keyboard_backspace

ಕೊರೊನಾವೈರಸ್ ಡೆಲ್ಟಾ ರೂಪಾಂತರ ವಿರುದ್ಧ ಸ್ಪುಟ್ನಿಕ್ ಲೈಟ್ ಪರಿಣಾಮಕಾರಿ!

Google Oneindia Kannada News

ನವದೆಹಲಿ, ಅಕ್ಟೋಬರ್ 15: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಮರಣಮೃದಂಗ ಬಾರಿಸುವುದಕ್ಕೆ ಡೆಲ್ಟಾ ರೂಪಾಂತರ ವೈರಸ್ ಪ್ರಮುಖವಾಗಿ ಕಾರಣವಾಗಿತ್ತು. ಈ ಅಪಾಯಕಾರಿ ರೂಪಾಂತರ ರೋಗಾಣುವಿನ ವಿರುದ್ಧ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ವರದಿಯಾಗಿದೆ.

ಕೋವಿಡ್ -19 ಸಾಂಕ್ರಾಮಿಕದ ಕಾಲದಲ್ಲಿ ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆಯ ಮೊದಲ ಡೋಸ್ ಮೂರು ತಿಂಗಳಲ್ಲಿ ವೈರಸ್‌ನ ಡೆಲ್ಟಾ ರೂಪಾಂತರದ ವಿರುದ್ಧ ಶೇ.70ರಷ್ಟು ಪರಿಣಾಮಕಾರಿಯಾಗಿ ರಕ್ಷಣೆ ನೀಡಲಿದೆ. ಸ್ಪುಟ್ನಿಕ್ ಲೈಟ್ ಲಸಿಕೆ 60 ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇಕಡಾ 75ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದೆ.

ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆ ತೀವ್ರ ರೋಗ ಮತ್ತು ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಗಮಲೆಯ ಸೆಂಟರ್ ಫಾರ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿಯಿಂದ ಮಾಡಿದ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ. ಗಮಾಲಯ ಕೇಂದ್ರವು ರಷ್ಯಾದ ಆರೋಗ್ಯ ಸಚಿವಾಲಯದೊಳಗಿನ ರಷ್ಯಾದ ವೈದ್ಯಕೀಯ ಸಂಶೋಧನಾ ಸಂಸ್ಥೆಯಾಗಿದೆ.

ಲಸಿಕೆ ಎಚ್ಚರಿಕೆ: ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮಿಶ್ರಣದಿಂದ ಅಪಾಯ!ಲಸಿಕೆ ಎಚ್ಚರಿಕೆ: ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಮಿಶ್ರಣದಿಂದ ಅಪಾಯ!

ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಎನಿಸಿರುವ ಸ್ಪುಟ್ನಿಕ್-ವಿ, ಕೊವಿಡ್-19 ಎರಡನೇ ಅಲೆಗೆ ಕಾರಣವಾದ ಡೆಲ್ಟಾ ರೂಪಾಂತರ ಹಾಗೂ ಮೂರನೇ ಅಲೆಯ ಭೀತಿ ಹುಟ್ಟಿಸಿರುವ ಡೆಲ್ಟಾ ಪ್ಲಸ್ ವೈರಸ್ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಹೆಚ್ಚಿನ ಸುರಕ್ಷತೆ

ಡೆಲ್ಟಾ ರೂಪಾಂತರ ವೈರಸ್ ವಿರುದ್ಧ ಹೆಚ್ಚಿನ ಸುರಕ್ಷತೆ

ಕೊರೊನಾವೈರಸ್ ಇತರೆ ಎರಡು ಡೋಸ್ ಲಸಿಕೆಗೆ ಹೋಲಿಸಿದರೆ ಸ್ಪುಟ್ನಿಕ್ ಲೈಟ್ ಉತ್ತಮ ದಕ್ಷತೆಯನ್ನು ಹೊಂದಿದೆ. ಈ ಲಸಿಕೆಯ ಎರಡು ಡೋಸ್ ಪಡೆದುಕೊಂಡ ನಂತರದ ಐದು ತಿಂಗಳಲ್ಲಿ ಶೇ.50ಕ್ಕಿಂತ ಕಡಿಮೆ ಇರುವ ಡೆಲ್ಟಾ ರೂಪಾಂತರದ ವಿರುದ್ಧ ಪರಿಣಾಮಕಾರಿಯಾಗಿ ರಕ್ಷಣೆ ನೀಡಲಿದೆ, ಹಾಗೂ ರೋಗಾಣುವಿನ ಪ್ರಮಾಣವನ್ನು ತಗ್ಗಿಸಲಿದೆ. "ಸ್ಪುಟ್ನಿಕ್ ಲೈಟ್ ಲಸಿಕೆಯ ಒಂದು ಡೋಸ್ ಲಸಿಕೆಯು ಡೆಲ್ಟಾ ರೂಪಾಂತರದ ವಿರುದ್ಧ ಹೆಚ್ಚು ಸುರಕ್ಷತೆಯನ್ನು ಒದಗಿಸಲಿದೆ. ಡೆಲ್ಟಾ ತಳಿಯ ಸೋಂಕಿತರಿಗೆ ಶೇ.83ರಷ್ಟು ಹಾಗೂ ಆಸ್ಪತ್ರೆಗೆ ದಾಖಲಾದ ಶೇ.94ರಷ್ಟು ರೋಗಿಗಳಲ್ಲಿ ಲಸಿಕೆಯು ಪರಿಣಾಮಕಾರಿಯಾಗಿರಲಿದೆ," ಎಂದು ರಷ್ಯಾದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಹೇಳಿಕೆಯಲ್ಲಿ ತಿಳಿಸಿದೆ.

