ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಡಾಮಿನೋಸ್ ಪಿಜ್ಜಾಸ್ ನಲ್ಲಿ ಆಗ ನಾನು ಹಾಗೆ ಮಾಡಿದ್ದೆ'

By ಬಿ.ಮಂಜುನಾಥ್
|
Google Oneindia Kannada News

"ಈ ಸುದ್ದಿ ನೋಡಿದೆಯಾ? ಅದ್ಯಾರೋ ಝೊಮ್ಯಾಟೊ ಡೆಲಿವರಿ ಬಾಯ್ ಎಂಥ ಕೆಲಸ ಮಾಡಿದ್ದಾನೆ! ಫುಡ್ ಐಟಮ್ಸ್ ನಾವಿದ್ದ ಜಾಗಕ್ಕೆ ತಲುಪಿಸುತ್ತಾರಲ್ಲ, ಹಾಗೆ ಡೆಲಿವರಿ ಕೊಡುವ ಮುಂಚೆ ತಾನು ಅದನ್ನು ತಿಂದು, ಮತ್ತೆ ಮುಂಚಿನ ಹಾಗೆ ಮುಚ್ಚಿ, ಕಸ್ಟಮರ್ಸ್ ಗೆ ಕೊಡ್ತಿದ್ದನಂತೆ. ಇವತ್ತು ಎಲ್ಲ ಕಡೆ ಅದೇ ಸುದ್ದಿ" ಎಂದ ನನ್ನ ಜತೆಗೆ ಕೆಲಸ ಮಾಡುವ ಒಬ್ಬ ವ್ಯಕ್ತಿ.

ಹಾಗೆ ಹೇಳಿ, ಕೆಲವು ಹೊತ್ತು ತಿಂದವನ ಬಗ್ಗೆ ಗೇಲಿ ಮಾಡಿ, ಅಲ್ಲಿಂದ ಹೊರಟು ಬಿಟ್ಟ. ಆದರೆ ಅವನ ಎದುರು ನಕ್ಕಂತೆ ಮಾಡಿದ ನನಗೆ, ಹಳೆಯ ಘಟನೆಗಳು ನೆನಪಾದವು. ಈಗ ನಾನು ಕೆಲಸ ಮಾಡುತ್ತಿರುವ ಎಮ್ ಎನ್ ಸಿಯ ಕೆಳಗೆ ಇರುವ ಅಂಗಡಿಯೊಂದಕ್ಕೆ ಹೋಗಿ, ಒಂದು ಸಮೋಸಾ ಕೊಡಿ ಅಂತ ಹೇಳಿದೆ. ಆ ಅಂಗಡಿ ಪಕ್ಕಕ್ಕೆ ಡಾಮಿನೋಸ್ ಪಿಜ್ಜಾ ಇದೆ. ಅದನ್ನು ನೋಡುತ್ತಾ ಹಳೆಯದೆಲ್ಲಾ ನೆನಪಾಯಿತು.

ಅರ್ಧಂಬರ್ಧ ತಿಂದು ಆಹಾರ ಡೆಲಿವರಿ ಮಾಡ್ತಿದ್ದ ಝೊಮಾಟೊ ನೌಕರ ಅಮಾನತುಅರ್ಧಂಬರ್ಧ ತಿಂದು ಆಹಾರ ಡೆಲಿವರಿ ಮಾಡ್ತಿದ್ದ ಝೊಮಾಟೊ ನೌಕರ ಅಮಾನತು

ನಾನು ಬಿ.ಕಾಂ ಓದುವಾಗ ಅಂಥದ್ದೊಂದು ಡಾಮಿನೋಸ್ ಪಿಜ್ಜಾಗೆ ಡೆಲಿವರಿ ಬಾಯ್ ಆಗಿ ಪಾರ್ಟ್ ಟೈಂ ಕೆಲಸಕ್ಕೆ ಹೋಗುತ್ತಿದ್ದೆ. ಅಲ್ಲಿಂದ ಬರುವ ಸಂಬಳ, ಟಿಪ್ಸ್ ನನ್ನ ಫೀಸ್ ಗೆ ಆಗುತ್ತಿತ್ತು ಹಾಗೂ ಪುಸ್ತಕಗಳನ್ನು ತೆಗೆದುಕೊಳ್ಳುತ್ತಿದ್ದೆ. ಹಗಲು ಹೊತ್ತಿನಲ್ಲಿ ಕಾಲೇಜಿಗೆ ಹೋಗ್ತಿದ್ದೆ. ಸಂಜೆ ಮೇಲೆ ಪಿಜ್ಜಾ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದೆ.

Readers response: This was what happened in Dominos pizza

ಅಲ್ಲಿ ನೈಟ್ ಶಿಫ್ಟ್ ಮಾಡಿದ ಮೇಲೆ ಮನೆಗೆ ಹೋಗ್ತಾ ಇದ್ದದ್ದು ಮಾರನೇ ದಿನ ಬೆಳಗ್ಗೆಯೇ. ಇದೆಲ್ಲ ಹನ್ನೆರಡು ವರ್ಷದ ಹಿಂದಿನ ಮಾತು. ನಾವು ನೈಟ್ ಶಿಫ್ಟ್ ಮಾಡುವ ಹುಡುಗರು ಅಲ್ಲೇ ಮಲಗುತ್ತಿದ್ದೆವು. ರಾತ್ರಿ ಸ್ಟಾಕ್ ಚೆಕ್ ಮಾಡುವವರಿಗೆ ಲೆಕ್ಕ ಕೊಡುವಾಗಲೇ ಒಂದು ಲಾರ್ಜ್ ಪಿಜ್ಜಾ ಹೆಚ್ಚಿಗೆ ಹೇಳಿಬಿಡ್ತಿದ್ದಿವಿ. ಇನ್ನು ದಪ್ಪ ಮೆಣಸಿನಕಾಯಿ, ಚೀಸ್ ಅದು ಇದು ಇದ್ದೇ ಇರುತ್ತಿತ್ತು. ಅದಕ್ಕೆ ಲೆಕ್ಕ ಕೊಡುವ ಅಗತ್ಯ ಇರಲಿಲ್ಲ.

