keyboard_backspace

ಹೊಸ ವರ್ಷಕ್ಕೆ ಸಿಮೆಂಟ್ ಹೆಚ್ಚಳದ ಬಿಸಿ, ಎಷ್ಟಾಗಲಿದೆ ಒಂದು ಚೀಲದ ಬೆಲೆ

Google Oneindia Kannada News

ನವದೆಹಲಿ, ಡಿಸೆಂಬರ್ 03: ಹೊಸ ವರ್ಷಕ್ಕೆ ಸಿಮೆಂಟ್ ಬೆಲೆ ಹೆಚ್ಚಾಗಲಿದ್ದು, ಮನೆ ಕಟ್ಟುವ ಯೋಜನೆ ಹಾಕಿಕೊಂಡವರಿಗೆ ನಿರಾಸೆ ಗ್ಯಾರಂಟಿ.

ಹೊಸ ವರ್ಷದ ಆರಂಭದಲ್ಲೇ ಗ್ರಾಹಕರಿಗೆ ಬೆಲೆ ಏರಿಕೆಯ ಹೊರೆ ಖಾತರಿಯಾಗಿದೆ. ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಮುಂದಿನ ಹಣಕಾಸು ವರ್ಷಕ್ಕೆ ಪ್ರತಿ ಚೀಲ ಚಿಲ್ಲರೆ ಸಿಮೆಂಟ್ ದರ 400 ರೂ. ತಲುಪುವ ನಿರೀಕ್ಷೆಯಿದೆ.

ಪ್ರತಿಯೊಂದು ಸಿಮೆಂಟ್‌ ಕಾರ್ಖಾನೆಯೂ ವೆಚ್ಚ ಹೆಚ್ಚಳದ ಹೊರೆ ಎದುರಿಸುತ್ತಿದ್ದು ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಸಜ್ಜಾಗಿದೆ. ಇದರ ಪರಿಣಾಮ ಸಿಮೆಂಟ್‌ ದರ ಏರಿಕೆಯಾಗಲಿದೆ. ಕಲ್ಲಿದ್ದಲು ಮತ್ತು ವಿದ್ಯುತ್‌ ವೆಚ್ಚ ಹೆಚ್ಚಳವಾಗಿರುವುದು ಕಾರ್ಖಾನೆಗಳಿಗೆ ಸವಾಲಾಗಿದೆ. ಮತ್ತೊಂದು ಕಡೆ, ಉಕ್ಕು ಕೂಡ ದುಬಾರಿಯಾಗುತ್ತಿದ್ದು, ನಿರ್ಮಾಣ ವೆಚ್ಚ ಕೂಡ ಹೆಚ್ಚಾಗಲಿದೆ.

ಅಷ್ಟೇ ಅಲ್ಲ, ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯ (ಇಬಿಐಟಿಡಿಎ) ಗಳ ಮೊದಲು ಗಳಿಕೆಯು FY22 ರಲ್ಲಿ (ಹಣಕಾಸು ವರ್ಷ-2022) ಪ್ರತಿ ಟನ್‌ಗೆ ರೂ 100-150 ರಷ್ಟು ಕುಸಿಯುವ ನಿರೀಕ್ಷೆಯಿದೆ. ವೆಚ್ಚದ ಹೊರೆಯನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಸಿಮೆಂಟ್ ಬೇಡಿಕೆಯು 20 ಪ್ರತಿಶತಕ್ಕಿಂತಲೂ ಹೆಚ್ಚು ದೃಢವಾದ ಬೆಳವಣಿಗೆಯನ್ನು ಕಂಡಿತು, ಆದರೆ ದ್ವಿತೀಯಾರ್ಧದಲ್ಲಿ 3-5 ಪ್ರತಿಶತ ಬೆಳವಣಿಗೆ ಕಾಣಬಹುದು ಎಂದು ಕ್ರಿಸಿಲ್ ಹೇಳಿದೆ.

ಪ್ರಾದೇಶಿಕ ಮಟ್ಟದಲ್ಲಿ , ದಕ್ಷಿಣ ಭಾರತದಲ್ಲಿ ಹಿಂದಿನ ತಿಂಗಳಿಗಿಂತ ಅಕ್ಟೋಬರ್‌ನಲ್ಲಿ ಪ್ರತಿ ಚೀಲಕ್ಕೆ 54 ರೂ.ಗಳ ಏರಿಕೆಯಾಗಿತ್ತು. ಮಧ್ಯ ಪ್ರದೇಶದಲ್ಲಿ ಪ್ರತಿ ಚೀಲಕ್ಕೆ 20 ರೂ. ಉತ್ತರದಲ್ಲಿ ಬೇಡಿಕೆಯ ಮೇರೆಗೆ 12 ರೂ.ಗಳ ಏರಿಕೆ ಕಂಡುಬಂದರೆ, ಪಶ್ಚಿಮದಲ್ಲಿ ಪ್ರತಿ ಚೀಲಕ್ಕೆ 10 ರೂ. ಪೂರ್ವದಲ್ಲಿ ಪ್ರತಿ ಚೀಲಕ್ಕೆ 5 ರೂ.ನಂತೆ ಸಾಧಾರಣ ಏರಿಕೆ ಕಂಡಿದೆ.

