ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೋಟೆಲ್ ಮಾಲೀಕರೇ ಈಗ ದರ ಇಳಿಸೋಕೆ ಆಗೋಲ್ವೆ?

By ಭಾಸ್ಕರ್ ಭಟ್
|
Google Oneindia Kannada News

ಹೋಟೆಲ್‌ಗಳಲ್ಲಿ ಬಿಸಿ-ಬಿಸಿ ತಿಂಡಿಗಳನ್ನು ತಿನ್ನುವಾಗ ದರ ಹೆಚ್ಚಾಯಿತಲ್ಲಾ? ಎಂದು ಜನರಿಗೆ ಅನ್ನಿಸುತ್ತದೆ. ಡೀಸೆಲ್, ಸಿಲಿಂಡರ್ ಬೆಲೆಗಳು ಹೆಚ್ಚಾದಾಗ ಕಾಫಿ, ತಿಂಡಿಗಳ ಬೆಲೆಗಳನ್ನು ಹೆಚ್ಚಿಸುವ ಹೋಟೆಲ್ ಮಾಲೀಕರು ಈಗ ಡೀಸೆಲ್ ದರ ಕಡಿಮೆಯಾಗುತ್ತಿದ್ದರೂ ಮೌನವಾಗಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿರುವ ಹೋಟೆಲ್ ಮಾಲೀಕರು ಬೆಲೆ ಇಳಿಕೆ ಬಗ್ಗೆ ಮಾತನಾಡುತ್ತಿಲ್ಲ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಗಳು ಕಡಿಮೆಯಾಗುತ್ತಿದ್ದು, ಜನವರಿ ತಿಂಗಳಿನಲ್ಲಿ ಎರಡು ಬಾರಿ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿತ್ತು. ಫೆಬ್ರವರಿ ತಿಂಗಳಿನಲ್ಲಿಯೂ ದರ ಇಳಿಕೆಯಾಗಿದ್ದು, ಡೀಸೆಲ್ ದರ ಪ್ರತಿ ಲೀಟರ್ ಗೆ 50 ರೂ. ಗಿಂತ ಕಡಿಮೆಯಾಗಿದೆ. [5 ರೂ.ಗೆ ಐದು ಇಡ್ಲಿ, ಉಪ್ಪಿಟ್ಟು, ಚಿತ್ರಾನ್ನ!]

ಆದರೆ, ಬೆಂಗಳೂರು ಸೇರಿದಂತೆ ರಾಜ್ಯದ ಹೋಟೆಲ್ ಮಾಲೀಕರು ಕಾಫಿ, ತಿಂಡಿಗಳ ಬೆಲೆಗಳನ್ನು ಕಡಿಮೆ ಮಾಡುವ ಕುರಿತು ಮೌನಕ್ಕೆ ಶರಣಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೋಟೆಲ್ ಮಾಲೀಕರೊಂದಿಗೆ ಸಭೆ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ, ಇದು ಜಾರಿಗೆ ಬರುವುದು ಯಾವಾಗ?

hotel

ಹಿಂದೆ ಡೀಸೆಲ್ ದರಗಳು ಹೆಚ್ಚಾದಾಗ 8-9ರ ಗಡಿಯಲ್ಲಿದ್ದ ಕಾಫಿ-ಟೀ ಬೆಲೆಯನ್ನು ಪ್ರಮುಖ ಹೋಟೆಲ್‌ಗಳು ಹೆಚ್ಚಿಸಿದ್ದವು. ಸದ್ಯ 15 ರೂ. ಮತ್ತು ಅದರ ಹತ್ತಿರದಲ್ಲಿ ಕಾಫಿ ದರವಿದೆ. ಡೀಸೆಲ್ ಮತ್ತು ಎಲ್‌ಪಿಜಿ ದರ ಕಡಿಮೆಯಾದರೂ ಕಾಫಿ ದರ ಮಾತ್ರ ಇಳಿಕೆಯಾಗಿಲ್ಲ. [ಡಿಸೇಲ್ ಬೆಲೆ ಪ್ರತಿ ಲೀಟರ್ ಗೆ 50 ರು ಗಿಂತ ಕಡಿಮೆ]