ಎಲ್ಲರೂ ಹೋಗಿ, ನಾವಷ್ಟೇ ಇದ್ದೀವಿ ಅನ್ನೋದು ಗ್ಯಾರಂಟಿ ಆದ ಮೇಲೆ ಲೆಕ್ಕ ಕೊಡದೆ ಎತ್ತಿಟ್ಟಿರುತ್ತಿದ್ದ ಪಿಜ್ಜಾ ಮಾಡಿಕೊಂಡು ತಿಂದಿರುತ್ತಿದ್ದಿವಿ. ಆಗಿನ ದಿನಮಾನಕ್ಕೆ ಇವತ್ತಿಗಿಂತ ಬಹಳ ದುಬಾರಿಯಾಗಿತ್ತು ಪಿಜ್ಜಾ. ನನ್ನಂಥ ಮಧ್ಯಮ ವರ್ಗದವನಿಗೆ ಅದರ ರುಚಿ ಹೇಗಿರುತ್ತದೆ ಅಂತ ತಿಳಿಯುವ ಆಸೆ ಒಂದು ಕಡೆಯಾದರೆ, ಅಷ್ಟು ಶ್ರೀಮಂತರು ತಿನ್ನೋ ಇದರಲ್ಲಿ ಎಂಥದ್ದೋ ಆರೋಗ್ಯ ಇರಬೇಕು ಅನ್ನೋ ನಂಬಿಕೆ ಇರುತ್ತಿತ್ತು.

ಆ ವಿಚಿತ್ರ ಕುತೂಹಲದಲ್ಲಿ ಆಗಾಗ ಹಾಗೆ ಮಾಡುತ್ತಿದ್ದಿವಿ. ನನ್ನ ಜತೆಗೆ ಇರುತ್ತಿದ್ದ ಕೆಲವು ಹುಡುಗರ ಪಾಲಿಗೆ ಅದೇ ರಾತ್ರಿ ಊಟ. ಆ ಕಾರಣಕ್ಕೆ ತಿಂಗಳಾನುಗಟ್ಟಲೆ ಈ ರೀತಿ 'ಕದ್ದು' ತಿಂದಿದ್ದೀವಿ. ಅಷ್ಟೊಂದು ಲಾಭ ಇರುವ ಡಾಮಿನೋಸ್ ಪಿಜ್ಜಾದವರಿಗೆ ನಮ್ಮಿಂದ ಏನು ನಷ್ಟ ಎಂದು ಸಮರ್ಥನೆ ಕೊಟ್ಟುಕೊಳ್ಳುತ್ತಿದ್ದಿವಿ.

ಆದರೆ, ಈಗ ಅಂದಿನ ತಪ್ಪು ಗೊತ್ತಾಗುತ್ತದೆ. ಜತೆಯಲ್ಲಿದ್ದ ಕೆಲ ಹುಡುಗರ ಪಾಲಿಗೆ ಅದೇ ಊಟ ಆಗಿರುತ್ತಿತ್ತು. ಎಷ್ಟೋ ಸಲ ಅಂದುಕೊಂಡಿದ್ದೀನಿ: ಅಲ್ಲಿಗೆ ಹೋಗಿ ಇದೆಲ್ಲ ಹೇಳಿ, ನನ್ನ ಒಂದು ತಿಂಗಳ ಸಂಬಳ ಕೊಟ್ಟು ಬರೋಣ ಎಂದು ಸಾಕಷ್ಟು ಸಲ ಅನಿಸಿದೆ. ಆದರೆ ಹಾಗೆ ಮಾಡಲು ಸಾಧ್ಯವಾಗಿಲ್ಲ.

ಇವತ್ತು ಝೊಮ್ಯಾಟೊ ಡೆಲಿವರಿ ಬಾಯ್ ಸುದ್ದಿ ನೋಡಿದ ಮೇಲೆ, ಪಾಪ ಅವರಿಗೆ ಏನು ಸಮಸ್ಯೆಯೋ ಅನಿಸಿತು. ಇಂಥ ಸುದ್ದಿ ಹಿಂದಿನ ನಿಜವಾದ ಕಥೆ ಏನು ಅಂತ ತಿಳಿಯದೆ ಮಾತನಾಡಬಾರದು ಎಂದು ಸ್ನೇಹಿತನಿಗೆ ಹೇಳಬೇಕು ಅನ್ನೋ ಮನಸು. ನೀನ್ಯಾಕೆ ಅವನ ಪರ ವಹಿಸಿಕೊಳ್ತೀಯಾ ಅಂದರೆ ಅದಕ್ಕೆ ಉತ್ತರ ಹೇಳುವ ಧೈರ್ಯ ನನಗಿಲ್ಲ. ಆದರೆ ನನ್ನ ಮುಖವೇ ಕಾಣದ ನಿಮ್ಮ ಮುಂದೆ ಇದೆಲ್ಲ ಹೇಳಬೇಕೆನಿಸಿತು.

English summary
This is the reader response to Zomato delivery boy story. It is really heart touching and human interest story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X