keyboard_backspace

ಅಮೆರಿಕ ಅಧ್ಯಕ್ಷರಿಗೆ ಸಿಗುವ ಸಂಬಳ, ಸೌಲಭ್ಯಗಳೇನು?

Google Oneindia Kannada News

ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಏರುವುದು ಸುಲಭದ ಮಾತಲ್ಲ. ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿ ಇರಿಸಿಕೊಳ್ಳುವಂತಹ, ಎಲ್ಲರೂ ತನ್ನೊಂದಿಗೆ ತಗ್ಗಿ ಬಗ್ಗಿ ವ್ಯವಹರಿಸುವಂತಹ ದೇಶದ ಅಧ್ಯಕ್ಷ ಸ್ಥಾನಕ್ಕೆ ತಲುಪುವುದು ದೊಡ್ಡ ಸಾಧನೆ. ಅಮೆರಿಕ ಅಧ್ಯಕ್ಷ ಹುದ್ದೆ ಪ್ರತಿಷ್ಠಿತವಾಗಿರುವುದು ಮಾತ್ರವಲ್ಲ, ಅನೇಕ ಸವಲತ್ತುಗಳು ಮತ್ತು ಅನುಕೂಲತೆಗಳನ್ನು ನೀಡುತ್ತದೆ.

ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಗೆ 4,00,000 ಡಾಲರ್ ಸಂಬಳದ ಜತೆಗೆ, ಐಷಾರಾಮಿ ಮನೆ, ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್ ಕೂಡ ಸಿಗಲಿದೆ. ಇದರ ಜತೆಗೆ ಅಮೆರಿಕ ಅಧ್ಯಕ್ಷರಾದವರಿಗೆ ಏನೆಲ್ಲ ಸೌಲಭ್ಯ ಮತ್ತು ಸೌಕರ್ಯಗಳು ಸಿಗಲಿದೆ?

ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್ ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್

1800ರಲ್ಲಿ ಸ್ಥಾಪನೆಯಾದ ಶ್ವೇತ ಭವನ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ. ಇದು ಇದುವರೆಗೂ ಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳನ್ನು ಕಂಡಿದೆ. ಆರು ಅಂತಸ್ತಿನ, 55,000 ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ 132 ಕೊಠಡಿಗಳು, 35 ಸ್ನಾನಗೃಹಗಳು ಮತ್ತು 28 ಅಗ್ಗಿಷ್ಟಿಕೆ ಸ್ಥಳಗಳನ್ನು ಹೊಂದಿದೆ.

ಶ್ವೇತಭವನದಲ್ಲಿ ಟೆನ್ನಿಸ್ ಕೋರ್ಟ್, ಬೌಲಿಂಗ್ ಕ್ರೀಡೆಯ ಜಾಗ, ಕೌಟುಂಬಿಕ ಸಿನಿಮಾ ಚಿತ್ರಮಂದಿರ, ಜಾಗಿಂಗ್ ಟ್ರ್ಯಾಕ್, ಸ್ವಿಮ್ಮಿಂಗ್ ಪೂಲ್ ಇದೆ. ಜತೆಗೆ ಐವರು ಪೂರ್ಣಾವಧಿ ಶೆಫ್‌ಗಳು ಒಬ್ಬ ಸಾಮಾಜಿಕ ಕಾರ್ಯದರ್ಶಿ, ಹೂಗಾರ, ಬರಹಗಾರ, ಪರಿಚಾರಕರು ಮತ್ತು ಇತರೆ ಸಹಾಯಕರು ಇಲ್ಲಿ ಕೆಲಸ ಮಾಡುತ್ತಾರೆ. ಮುಂದೆ ಓದಿ.

ಐಷಾರಾಮಿ ಅತಿಥಿಗೃಹ

ಐಷಾರಾಮಿ ಅತಿಥಿಗೃಹ

ಅಮೆರಿಕ ಅಧ್ಯಕ್ಷರ ಅಧಿಕೃತ ಅತಿಥಿ ಗೃಹ ಬ್ಲೇರ್ ಹೌಸ್, ಗಾತ್ರದಲ್ಲಿ ಶ್ವೇತಭವನಕ್ಕಿಂತಲೂ ದೊಡ್ಡದಾಗಿದೆ. ಇದು 70,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣವಾಗಿದೆ. 119 ಕೊಠಡಿಗಳಿದ್ದು, ಅತಿಥಿಗಳು ಮತ್ತು ಸಿಬ್ಬಂದಿಗಾಗಿ 20ಕ್ಕೂ ಅಧಿಕ ಬೆಡ್‌ರೂಂಗಳು, 35 ಸ್ನಾನಗೃಹಗಳು, ನಾಲ್ಕು ಊಟದ ಕೊಠಡಿಗಳು, ಜಿಮ್, ಹೂವಿನ ಅಂಗಡಿ ಮತ್ತು ಕ್ಷೌರದಂಗಡಿಯನ್ನು ಒಳಗೊಂಡಿದೆ.

ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!ಅಮೆರಿಕ ಅಧ್ಯಕ್ಷರ ಆಯ್ಕೆಯೇ ಒಂದು ವಿಸ್ಮಯ ಹಾಗೂ ವಿಚಿತ್ರ..!

ಕ್ಯಾಂಪ್ ಡೇವಿಡ್ ಎಸ್ಟೇಟ್

ಕ್ಯಾಂಪ್ ಡೇವಿಡ್ ಎಸ್ಟೇಟ್

1935ರಲ್ಲಿ ನಿರ್ಮಾಣವಾದ ಕ್ಯಾಂಪ್ ಡೇವಿಡ್ ಎಸ್ಟೇಟ್ 128 ಎಕರೆ ಹೊಂದಿದೆ. ಇದು ಮೇರಿಲ್ಯಾಂಡ್‌ನ ಪರ್ವತ ಪ್ರದೇಶದಲ್ಲಿದೆ. ಇದು ಅಧ್ಯಕ್ಷರಿಗಾಗಿ ಇರುವ ವಿಶೇಷವಾದ ಎಸ್ಟೇಟ್. ಫ್ರಾಂಕ್ಲಿನ್ ರೂಸ್ವೆಲ್ಟ್ ಅವರಿಂದ ಹಿಡಿದು ಪ್ರತಿ ಅಧ್ಯಕ್ಷರೂ ಇಲ್ಲಿನ ಸವಲತ್ತನ್ನು ಬಳಸಿಕೊಳ್ಳುತ್ತಿದ್ದಾರೆ.

ವಿಶೇಷ ವಿಮಾನ

ವಿಶೇಷ ವಿಮಾನ

ಅಮೆರಿಕ ಅಧ್ಯಕ್ಷರ ಓಡಾಟಕ್ಕಾಗಿಯೇ ವಿನ್ಯಾಸಗೊಳಿಸಿ ತಯಾರಿಸಿದ ವಿಮಾನವು ಅತ್ಯಧುನಿಕ ಸೌಕರ್ಯಗಳನ್ನು ಹೊಂದಿದೆ. ಈ ವಿಮಾನಕ್ಕೆ ಆಕಾಶದ ಮಧ್ಯೆಯೇ ಇಂಧನ ತುಂಬಿಸಬಹುದು. ಯಾವುದೇ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಸಾಧ್ಯವಾಗುವಂತಹ ಸುಭದ್ರ ಸಂವಹನ ಸಾಧನಗಳನ್ನು ಒಳಗೊಂಡಿದೆ.

ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳು

ಶಸ್ತ್ರಸಜ್ಜಿತ ಹೆಲಿಕಾಪ್ಟರ್‌ಗಳು

ಅಧ್ಯಕ್ಷರ ಓಡಾಟಕ್ಕೆ ಐದು ಅಧಿಕೃತ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಎಂಜಿನ್ ವಿಫಲವಾದರೂ ಗಂಟೆಗೆ 150 ಮೈಲು ವೇಗಕ್ಕೂ ಹೆಚ್ಚು ವೇಗವಾಗಿ ಸಾಗಿ ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವಷ್ಟು ಈ ಹೆಲಿಕಾಪ್ಟರ್‌ಗಳು ಸಮರ್ಥವಾಗಿವೆ. ಇವುಗಳಿಗೆ ಕ್ಷಿಪಣಿ ನಿಗ್ರಹ ಸಾಧನ ಮತ್ತು ಖಂಡಾಂತರ ಶಸ್ತ್ರಾಸ್ತ್ರಗಳನ್ನು ಅಳವಡಿಸಲಾಗಿರುತ್ತದೆ.

ಅತ್ಯಧಿಕ ಮತ ಗಳಿಕೆ: ಬರಾಕ್ ಒಬಾಮ ದಾಖಲೆ ಮುರಿದ ಜೋ ಬೈಡೆನ್ಅತ್ಯಧಿಕ ಮತ ಗಳಿಕೆ: ಬರಾಕ್ ಒಬಾಮ ದಾಖಲೆ ಮುರಿದ ಜೋ ಬೈಡೆನ್