30 ರೂ. ಇಲ್ಲದೆ ಹೋಟೆಲ್‌ಗೆ ಹೋಗುವಂತಿಲ್ಲ : ಸದ್ಯದ ಪರಿಸ್ಥಿತಿಯಲ್ಲಿ ಹೋಟೆಲ್‌ ಊಟಕ್ಕೆ ಕನಿಷ್ಠ 40, ತಿಂಡಿಗಳಿಗೆ ಕನಿಷ್ಠ 30 ರೂ. ಅಗತ್ಯವಿದೆ. 30 ರೂ. ಜೇಬಿನಲ್ಲಿಲ್ಲದೇ ಹೋಟೆಲ್‌ವೊಳಗೆ ಕಾಲಿಡುವಂತಿಲ್ಲ ಎಂಬ ಪರಿಸ್ಥಿತಿ ಇದೆ. ಆದರೆ, ಬೆಲೆ ಇಳಿಕೆ ಬಗ್ಗೆ ಮಾತ್ರ ಮಾಲೀಕರು ಮೌನಕ್ಕೆ ಶರಣಾಗಿದ್ದಾರೆ. [ಮಂಗಳೂರಿನಲ್ಲಿ 10 ರೂ.ಗೆ ಊಟ ಸಿಗುತ್ತೆ!]

ದೊಡ್ಡ ಹೋಟೆಲ್‌ಗಳಲ್ಲಿ ದೋಸೆ ಮುರಿಯಬೇಕಾದರೆ ಜೇಬಲ್ಲಿ ಕನಿಷ್ಠ 40 ರೂ. ಇರಬೇಕು. ಜನರನ್ನು ಸದಾ ಸೆಳೆಯುವ ಮಸಾಲೆ ದೋಸೆಗೆ 35 ರಿಂದ 45 ರೂ.ವರೆಗೆ ವಿವಿಧ ಹೋಟೆಲ್‌ಗಳಲ್ಲಿ ದರವಿದೆ. 2 ಇಡ್ಲಿಗೆ 20 ರೂ., ಒಂದು ಉದ್ದಿನ ವಡೆಗೆ ಕನಿಷ್ಠ 15 ರೂ. ದರವಿದೆ.

idly

ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಎಲ್‌ಪಿಜಿ ದರದಲ್ಲಿ ಇಳಿಕೆಯಾಗಿದೆ ಸಬ್ಸಿಡಿರಹಿತ, ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಿಲಿಂಡರ್ ಬೆಲೆಗಳು ಇಳಿದಿವೆ. ತರಕಾರಿಗಳ ಬೆಲೆಗಳು ಅಷ್ಟು ಏರಿಕೆಯಾಗಿಲ್ಲ. ಆದರೆ, ಹೋಟೆಲ್‌ಗಳಲ್ಲಿ ಮಾತ್ರ ದರ ಇಳಿಯುತ್ತಿಲ್ಲ.

ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ನಂತೆ ಕರ್ನಾಟಕದಲ್ಲಿ ಯಾವುದೇ ಕಡಿಮೆ ದರದ ಹೋಟೆಲ್‌ಗಳು ಲಭ್ಯವಿಲ್ಲ. ಅಣ್ಣಾ ಕ್ಯಾಂಟೀನ್ ಎಂಬ ಮಾತುಗಳು ಕೇಳಿಬರುತ್ತಿವೆ ಅವುಗಳು ಆರಂಭವಾಗುವುದು ಯಾವ ಕಾಲಕ್ಕೋ?. ಸದ್ಯ ಸರ್ಕಾರ ಹೋಟೆಲ್ ಮಾಲೀಕರ ಜೊತೆ ಸಭೆ ನಡೆಸಿ ದರ ಇಳಿಕೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಬಾರದೆ?

English summary
Letters to the Editor : Our reader Bhaskar Bhat urged the hotel owners association to cut price of menu after diesel price come down form last three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X