 ಸಿಮೆಂಟ್ ಬೆಲೆ ಹೆಚ್ಚಳ ಮಾಡಲಾಗಿತ್ತು

ಸಿಮೆಂಟ್ ಬೆಲೆ ಹೆಚ್ಚಳ ಮಾಡಲಾಗಿತ್ತು

ಕಲ್ಲಿದ್ದಲು ಮತ್ತು ಡೀಸೆಲ್ ಬೆಲೆ ಏರಿಕೆಯಾದ ಬಳಿಕ ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪ್ರತಿ ಚೀಲ ಸಿಮೆಂಟ್​ಗೆ ಸರಾಸರಿ 10-15 ರೂ. ಹೆಚ್ಚಳ ಮಾಡಲಾಗಿತ್ತು. ಮುಂದಿನ ಕೆಲವು ತಿಂಗಳುಗಳಲ್ಲಿ ಮತ್ತೆ 15-20 ರೂ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತಿಳಿಸಿದೆ.

 ವಸತಿ, ಮೂಲಸೌಕರ್ಯಕ್ಕೆ ಹೆಚ್ಚಿನ ಬೇಡಿಕೆ

ವಸತಿ, ಮೂಲಸೌಕರ್ಯಕ್ಕೆ ಹೆಚ್ಚಿನ ಬೇಡಿಕೆ

ಕೋವಿಡ್‌ ಕೇಸ್‌ಗಳ ಸಂಖ್ಯೆ ತಗ್ಗಿದ ನಂತರ ಮೂಲಸೌಕರ್ಯ, ವಸತಿ ಮತ್ತು ಕೈಗಾರಿಕಾ ವಿಭಾಗಗಳಾದ್ಯಂತ ಬೇಡಿಕೆ ಹೆಚ್ಚಳವಾಗಿದೆ. ಪೂರೈಕೆಯ ಕೊರತೆಯೂ ಬೆಲೆ ಏರಿಕೆಗೆ ಕಾರಣವಾಗಿದೆ ಕ್ರಿಸಿಲ್ ಸಂಶೋಧನಾ ನಿರ್ದೇಶಕ ಇಶಾ ಚೌಧರಿ ಅಭಿಪ್ರಾಯ ವ್ಯಕ್ತಪಡಿಸಿದರು.

2021ರಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಬೆಲೆ ಏರಿಕೆಯನ್ನು ನೋಡುವುದಾದರೆ, ದಕ್ಷಿಣ ಭಾರತದಲ್ಲಿ ಅಕ್ಟೋಬರ್‌ನಲ್ಲಿ ಪ್ರತಿ ಚೀಲಕ್ಕೆ 54 ರೂ. ಏರಿಕೆ ಮಾಡಲಾಗಿತ್ತು. ಮಧ್ಯಪ್ರದೇಶದಲ್ಲಿ ಪ್ರತಿ ಸಿಮೆಂಟ್​ ಚೀಲಕ್ಕೆ 20 ರೂ., ಉತ್ತರ ಭಾರತದಲ್ಲಿ 12 ರೂ. ಹಾಗೂ ಪಶ್ಚಿಮ ಭಾರತದಲ್ಲಿ ಪ್ರತಿ ಚೀಲಕ್ಕೆ 10 ರೂ. ಹೆಚ್ಚಳ ಮಾಡಲಾಗಿದೆ.

 ಸಿಮೆಂಟ್‌ಗೆ ಬೇಡಿಕೆ

ಸಿಮೆಂಟ್‌ಗೆ ಬೇಡಿಕೆ

2020ರ ವೇಳೆ ಕೊರೊನಾ ಕಾರಣಕ್ಕೆ ಸಿಮೆಂಟ್‌ ಬೇಡಿಕೆಯಲ್ಲಿ ಕುಸಿತವಾಗಿತ್ತು. ಆದರೆ ಈ ಆರ್ಥಿಕ ವರ್ಷದಲ್ಲಿ ಸಿಮೆಂಟ್‌ ಬೇಡಿಕೆ ಪ್ರಮಾಣ ಶೇ.11-13ರಷ್ಟುಏರಿಕೆಯಾಗಲಿದೆ. ವಿದೇಶದಿಂದ ತರಿಸಲಾದ ಕಲ್ಲಿದ್ದಲು ಶೇ.120ಕ್ಕಿಂತ ಹೆಚ್ಚು ಮತ್ತು ಪೆಟ್‌ಕೋಕ್‌ ದರದ ಶೇ.80ರಷ್ಟುಏರಿದೆ. ಇದರಿಂದ ವಿದ್ಯುತ್‌ ಮತ್ತು ಇಂಧನ ಬೆಲೆಗಳು ಪ್ರತೀ ಟನ್‌ಗೆ 350-400 ರು.ಗೆ ಜಿಗಿದಿತ್ತು.

 ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ

ತಿಂಗಳ ಮೊದಲ ದಿನ ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಡಿಸೆಂಬರ್ 1 ರಿಂದ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 103.50 ರೂ.ವರೆಗೆ ಹೆಚ್ಚಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 100.50 ರೂ ಹೆಚ್ಚಳವಾಗಿದೆ. ಈ ಮೂಲಕ ಇಲ್ಲಿ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2101 ರೂ.ಗೆ ಏರಿಕೆಯಾಗಿದೆ.

English summary
Cement retail prices are expected to touch an all-time high of Rs 400 per bag in FY22 due to high input costs.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X