ಕೊರೊನಾವೈರಸ್ ರೂಪಾಂತರ ಸೃಷ್ಟಿಸಿದ ಅಪಾಯ

ಕೊರೊನಾವೈರಸ್ ರೂಪಾಂತರ ಸೃಷ್ಟಿಸಿದ ಅಪಾಯ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಹಿಂದಿನ ಕಾರಣವೇ ಡೆಲ್ಟಾ ರೂಪಾಂತರ ವೈರಸ್ ಎಂಬುದನ್ನು ಗುರುತಿಸಲಾಗಿತ್ತು. ಅದೇ ಡೆಲ್ಟಾ ವೈರಸ್ ಜಗತ್ತಿನ 84 ರಾಷ್ಟ್ರಗಳಿಗೆ ಹರಡಿದ್ದು, ಈಗ ಹಳೆಯ ಸುದ್ದಿ. ಡೆಲ್ಟಾ ರೂಪಾಂತರ ವೈರಸ್ ಬೆನ್ನಲ್ಲೇ ಡೆಲ್ಟಾ ಪ್ಲಸ್ ರೂಪಾಂತರವನ್ನು ಜಗತ್ತಿನಾದ್ಯಂತ ಸದ್ದು ಮಾಡಿದೆ. ಭಾರತ ಸೇರಿದಂತೆ ವಿಶ್ವದ 11 ರಾಷ್ಟ್ರಗಳಲ್ಲಿ ಇದೇ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಕಾಣಿಸಿಕೊಂಡಿದೆ. ದೇಶದ ಮಟ್ಟಿಗೆ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಪ್ರಕರಣಗಳು ವರದಿಯಾಗಿವೆ. ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹೊಸ ರೂಪಾಂತರದ ಮೇಲೆ ಲಸಿಕೆ ಪರಿಣಾಮವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಡೆಲ್ಟಾ ಪ್ಲಸ್ ರೂಪಾಂತರ ವೈರಸ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹರಡುವುದಿಲ್ಲ ಎಂಬುದನ್ನು ತಜ್ಞವೈದ್ಯರು ಕಂಡುಕೊಂಡಿದ್ದಾರೆ.

ಎರಡು ಡೆಲ್ಟಾ ರೂಪಾಂತರ ವೈರಸ್ ನಡುವಿನ ಅಂತರ

ಎರಡು ಡೆಲ್ಟಾ ರೂಪಾಂತರ ವೈರಸ್ ನಡುವಿನ ಅಂತರ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಹಿಂದೆ ಇದೇ ಡೆಲ್ಟಾ ರೂಪಾಂತರ ವೈರಸ್ ಇರುವುದನ್ನು ಪತ್ತೆ ಮಾಡಲಾಗಿತ್ತು. ಡೆಲ್ಟಾ ಪ್ಲಸ್ ಅದರ ರೂಪಾಂತರಗೊಂಡ ರೂಪವಾಗಿದ್ದು, ಇದು ಜಾಗತಿಕ ಕಾಳಜಿಯ ಒಂದು ರೂಪಾಂತರವೆಂದು ಕರೆಯಲ್ಪಡುತ್ತದೆ. ಭಾರತದಲ್ಲಿ ಮೊದಲು ಪತ್ತೆಯಾದ ಡೆಲ್ಟಾ ತಳಿ ಹಾಗೂ ಬೀಟಾ ತಳಿಯಿಂದ ರೂಪಾಂತರ ಪಡೆದಿರುವುದನ್ನು ತೋರಿಸುತ್ತದೆ. ಬೀಟಾ ತಳಿಯು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿತ್ತು. ಡೆಲ್ಟಾ ತಳಿಯ ಪ್ರೋಟೀನ್‌ನಲ್ಲಿ K417N ಎಂಬ ರೂಪಾಂತರ ಸೇರಿದ ಪರಿಣಾಮವಾಗಿ ಡೆಲ್ಟಾ ಪ್ಲಸ್ ರೂಪುಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹೆಸರಿಸಿದಂತೆ B.1.617.2 ತಳಿ ಅಥವಾ ಡೆಲ್ಟಾ ರೂಪಾಂತರದ ಹೊಸ ರೂಪಾಂತರವು ಎರಡು ಶ್ರೇಣೀಕೃತ ರೂಪಾಂತರಗಳಾದ L452R ಮತ್ತು P871R ಎಂದು ಕಂಡುಬಂದಿದೆ.

