ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಗಣೇಶ ಉತ್ಸವದಲ್ಲಿ ಕನ್ನಡವೇ ಮಾಯ!

By * ಜಯಂತ್ ಸಿದ್ಮಲ್ಲಪ್ಪ
|
Google Oneindia Kannada News

ಬೆಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಸಂಘ ಸಂಸ್ಥೆಗಳಲ್ಲಿ ಮಂಚೂಣಿಯಲ್ಲಿರುವ ಹೆಸರು ಅಂದರೆ ಬಸವನಗುಡಿಯ "ಶ್ರೀ ವಿದ್ಯಾರಣ್ಯ ಯುವಕ ಸಂಘ". ಬಸವನಗುಡಿಯ ಎ.ಪಿ.ಎಸ್ ಕಾಲೇಜು ಮೈದಾನದಲ್ಲಿ ವರ್ಷದಿಂದ ವರ್ಷಕ್ಕೆ ವೈಭವದಿಂದ, ವಿಶಿಷ್ಟವಾಗಿ ಸಾರ್ವಜನಿಕ ಗಣೇಶ ಹಬ್ಬ ನಡೆಸಿಕೊಂಡು ಬರುತ್ತಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹಬ್ಬದ ಆಚರಣೆ, ಪ್ರಚಾರ ಹಾಗೂ ಕಲಾವಿದರ ಆಯ್ಕೆಯಲ್ಲಿ ಕನ್ನಡ ಹಾಗೂ ಸ್ಥಳೀಯರನ್ನು ಕಡೆಗಣಿಸಲಾಗಿದೆ.

ವಿದ್ಯಾರಣ್ಯ ಯುವಕ ಸಂಘ ಈ ಬಾರಿಯು ಕೂಡ ಇದೇ ಆಗಸ್ಟ್ 29 ರಿಂದ ಸೆಪ್ಟೆಂಬರ್ 8 ರ ತನಕ ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. 60 ರ ದಶಕದಲ್ಲಿ ಕು.ರಾ.ಸೀತಾರಾಮ ಶಾಸ್ತ್ರಿಗಳು, ಮ.ರಾಮಮೂರ್ತಿಯವರು ಹತ್ತಾರು ಕನ್ನಡ ಕಟ್ಟಾಳುಗಳೊಂದಿಗೆ ಕನ್ನಡದ ಕಂಪನ್ನು ಪಸರಿಸಲೆಂದೇ ರೂಪಗೊಂಡ ಶ್ರೀ ವಿದ್ಯಾರಣ್ಯ ಯುವಕ ಸಂಘ ಕಳೆದ ಐದು ದಶಕಗಳಿಂದ ಬೆಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದೆ.

ಆದರೆ ಕಳೆದ ಕೆಲ ವರ್ಷಗಳಿಂದ ಈ ಸಂಘ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಲ್ಲಿ ಪರ ಭಾಷೆಯ ಮೆರೆತ ನೋಡಿದರೆ ಇದು ನಿಜಕ್ಕೂ ಹಿರಿಯರು ಕಟ್ಟಿದ ಅದೇ ಕನ್ನಡದ ಯುವಕರ ಸಂಘವಾ ಅನ್ನುವ ಅನುಮಾನ ಮೂಡುತ್ತಿದೆ.

The Bengaluru Ganesh Utsava is neglecting kannada language

ಕಳೆದ 3 ವರ್ಷಗಳಿಂದ ಗಮನಿಸಿದಂತೆ ನಮ್ಮಲ್ಲೇ ಹಲವಾರು ಪ್ರತಿಭಾವಂತ ಸಂಗೀತಗಾರರು, ಹಾಡುಗಾರರು, ಕಲಾವಿದರು, ಹೊಸ ಪ್ರತಿಭೆಗಳು ಇರುವಾಗಲೂ ಪರಭಾಷಿಕರಿಂದ ಪರಭಾಷೆಯ ಕಾರ್ಯಕ್ರಮಗಳನ್ನ ನಡೆಸಿಕೊಡಲಾಗುತ್ತಿದೆ. ಇವರ ವೆಬ್ಸೈಟ್ ಆಗಲಿ, ಸಾಮಾಜಿಕ ತಾಣಗಳಾದ ಫೇಸ್ಬುಕ್ ಪುಟ, ಟ್ವಿಟ್ಟರ್ ಖಾತೆಗಳಲ್ಲಾಗಲಿ ಮಾಹಿತಿಗಳು ಕನ್ನಡದಲ್ಲಿರುವುದಿಲ್ಲ.

ಈ ಬಾರಿಯ ಅಂದರೆ ಐವತ್ತರೆಡನೇ ಸಾರ್ವಜನಿಕ ಗಣೇಶೋತ್ಸವದ ಜಾಹಿರಾತಿನ ಸಲುವಾಗಿ ಮಾಡಲಾಗಿರುವ ವೀಡಿಯೊ ಕೂಡ ಕನ್ನಡದಲ್ಲಿಲ್ಲ. ಕನ್ನಡಿಗರ ಪ್ರಮುಖ ಸಾಂಸ್ಕೃತಿಕ ಹೆಗ್ಗುರುತಾಗಬೇಕಿದ್ದ ಒಂದು ಐತಿಹಾಸಿಕ ಆಚರಣೆ ಕಾರ್ಪೋರೇಟ್ ಸ್ವರೂಪ ಪಡೆದು ನೆಲದ ಸೊಗಡಿನಿಂದಲೇ ದೂರವಾಗುತ್ತಿರುವುದು ಬೆಂಗಳೂರಿನ ಕನ್ನಡಿಗರು ತಲೆ ತಗ್ಗಿಸಬೇಕಾದ ವಿಚಾರವಾಗಿದೆ.

ಚಿತ್ರ ಕೃಪೆ - ಬೆಂಗಳೂರು ಗಣೇಶ ಉತ್ಸವ ಫೇಸ್ಬುಕ್ ಪುಟ

English summary
The Bengaluru Ganesh Utsava is a one of Bangalore's largest Cultural Festivals organised by Sri Vidyaranya Yuvaka Sangha, Basavanagudi. This is the major cultural festival of South Bangalore but organizers are neglecting Kannada reports Citizen Journalist Jayanth Siddamallappa, Shimoga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X