ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳ್ನಾಡಿನಲ್ಲಿ ಕನ್ನಡ ಮಾತಾಡಿದ್ದಕ್ಕೆ ದಂಡ : ಪ್ರತಿಕ್ರಿಯೆ

By Prasad
|
Google Oneindia Kannada News

ಕನ್ನಡಿಗರೊಬ್ಬರು ತಮಿಳುನಾಡಿನಲ್ಲಿ ಸಂಚರಿಸುವಾಗ ವೆಲ್ಲೂರು ಆರ್ಟಿಓ ಕಚೇರಿಯಲ್ಲಿ ಕನ್ನಡ ಮಾತನಾಡಿದ್ದಕ್ಕೆ ಸಾವಿರ ರು. ದಂಡ ವಿಧಿಸಲಾಯಿತು ಎಂದು ಫೇಸ್ ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕನ್ನಡಿಗರಿಂದ ಭಾರೀ ಪ್ರತಿಸ್ಪಂದನೆ ವ್ಯಕ್ತವಾಗಿದೆ. ಕರ್ನಾಟಕದಲ್ಲಿ ತಮಿಳು ಮಾತನಾಡುವವರಿಗೂ ದಂಡ ವಿಧಿಸಬೇಕು ಎಂಬಿತ್ಯಾದಿ ಮಾತಿನ ಈಟಿಗಳು ತೂರಿ ಬಂದಿವೆ.

ಜೊತೆಗೆ, ಇದು ಅಷ್ಟು ಸತ್ಯವಾಗಿರಲಿಕ್ಕಿಲ್ಲ. ನಾನು ಹಲವಾರು ಬಾರಿ ಅಲ್ಲಿಗೆ ಹೋಗಿದ್ದೇನೆ. ಕನ್ನಡದಲ್ಲೇ ಮಾತನಾಡಿದ್ದೇನೆ. ನನಗೆ ಎಂದೂ ದಂಡ ವಿಧಿಸಿಲ್ಲ ಅಂತ ಮತ್ತೊಬ್ಬ ಕನ್ನಡಿಗರು ಬರೆದುಕೊಂಡಿದ್ದಾರೆ. ಪರರಾಜ್ಯಕ್ಕೆ ಹಳದಿ ಬೋರ್ಡಿನ ವಾಹನ ಪ್ರವೇಶ ಮಾಡಬೇಕಿದ್ದರೆ ಪ್ರವೇಶಧನ ಕಟ್ಟಲೇಬೇಕು. ಅದನ್ನು ದಂಡ ಅಂತ ಯಾಕೆ ಅಂದುಕೊಳ್ಳೀರಿ ಅಂತ ಮಗದೊಬ್ಬರು ಪ್ರಶ್ನಿಸಿದ್ದಾರೆ.

ಏನೇ ಆಗಲಿ, ಕನ್ನಡಿಗರು ಮೃದು ಧೋರಣೆಯವರಿದ್ದಿದ್ದರಿಂದಲೇ ಕರ್ನಾಟಕದಲ್ಲಿ ಭಾರೀ ಸಂಖ್ಯೆಯಲ್ಲಿ ತಮಿಳುನಾಡಿನ ಜನರು ಬಂದು ವಾಸಿರುತ್ತಿರುವುದು ಎಂಬುದು ತಳ್ಳಿಹಾಕುವ ಮಾತಲ್ಲ. ಅಚ್ಚರಿಯ ಸಂಗತಿಯೆಂದರೆ, ಇಂಥ ಘಟನೆಗಳಿಗೆಲ್ಲ ಕನ್ನಡಪರ ಸಂಘಟನೆಗಳು ಇತ್ತೀಚೆಗೆ ಯಾಕೋ ಯಾವುದೇ ಪ್ರತಿಕ್ರಿಯೆ ತೋರಿಸುತ್ತಿಲ್ಲ. ಕಾರಣ ಏನಿರಬಹುದು?

ಕೆಳಗೆ ಕೆಲ ಕನ್ನಡಿಗರು ಕನ್ನಡದಲ್ಲಿಯೇ ಬರೆದ ಪ್ರತಿಕ್ರಿಯೆಗಳನ್ನು ಪ್ರಕಟಿಸುತ್ತಿದ್ದೇವೆ, ಓದಿಕೊಳ್ಳಿ. ಆಂಗ್ಲ ಭಾಷೆಯಲ್ಲಿಯೂ ಹಲವಾರು ಜನರು ಅಭಿಪ್ರಾಯ ಮಂಡಿಸಿದ್ದಾರೆ. ಅವನ್ನು ನಾವು ಪ್ರಕಟಿಸಲು ಪರಿಗಣಿಸಿಲ್ಲ. ನೀವೂ ನಿಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ಕನ್ನಡದಲ್ಲಿಯೇ ಮಂಡಿಸಿ. [ತಮಿಳುನಾಡಿನಲ್ಲಿ ಕನ್ನಡದಲ್ಲಿ ಮಾತಾಡಿದ್ರೆ 1,000 ರು ದಂಡ!]