ಡೆಲ್ಟಾ ಪ್ಲಸ್ ಬಗ್ಗೆ ಜಾಗತಿಕ ತಜ್ಞರ ಅಭಿಪ್ರಾಯವೇನು?

ಡೆಲ್ಟಾ ಪ್ಲಸ್ ಬಗ್ಗೆ ಜಾಗತಿಕ ತಜ್ಞರ ಅಭಿಪ್ರಾಯವೇನು?

ಭಾರತದಲ್ಲಿ ಮೊದಲ ಕಾಣಿಸಿಕೊಂಡ ಡೆಲ್ಟಾ ರೂಪಾಂತರ ವೈರಸ್ ಎನ್ನುವುದು ಇತರೆ ರೂಪಾಂತರ ತಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಅತ್ಯಂತ ಸುಲಭವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಡೆಲ್ಟಾ ಸೋಂಕು ಅಂಟಿಕೊಂಡ ವ್ಯಕ್ತಿಯಲ್ಲಿ ತೀವ್ರ ಉಸಿರಾಟ ಸಮಸ್ಯೆ ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಬಹುಪಾಲು ಜನರು ಆಸ್ಪತ್ರೆಗಳಿಗೆ ದಾಖಲಾಗುತ್ತಾರೆ ಎನ್ನುವುದು ಸ್ಪಷ್ಟವಾಗಿದೆ. ಕೊವಿಡ್-19 ಎರಡು ಡೋಸ್ ಲಸಿಕೆಯನ್ನು ಪಡೆದ ವ್ಯಕ್ತಿಗಳಲ್ಲೂ ಡೆಲ್ಟಾ ವೈರಸ್ ಅಂಟಿಕೊಳ್ಳುವುದರ ಜೊತೆಗೆ ಅವರ ಮೂಲಕ ಬೇರೆಯವರಿಗೂ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆ.

"ಜಗತ್ತಿನ ಎದುರಿಗೆ ನಿಂತಿರುವ ದೊಡ್ಡ ಅಪಾಯವೆಂದರೆ ಅದು ಡೆಲ್ಟಾ ರೂಪಾಂತರ ವೈರಸ್," ಎಂದು ಬ್ರಿಟನ್ ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದಾರೆ. ಡೆಲ್ಟಾ ವೈರಸ್ ಎನ್ನುವುದು ಇತರೆ ರೂಪಾಂತರಗಳಿಗೆ ಹೋಲಿಸಿದರೆ ಹೆಚ್ಚು ವೇಗವಾಗಿ ಹರಡಬಲ್ಲ ಶಕ್ತಿಶಾಲಿ ಹಾಗೂ ಅಪಾಯಕಾರಿ ವೈರಸ್ ಎಂದಿದ್ದಾರೆ. ನಿರಂತರವಾಗಿ ಇರುವ ರೂಪಾಂತರ ಪ್ರಕ್ರಿಯೆಯು ಹಲವು ರೀತಿಯ ಅಪಾಯವನ್ನು ತಂದೊಡ್ಡುತ್ತವೆ. ಒಂದೊಂದು ಬಾರಿ ಮೂಲ ರೋಗಾಣುವಿಗಿಂತ ರೂಪಾಂತರ ತಳಿಗಳು ಹೆಚ್ಚು ಅಪಾಯಕಾರಿ ಆಗಿರುತ್ತವೆ.

