keyboard_backspace

ರಷ್ಯಾದಲ್ಲಿ ಮರಣಮೃದಂಗ ಬಾರಿಸಿದ ಕೊರೊನಾವೈರಸ್!

Google Oneindia Kannada News

ಮಾಸ್ಕೋ, ಅಕ್ಟೋಬರ್ 23: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕಡಿಮೆ ಆಯಿತು ಎಂದುಕೊಳ್ಳುವಷ್ಟರಲ್ಲೇ ವಿದೇಶಗಳಲ್ಲಿ ಸಾವಿನ ಸರಣಿ ಮುಂದುವರಿದಿದೆ. ರಷ್ಯಾದಲ್ಲಿ ಒಂದೇ ದಿನ ಕೊವಿಡ್-19 ಮಹಾಮಾರಿಗೆ 1,000ಕ್ಕಿಂತ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ.

ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಹಿಂದೆ ಬಿದ್ದಿರುವ ಯುರೋಪ್ ರಾಷ್ಟ್ರಗಳಲ್ಲಿ ಹೊಸ ಪ್ರಕರಣಗಳ ಏರಿಕೆ ಜೊತೆಗೆ ಸಾವಿನ ಸಂಖ್ಯೆಯು ಭಯ ಹುಟ್ಟಿಸುವಂತಿದೆ. ರಷ್ಯಾದಲ್ಲಿ ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ 1075 ಮಂದಿ ಮೃತಪಟ್ಟಿದ್ದು, ಹೊಸ ದಾಖಲೆಯಾಗಿದೆ.

ರಷ್ಯಾದಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮನವಿ ಹಾಗೂ ಸ್ವದೇಶಿ ಸ್ಪುಟ್ನಿಕ್-ವಿ ಕೊರೊನಾವೈರಸ್ ಲಸಿಕೆಯ ಲಭ್ಯತೆಯ ಹೊರತಾಗಿಯೂ ಕೇವಲ ಶೇ.36ರಷ್ಟು ಜನರು ಮಾತ್ರ ಪೂರ್ಣ ಪ್ರಮಾಣದಲ್ಲಿ ಲಸಿಕೆಯನ್ನು ಪಡೆದುಕೊಂಡಿದ್ದಾರೆ.

Russia Reports New Record in Covid-19 Deaths and Cases In Last 24 Hours

ಶನಿವಾರ ಹೊಸ ಪ್ರಕರಣಗಳಲ್ಲಿ ದಾಖಲೆ:
ರಷ್ಯಾದಲ್ಲಿ ಅಕ್ಟೋಬರ್ 23ರ ಅಂಕಿ-ಅಂಶಗಳ ಪ್ರಕಾರ, ಒಂದೇ ದಿನ 37,678 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 82,05,983ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 1075 ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 2,29,528ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 26,077 ಸೋಂಕಿತರು ಗುಣಮುಖರಾಗಿದ್ದು, ದೇಶದಲ್ಲಿ ಇದುವರೆಗೂ ಗುಣಮುಖರಾದವರ ಸಂಖ್ಯೆ 71,43,137ಕ್ಕೆ ಏರಿಕೆಯಾಗಿದೆ. ಇದೆಲ್ಲದರ ಹೊರತಾಗಿಯೂ ರಷ್ಯಾದಲ್ಲಿ 8,33,318 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ವರದಿಯಾಗಿವೆ.

4 ಲಕ್ಷಕ್ಕೂ ಹೆಚ್ಚು ಮಂದಿ ಸಾವು:

ರೋಸ್‌ಸ್ಟಾಟ್‌ನ ಏಜೆನ್ಸಿ ಅಂಕಿ-ಅಂಶಗಳ ಪ್ರಕಾರ, ರಷ್ಯಾದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ 4,00,000ಕ್ಕೂ ಹೆಚ್ಚು ಜನರು ಕೊರೊನಾವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ದೇಶದ ಹೃಹಯ ಭಾಗ ಎನಿಸಿರುವ ಮಾಸ್ಕೋದಲ್ಲಿ ಅಕ್ಟೋಬರ್ 28 ರಿಂದ ನವೆಂಬರ್ 7ರವರೆಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ನಿರ್ಬಂಧಿಸಲಾಗಿದೆ.

ಅಕ್ಟೋಬರ್ 30ರವರೆಗೂ ರಜೆ ಘೋಷಣೆ:

ರಷ್ಯಾದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ವೇಗವಾಗಿ ಹರಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಸೋಂಕಿತ ಪ್ರಕರಣಗಳ ಜೊತೆಗೆ ಸಾವಿನ ಸಂಖ್ಯೆ ಏರಿಕೆಯಾಗುವ ಅಪಾಯವಿದೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಕ್ಟೋಬರ್ 30ರವರೆಗೂ ವೇತನಸಹಿತ ರಜೆಯನ್ನು ಘೋಷಿಸಿದ್ದಾರೆ.

ಲಸಿಕೆ ಪಡೆದುಕೊಳ್ಳದಿರುವುದೇ ಪರಿಸ್ಥಿತಿಗೆ ಕಾರಣ:

ಕೊರೊನಾವೈರಸ್ ಲಸಿಕೆ ಪಡೆದುಕೊಳ್ಳುವಲ್ಲಿ ಸಾರ್ವಜನಿಕರು ಹಿಂದೇಟು ಹಾಕುತ್ತಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ದೇಶದಲ್ಲಿ ಕೊವಿಡ್-19 ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚಾಗುವುದಕ್ಕೆ ಲಸಿಕೆ ಕುರಿತು ಜನರ ನಿರ್ಲಕ್ಷ್ಯ ಮನೋಭಾವವೇ ಕಾರಣವಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಇದನ್ನು ಮನಗಂಡು ಜನರು ಕೊರೊನಾವೈರಸ್ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮನವಿ ಮಾಡಿಕೊಂಡಿದ್ದಾರೆ.

ಸ್ಪುಟ್ನಿಕ್-ವಿ ಲಸಿಕೆಗೆ WHO ಅನುಮೋದಿಸಿಲ್ಲ:

ರಷ್ಯಾದಲ್ಲಿ ಉತ್ಪಾದಿಸಲಾಗುತ್ತಿರುವ ಸ್ಪುಟ್ನಿಕ್-ವಿ ಕೊರೊನಾವೈರಸ್ ಲಸಿಕೆಯನ್ನು ರಷ್ಯಾ ಹೊರತಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ಬಅಳಸಲಾಗುತ್ತಿದೆ. ಆದರೆ ಈ ಸ್ಪುಟ್ನಿಕ್-ವಿ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಇದುವರೆಗೂ ಯಾವುದೇ ಅನುಮೋದನೆ ಸಿಕ್ಕಿಲ್ಲ.

English summary
Russia Reports New Record in Covid-19 Deaths and Cases In Last 24 Hours.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X