮಾದರಿ ಸಂಗ್ರಹಿಸಿ ಹೈದರಾಬಾದ್‌ನಲ್ಲಿರುವ ಸಿಎಫ್ಎಸ್ಎಲ್ ಪ್ರಯೋಗಾಲಯಕ್ಕೆ ರವಾನಿಸಿದ್ದರು.

ಪ್ರಯೋಗಾಲಯದ ವರದಿ ಸಿಸಿಬಿ ಕೈ ಸೇರಿದ್ದು, ಬಹುತೇಕ ಆರೋಪಿಗಳು ಸಿಂಥೆಟಿಕ್ (ಕ್ಯಾಟಗಿರಿ - 1 ) ಡ್ರಗ್ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ. NARCOTIC DRUGS & PSYCHOTROPIC SUBSTANCES ACT, 1985 (U/s-21(c)); IPC 1860 (U/s-120B); NARCOTIC DRUGS AND PSYCHOTROPIC SUBSTANCES ACT, 1985 (U/s-27(b),27A,29,21) ಅಡಿ ಸಿಸಿಬಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಯಾವ ಆರೋಪಿಗಳು ಯಾವ ಡ್ರಗ್ ಸೇವನೆ ಮಾಡಿದ್ದಾರೆ. ಅದಕ್ಕೆ ಆಗುವ ಶಿಕ್ಷೆ ಕುರಿತ ಸಮಗ್ರ ವಿವರ ಇಲ್ಲಿದೆ.

Sandalwood Drug Deal case: Information about CFSL Report and Accused persons consumed drug

ಎನ್‌ಡಿಪಿಎಸ್ ಆಕ್ಟ್ ನ ವಿವಿಧ ಸೆಕ್ಷನ್ ಅಡಿಯಲ್ಲಿ ಸಿಸಿಬಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಾದಕ ವಸ್ತುಗಳನ್ನು ಒಂದು ದೇಶದಿಂದ ತರಿಸಿ ಲಾಭದ ಉದ್ದೇಶಕ್ಕೆ ಇನ್ನೊಂದು ದೇಶಕ್ಕೆ ರವಾನಿಸಿವುದು ಗಂಭೀರ ಅಪರಾಧ. ಮಾದಕ ವಸ್ತು ಮಾರಾಟ, ಅದಕ್ಕೆ ಫಂಡಿಂಗ್ ಮಾಡುವುದು, ಪಾರ್ಟಿ ಆಯೋಜನೆಯಂತಹ ಕೃತ್ಯಗಳಿಗೂ ಗಂಭೀರ ಸ್ವರೂಪದ ಶಿಕ್ಷೆ ಬೀಳುತ್ತದೆ. ಆದರೆ, ಆರೋಪಿಗಳು ಮಾದಕ ವಸ್ತು ಮಾರಾಟ, ಅಕ್ರಮ ಸಾಗಣೆ, ಸಂಪರ್ಕ ಜಾಲ, ಸಂಚು ರೂಪಿಸಿರುವ ಬಗ್ಗೆ ಪೊಲೀಸರು ಮಹತ್ವದ ಸಾಕ್ಷ್ಯಾಧಾರಗಳು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಬೇಕಾಗುತ್ತದೆ.

ಈ ಕುರಿತ ಸಮಗ್ರ ವಿವರಗಳು ಸಿಸಿಬಿ ಪೊಲೀಸರ ತನಿಖಾ ವರದಿ ಹಾಗೂ ಸಲ್ಲಿಸಿರುವ ದಾಖಲೆಗಳಿಂದ ಗೊತ್ತಾಗಲಿದೆ. ಆದರೆ ಮಾದಕ ವಸ್ತು ಸೇವನೆ ಮಾಡಿರುವ ಸಂಬಂಧ ಸಿಸಿಬಿ ಪೊಲೀಸರು ನಡೆಸಿರುವ ಕೂದಲು ಪರೀಕ್ಷೆಯಿಂದ ಸಿಂಥೆಟಿಕ್ ಮಾದಕ ವಸ್ತು ಸೇವನೆ ಮಾಡಿರುವುದು ದೃಢ ಪಟ್ಟಿದೆ. ಅದರ ಪ್ರಕಾರ ಕೇವಲ ಮಾದಕ ವಸ್ತು ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಈ ಪ್ರಕರಣದಲ್ಲಿ ಶಿಕ್ಷೆಯಾದಲ್ಲಿ ಆರೋಪಿಗಳ ವಿವರ, ಸೇವಿಸಿದ ಡ್ರಗ್ ಹಾಗೂ ಶಿಕ್ಷೆ ಪ್ರಮಾಣದ ವಿವರ "ಒನ್ಇಂಡಿಯಾ ಕನ್ನಡ" ಪ್ರಸ್ತುತ ಪಡಿಸುತ್ತಿದೆ.

Sandalwood Drug Deal case: Information about CFSL Report and Accused persons consumed drug

ಆರೋಪಿ ನಂಬರ್ ಹೆಸರು ಸೇವಿಸಿದ ಡ್ರಗ್ ವಿವರ ಶಿಕ್ಷೆ ಪ್ರಮಾಣ

ಆರೋಪಿ ನಂ 1 : ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, - ಡ್ರಗ್ ಸೇವನೆ ಬಗ್ಗೆ ಪ್ರಸ್ತಾಪವಾಗಿಲ್ಲ.

ಆರೋಪಿ ನಂಬರ್ 2 : ರಾಗಿಣಿ ದ್ವಿವೇದಿ, ಕೊಕೇನ್, ಕೋಕೋಎಥೇಲೀನ್ ಡ್ರಗ್ NDPS ಸೆಕ್ಷನ್ 27 : 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡೂ.