ಮೂಲ ರೋಗಾಣುವಿಗಿಂತ ಡೆಲ್ಟಾ ವೈರಸ್ ಹೆಚ್ಚು ಅಪಾಯ

ಮೂಲ ರೋಗಾಣುವಿಗಿಂತ ಡೆಲ್ಟಾ ವೈರಸ್ ಹೆಚ್ಚು ಅಪಾಯ

* "2019ರಲ್ಲಿ ಮೊದಲ ಬಾರಿಗೆ ಚೀನಾದ ವುಹಾನ್ ನಗರದಲ್ಲಿ ಪತ್ತೆಯಾದ ಕೊರೊನಾವೈರಸ್ ಸೋಂಕಿನ ಮೂಲ ರೋಗಾಣುವಿಗಿಂತಲೂ ಡೆಲ್ಟಾ ರೂಪಾಂತರ ವೈರಸ್ 1000 ಪಟ್ಟು ಅಪಾಯಕಾರಿ ಆಗಿರುತ್ತದೆ. ಮೂಲ ಸೋಂಕಿತನಿಗೆ ಹೋಲಿಸಿದರೆ ಡೆಲ್ಟಾ ಸೋಂಕಿತರ ಮೂಗಿನಲ್ಲಿ ರೋಗಾಣುವಿನ ಸಂಖ್ಯೆ 1000 ಪಾಲು ಹೆಚ್ಚಾಗಿರುವುದು ಕಂಡು ಬಂದಿದೆ. ರೋಗಾಣುವಿನ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಅವುಗಳ ಹರಡುವಿಕೆ ಪ್ರಮಾಣವು ಸರ್ವೇ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ," ಸೂಕ್ಷ್ಮಜೀವಶಾಸ್ತ್ರಜ್ಞ ಶಾರೋನ್ ಪೀಕಾಕ್ ಹೇಳಿದ್ದಾರೆ.

* "ಯುನೈಟೆಡ್ ಕಿಂಗ್ ಡಮ್ ನಲ್ಲಿ ಮೊದಲು ಪತ್ತೆಯಾದ ಆಲ್ಫಾ ರೂಪಾಂತರಕ್ಕೆ ಹೋಲಿಸಿದರೆ ಡೆಲ್ಟಾ ರೂಪಾಂತರವು ಶೇ.50ರಷ್ಟು ಹೆಚ್ಚು ಹರಡುವಿಕೆ ಸಾಮರ್ಥ್ಯವನ್ನು ಹೊಂದಿದೆ," ಎಂದು ಸ್ಯಾನ್ ಡಿಯಾಗೋದಲ್ಲಿ ಲಾ ಜೊಲ್ಲಾ ಇನ್ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿಯ ಸೂಕ್ಷ್ಮರೋಗಾಣು ಶಾಸ್ತ್ರಜ್ಞ ಶೇನ್ ಕ್ರಾಟಿ ಹೇಳಿದ್ದಾರೆ. ಇತರೆ ಎಲ್ಲ ರೂಪಾಂತರ ತಳಿಗಳಿಗಿಂತಲೂ ಡೆಲ್ಟಾ ಹೆಚ್ಚು ಪರಿಣಾಮಕಾರಿ ಆಗಿ ಹರಡುತ್ತದೆ ಎಂದಿದ್ದಾರೆ.

* ಡೆಲ್ಟಾ ರೂಪಾಂತರವು ಕಡಿಮೆ ತಾಪದ ಅವಧಿ ಮತ್ತು ಹೆಚ್ಚು ಸೋಂಕು ಹರಡುವಿಕೆ ಪ್ರಮಾಣವನ್ನು ಹೊಂದಿರುತ್ತದೆ. ಆದ್ದರಿಂದಲೇ ಈ ರೂಪಾಂತರವು ಲಸಿಕೆಗಳಿಗೂ ದೊಡ್ಡ ಸವಾಲಾಗಿದ್ದು, ಲಸಿಕೆ ಹಾಕಿಸಿಕೊಂಡವರೂ ಕೂಡ ಜಾಗೃತರಾಗಿರಬೇಕು. ಇದು ಬಹಳ ಕಷ್ಟಸಾಧ್ಯವಾದ ಸಂಗತಿಯಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಲಸಿಕೆ ಪಡೆದವರೂ ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನಿಯಮಗಳನ್ನು ಜಾರಿಗೊಳಿಸಲಾಗಿದೆ. ರೂಪಾಂತರ ವೈರಸ್ ಸೋಂಕಿನ ಪ್ರಮಾಣವು ತೀರಾ ವಿರಳವಾಗಿದೆ ಎನ್ನುವಂತಾ ಹಂತದಲ್ಲಿ ಮಾತ್ರ ನಾವು ನಿರ್ಬಂಧಗಳನ್ನು ಸಡಿಲಗೊಳಿಸಬೇಕಿದೆ," ಎಂದು ಕ್ಯಾಲಿಪೋರ್ನಿಯಾದ ಲಾ ಜೊಲ್ಲಾದಲ್ಲಿರುವ ಸ್ಕಿಪ್ಪಸ್ ರಿಸರ್ಚ್ ಟ್ರಾನ್ಸ್ ಲೇಷನಲ್ ಇನ್ಸ್ ಟಿಟ್ಯೂಟ್ ನಿರ್ದೇಶಕ ಹಾಗೂ ಜೆನೋಮಿಕ್ಸ್ ತಜ್ಞ ಎರಿಕ್ ತೊಪೊಲ್ ಹೇಳಿದ್ದಾರೆ.