Response to fine on Kannadiga in Tamil Nadu

***

ಬೆಂಗಳೂರಿನ ಕೆಲವು ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ವಿದ್ಯಾರ್ಥಿಗಳಿಗೆ ದಂಡ ಹಾಕುತ್ತಾರಂತೆ. ಅದರೆದುರು, ಇದೇನು ಮಹಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಅಂದ ಹಾಗೆ ಅವು ಇಂಗ್ಲಿಷ್ ಮೀಡಿಯಂ ಶಾಲೆಗಳು! ಅವು ಕನ್ನಡಿಗರಿಗೆ ಬೇಕು ತಾನೇ? ಅದು ಎಷ್ಟಾದರೂ ಅನ್ನ ಕೊಡುವ ಭಾಷೆ ಎಂಬ ಸಮರ್ಥನೆ ಬೇರೆ!

ಸತ್ಯಕಾಮ [ಕನ್ನಡ ಕಲಿತರೆ ಏನು ಲಾಭ ಎಂದು ಪ್ರಶ್ನೆ ಕೇಳುವವರಿಗೆ]

***
ನಾವು ಕನ್ನಡಿಗರಲ್ಲವೇ? ವಿಶಾಲ ಹೃದಯದವರು ಎಂದು ಉಪ್ಪಿ ಹೇಳಿದ್ದು ಸರಿಯಾಗಿದೆ. ಎಲ್ಲ ಪರಭಾಷಿಕರಿಗೂ ಇಲ್ಲಿನ ಅನ್ನ ನೀರು ಬೇಕು. ಕೆಲಸಕ್ಕಾಗಿ ಬೆಂಗಳೂರೇ ಆಗಬೇಕು. ಯಾಕೆ? ನಿಮ್ಮ ರಾಜ್ಯದಲ್ಲಿ ಕೆಲಸ ಇಲ್ಲವೇ? ಎಲ್ಲವನ್ನೂ ಇಲ್ಲಿಂದ ಪಡೆದು ಕೊನೆಗೆ ಕನ್ನಡ ಹಾಗೂ ಇಲ್ಲಿನ ಜನರನ್ನು ದೂಷಿಸುವ ಕಚಡ ಬುದ್ಧಿ ತೋರಿಸದಿದ್ದರೆ ಇವರಿಗೆ ನೆಮ್ಮದಿಯೆ ಇಲ್ಲ‌. (ಕೆಲವರು ಒಳ್ಳೆಯವರೂ ಇದ್ದಾರೆ. ಇವರನ್ನು ನಾನು ದೂಷಿಸುತ್ತಿಲ್ಲ.) ಇಂತಹ ಕಚಡ ಬೋ...ಮಕ್ಕಳನ್ನು ಒದ್ದು ಕರ್ನಾಟಕದಿಂದ ಹೊರಗೆ ಹಾಕಬೇಕು. ಎಲ್ಲ ಭಾಷೆಗಳನ್ನು ಎಲ್ಲಾ ರಾಜ್ಯದವರನ್ನೂ ನಾನು ಗೌರವಿಸುತ್ತೇನೆ. ಆದರೆ ಅದಕ್ಕೆ ಅವರು ಯೋಗ್ಯರಾಗಿದ್ದರೆ ಮಾತ್ರ. [ಮೂಲ ಅಮೆರಿಕಾ ಜನಾಂಗದ ಭಾಷೆಯಲ್ಲಿ ಕನ್ನಡದ ಪ್ರಭಾವ]

ವಿರಾಟ್

***
ಕನ್ನಡದಲ್ಲಿ ಮಾತನಾಡಿದಕ್ಕೆ ದಂಡ ವಿಧಿಸಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಿ, ದಯವಿಟ್ಟು ಕನ್ನಡದಲ್ಲಿ ತಪ್ಪಾಗಿ ಟೈಪ್ ಮಾಡಿ, ಕನ್ನಡವನ್ನು ಸಾಯಿಸಬೇಡಿ . . . ಕರ್ನಾಟಕದಲ್ಲಿ ಹುಟ್ಟಿ ಕನ್ನಡ ಮಾತನಾಡದೇ ಬೇರೆ ಭಾಷೆಯಲ್ಲಿ ಮಾತನಾಡುವವರಿಗೆ ಏನ್ಮಾಡ್ತೀರಾ?

ಆರ್ ಉದಯ್

***
ಈ ತರಹದ ಅನುಭವ ತಮಿಳುನಾಡಿನಲ್ಲಿ ಮಾತ್ರ ಅಲ್ಲ. ಮಹಾರಾಷ್ಟ್ರ, ಹಾಗೂ ಉತ್ತರ ಪ್ರದೇಶದಲ್ಲೂ ಕೂಡ ಕನ್ನಡಿಗರಿಗೆ ಈ ತರಹ ಆಗಿದೆ. ಇದು ಹೊಸದೇನಲ್ಲ!

ರವಿ ಕನ್ನಡೇಶ

English summary
Letters to the editor : Kannadigas have expressed their views on Tamil Nadu RTO imposing fine on Kannadigas for speaking to them in Kannada. Post your views on this episode in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X