ಆರೋಪಿ ನಂಬರ್ 14: ಸಂಜನಾ ಗಲ್ರಾಣಿ ಕೊಕೇನ್ ಹಾಗೂ ಎಂಡಿಎಂಎ NDPS ಸೆಕ್ಷನ್ 27 : 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

ಆರೋಪಿ ನಂಬರ್ 03: ವೀರೇನ್ ಖನ್ನಾ ಕೊಕೇನ್, ಎಂಡಿಎಂಎ, ಮೆಟಾಂಪೇಟಮೈನ್ NDPS ಸೆಕ್ಷನ್ 27 : 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು. (ಡ್ರಗ್ ಟ್ರಾಫಿಕಿಂಗ್ ಆರೋಪ, ಪಾರ್ಟಿ ಆಯೋಜನೆ ಆರೋಪ ಈತನ ಮೇಲಿದ್ದು, ಶಿಕ್ಷೆಗೆ ಗುರಿಯಾದರೆ ಹತ್ತು ವರ್ಷ ಜೈಲಿನಲ್ಲಿರಬೇಕಾಗುತ್ತದೆ)

ಆರೋಪಿ ನಂಬರ್04 ಪ್ರಶಾಂತ್ ರಂಕಾ, ಕೊಕೇನ್ ಡ್ರಗ್ NDPS ಸೆಕ್ಷನ್ 27 : 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

ಆರೋಪಿ ನಂಬರ್ 05: ವೈಭವ್ ಜೈನ್, ಎಂಡಿಎಂಎ, ಮೆಟಾಂಪೇಟಮೈನ್, 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

Sandalwood Drug Deal case: Information about CFSL Report and Accused persons consumed drug

ಆರೋಪಿ ನಂಬರ್ 06: ಆದಿತ್ವ ಆಳ್ವಾ - ಉಲ್ಲೇಖಿಸಲ್ಲ

ಆರೋಪಿ ನಂಬರ್ 7 ಲೂಮ್ ಪೆಪ್ಪರ್ ಸಾಂಬಾ ಸೇವಿಸಿದ್ದು ಮೆಟಾಂಪೇಟಮೈನ್, ಕೊಕೇನ್ 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

ಆರೋಪಿ ನಂಬರ್ 11 ರಾಹುಲ್ ತೋನ್ಸೆ ಎಂಡಿಎಂಎ, ಕೊಕೇನ್ 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

ಆರೋಪಿ ನಂಬರ್ 13 ನಿಯಾಜ್ ಅಹಮದ್ ಕೊಕೇನ್, ಎಂಡಿಎಂಎ, ಮೆಟಾಂಪೇಟಮೈನ್ 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

ಆರೋಪಿ ನಂಬರ್ 17 ಬೆನಾಲ್ಡ್ ಉಡೇನಾ ಮೆಟಾಂಪೇಟಮೈನ್, ಎಂಡಿಎಂಎ 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು.

ಆರೋಪಿ ನಂಬರ್ 18 ಶ್ರೀನಿವಾಸ್ ಮೆಟಾಂಪೇಟಮೈನ್ ಹಾಗೂ ಕೊಕೊನಿನೋಲ್, 1 ವರ್ಷ ಜೈಲು, ಅಥವಾ 20 ಸಾವಿರ ದಂಡ, ಅಥವಾ ಎರಡು. ಅಥವಾ ರಿಯಾಹ್ ಸೆಂಟರ್ ಗೆ ರವಾನೆ,

ಪ್ರಕರಣದ ಮಹತ್ವ ಏನು: ಈ ಶಿಕ್ಷೆ ಕೇವಲ ಕೆಟಗರಿ ಒನ್ ವ್ಯಾಪ್ತಿಗೆ ಬರುವ ಸಿಂಥೆಟಿಕ್ ಡ್ರಗ್ ಆಗಿರುವ ಕಾರಣ ಈ ಮಾದಕ ವಸ್ತು ಸೇವನೆ ಆರೋಪ ಸಾಬೀತಾದರೆ, (ಸಿಎಫ್ ಎಸ್ಎಲ್ ವರದಿ) ಈ ಶಿಕ್ಷೆಗೆ ಗುರಿಯಾಗುತ್ತಾರೆ. ನಿಸರ್ಗದತ್ತವಾಗಿ ಸಿಗುವ ಗಾಂಜಾ, ಒಫಿಯಮ್, ಕೊಕಾ. ಉಳಿದೆಲ್ಲವೂ ಸೆಮಿ ಸಿಂಥೆಟಿಗ್ ಹಾಗೂ ಸಿಂಥೆಟಿಕ್ ಡ್ರಗ್ ಪಟ್ಟಿಯಲ್ಲಿ ಬರುತ್ತವೆ. ಸದ್ಯ ಸಿಸಿಬಿ ಪೊಲೀಸರು ಸಿಎಫ್ಎಸ್ಎಲ್‌ನಲ್ಲಿ ನಡೆಸಿರುವ ಪರೀಕ್ಷೆಯಲ್ಲಿ ಎಲ್ಲರು ಸೇವನೆ ಮಾಡಿರುವುದು ಸಿಂಥೆಟಿಕ್ ಡ್ರಗ್. ಹೀಗಾಗಿ ಶಿಕ್ಷೆಯಾದರೆ ಒಂದು ವರ್ಷ ಜೈಲೂಟ ಮತ್ತೆ ಗ್ಯಾರೆಂಟಿ. ಸಿಎಫ್ಎಸ್ಎಲ್ ವರದಿ ಡ್ರಗ್ ಪ್ರಕರಣದ ಆರೋಪಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.

English summary
Sandalwood drug deal Case : CCB Police filed CFSL Report to NDPS Special court : List of Drug consumed accused persons and Punishment under NDPS Act,
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X