ಸ್ಪುಟ್ನಿಕ್-ವಿ ಲಸಿಕೆಗೆ 70 ರಾಷ್ಟ್ರಗಳಲ್ಲಿ ಅನುಮೋದನೆ

ಸ್ಪುಟ್ನಿಕ್-ವಿ ಲಸಿಕೆಗೆ 70 ರಾಷ್ಟ್ರಗಳಲ್ಲಿ ಅನುಮೋದನೆ

ರಷ್ಯಾದ ಸ್ಪುಟ್ನಿಕ್ ಲೈಟ್ ಲಸಿಕೆ ಮಾನವ ಅಡೆನೊವೈರಸ್ ಸೆರೊಟೈಪ್ 26 ಅನ್ನು ಆಧರಿಸಿದೆ. ಕೊರೊನಾವೈರಸ್ ವಿರುದ್ಧ ಜಗತ್ತಿನಲ್ಲೇ ಮೊದಲು ಅನುಮೋದನೆ ಪಡೆದ ಲಸಿಕೆ ಸ್ಪುಟ್ನಿಕ್-ವಿ ಆಗಿದೆ. ಇಂದು ಜಗತ್ತಿನ 70 ರಾಷ್ಟ್ರಗಳಲ್ಲಿ ಕೊವಿಡ್-19 ವಿರುದ್ಧ ಸ್ಪುಟ್ನಿಕ್-ವಿ ಲಸಿಕೆಯನ್ನು ಬಳಸುವುದಕ್ಕೆ ಅನುಮತಿ ನೀಡಲಾಗಿದೆ. ಒಂದು ಡೋಸ್ ಸ್ಪುಟ್ನಿಕ್ ಲೈಟ್ ಲಸಿಕೆಯನ್ನು 15ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತಗೊಳಿಸಲಾಗಿದ್ದು, ಇನ್ನೂ 30 ದೇಶಗಳಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

ಸ್ಪುಟ್ನಿಕ್ ಲೈಟ್ ಲಸಿಕೆ ಸಾರ್ವತ್ರಿಕ ಬೂಸ್ಟರ್

ಸ್ಪುಟ್ನಿಕ್ ಲೈಟ್ ಲಸಿಕೆ ಸಾರ್ವತ್ರಿಕ ಬೂಸ್ಟರ್

ಸ್ಪುಟ್ನಿಕ್ ಲೈಟ್ ಇತರ ಲಸಿಕೆಗಳಿಗೆ ಸಾರ್ವತ್ರಿಕ ಬೂಸ್ಟರ್ ಆಗಿದೆ. ಅರ್ಜೆಂಟೀನಾ ಮತ್ತು ಇತರ ದೇಶಗಳಲ್ಲಿನ ನಡೆಸಿದ ವೈದ್ಯಕೀಯ ಅಧ್ಯಯನಗಳಲ್ಲಿ ಧನಾತ್ಮಕ ಮಾಹಿತಿ ಗೊತ್ತಾಗಿದೆ. ಇತರೆ ಉತ್ಪಾದಕ ಲಸಿಕೆಗಳಿಗೆ ಸ್ಪುಟ್ನಿಕ್ ಲೈಟ್ ಲಸಿಕೆಯು ಬೂಸ್ಟರ್ ಶಾಟ್ ಆಗಿ ಕೆಲಸ ಮಾಡುತ್ತದೆ. ಬೂಸ್ಟರ್ ಲಸಿಕೆಯಾಗಿ ಕೂಡಾ ಸ್ಪುಟ್ನಿಕ್ ಲೈಟ್ ಹೆಚ್ಚಿನ ಸುರಕ್ಷತೆ ಮತ್ತು ರೋಗನಿರೋಧಕ ಶಕ್ತಿ ವೃದ್ಧಿಸುವ ಕೆಲಸ ಮಾಡುತ್ತದೆ.

English summary
Delta or Delta Plus, Which Virus is Deadlier; Russia’s Sputnik Light Vaccine 70 Per Cent Effective Against Delta Variant of Coronavirus.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X