ರಕ್ಷಾಕವಚದ ಕಾರು

ರಕ್ಷಾಕವಚದ ಕಾರು

ಅಮೆರಿಕ ಅಧ್ಯಕ್ಷರು ಬಳಸುವ ಲಿಮೌಸೈನ್ ಕಾರು ಜಗತ್ತಿನಲ್ಲಿಯೇ ಅತ್ಯಂತ ಸುರಕ್ಷಿತ ಕಾರು ಎಂದು ಪರಿಗಣಿಸಲಾಗಿದೆ. ಅದರ ಬಾಗಿಲುಗಳು ರಕ್ಷಾಕವಚದ ಪ್ಲೇಟ್‌ಗಳನ್ನು ಒಳಗೊಂಡಿದೆ. ಕಾರಿನ ಮೇಲೆ ರಾಸಾಯನಿಕ ದಾಳಿಗಳು ನಡೆದರೂ ಒಳಗೆ ಕುಳಿತವರಿಗೆ ಯಾವುದೇ ಅಪಾಯವಾಗದಂತಹ ಸುರಕ್ಷಾ ಸೌಕರ್ಯಗಳನ್ನು ಒಳಗೊಂಡಿದೆ. ಅದರ ಕಿಟಕಿಗಳು ಐದು ಪದರದ ಗಾಜು ಹಾಗೂ ಪಾಲಿಕಾರ್ಬೋನೇಟ್‌ನಿಂದ ನಿರ್ಮಾಣವಾಗಿದೆ. ಕಾರ್ ಒಳಗೆ ಆಮ್ಲಜನಕ ಪೂರೈಕೆ, ಅಗ್ನಿಶಾಮಕ ವ್ಯವಸ್ಥೆ ಮತ್ತು ರಕ್ತನಿಧಿಯ ಸೌಲಭ್ಯಗಳು ಕೂಡ ಇವೆ.

ಭದ್ರತಾ ಪಡೆಗಳ ಕಾವಲು

ಭದ್ರತಾ ಪಡೆಗಳ ಕಾವಲು

ಅಮೆರಿಕ ಅಧ್ಯಕ್ಷರು ಹಾಗೂ ಅವರ ಕುಟುಂಬಕ್ಕೆ ದಿನದ 24 ಗಂಟೆಗೂ ಭಾರಿ ಭದ್ರತೆ ಇರುತ್ತದೆ. ಅವರಿಗೆ ಸೀಕ್ರೆಟ್ ಸರ್ವೀಸ್‌ನಿಂದ ರಕ್ಷಣೆ ನೀಡಲಾಗುತ್ತದೆ. ಸೀಕ್ರೆಟ್ ಸರ್ವೀಸ್ ಅಮೆರಿಕದ ಅತ್ಯಂತ ಹಳೆಯ ಸಂಯುಕ್ತ ತನಿಖಾ ಸಂಸ್ಥೆಗಳಲ್ಲಿ ಒಂದಾಗಿದೆ.

ಸಂಬಳ ಮತ್ತು ಭತ್ಯೆಗಳು

ಸಂಬಳ ಮತ್ತು ಭತ್ಯೆಗಳು

ಅಮೆರಿಕ ಅಧ್ಯಕ್ಷರು ತಾವು ಕಚೇರಿಯಲ್ಲಿರುವಷ್ಟು ದಿನ ಮಾಸಿಕ 4,00,000 ಡಾಲರ್ ವೇತನ ಪಡೆಯುತ್ತಾರೆ. ಇದು ತೆರಿಗೆಗೆ ಒಳಪಟ್ಟಿರುತ್ತದೆ. ಅಂದರೆ ಅವರ ವೇತನ ಭಾರತದ ಕರೆನ್ಸಿಯಲ್ಲಿ ಸುಮಾರು 2.96 ಕೋಟಿ. ಇದರ ಜತೆಗೆ ಅಧ್ಯಕ್ಷರಿಗೆ 19,000 ಡಾಲರ್ ಮನರಂಜನಾ ಭತ್ಯೆ, 50,000 ಡಾಲರ್ ವಾರ್ಷಿಕ ವೆಚ್ಚ ಭತ್ಯೆ ಮತ್ತು 1,00,000 ಡಾಲರ್ ತೆರಿಗೆ ರಹಿತ ಪ್ರಯಾಣ ಭತ್ಯೆ ಸಿಗುತ್ತದೆ.

ಮಾಜಿ ಅಧ್ಯಕ್ಷರಿಗೆ ಪಿಂಚಣಿ

ಮಾಜಿ ಅಧ್ಯಕ್ಷರಿಗೆ ಪಿಂಚಣಿ

ಮಾಜಿ ಅಧ್ಯಕ್ಷರಿಗೆ ಕಚೇರಿಯಲ್ಲಿ ಇರುವ ಅಧ್ಯಕ್ಷರಂತೆ ಹೆಚ್ಚಿನ ವೇತನ, ಸೌಲಭ್ಯ ಮತ್ತು ಸಾರಿಗೆ ವ್ಯವಸ್ಥೆಗಳು ಇರುವುದಿಲ್ಲ. ಆದರೆ ಅವರಿಗೆ ದೊಡ್ಡ ಮೊತ್ತದ ಪಿಂಚಣಿ ಸಿಗುತ್ತದೆ. ನಿವೃತ್ತ ಅಧ್ಯಕ್ಷರ ವಾರ್ಷಿಕ ಪಿಂಚಣಿ 2,00,000 ಡಾಲರ್ ಇರುತ್ತದೆ. ಅದರ ಜತೆಗೆ ಮಾಜಿ ಅಧ್ಯಕ್ಷ ವಿಧವೆ ಪತ್ನಿಗೆ ಮಾಸಿಕ 1,00,000 ಡಾಲರ್ ಭತ್ಯೆಯೂ ಸಿಗುತ್ತದೆ.

English summary
What is the salary and allowances of US President? What are the other benefits he gets? Here is the details.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X