ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರ ಓಲೆ : ಸ್ವಾಮಿಗಳೇ ಈ ಕ್ರಾಂತಿಕಾರಿ ಬದಲಾವಣೆ ತರ್ತೀರಾ?

By Prasad
|
Google Oneindia Kannada News

ಬೆಂಗಳೂರು, ಮಾರ್ಚ್ 11 : ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಟಿಕೆಟಿಗಾಗಿ ಭಾರೀ ಲಾಬಿ ಆರಂಭವಾಗಿದೆ. ಸಿಕ್ಕವರಿಗೆ ಸೀರುಂಡೆ. ರಾಜಕಾರಣದಲ್ಲೇ ಇದ್ದವರು ಮತ್ತೆ 'ಜನಸೇವೆ'ಗೆ ಇಳಿಯುವ ಕಾತುರದಲ್ಲಿದ್ದರೆ, ರಾಜಕೀಯದ ಆಳ ಅಗಲಗಳನನು ಬಲ್ಲದಿರುವವರು ಕೂಡ, ನಾನೂ ಒಂದು ಕೈ ಯಾಕೆ ನೋಡಬಾರದು ಎಂದು ವಿಚಾರ ಮಂಥನದಲ್ಲಿ ಮುಳುಗಿದ್ದಾರೆ.

ಅಂಥವರಲ್ಲಿ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ, ಡ್ರಮ್ ಬಾರಿಸುವುದರಲ್ಲಿ ನಿಷ್ಣಾತರಾಗಿರುವ, ಶೀರೂರು ಮಠದ ಸ್ವಾಮೀಜಿಗಳಾಗಿರುವ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳು ಇದ್ದಕ್ಕಿದ್ದಂತೆ ಸುದ್ದಿಗೆ ಗ್ರಾಸವಾಗಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಟಿಕೆಟ್ಟು ಸಿಕ್ಕರೆ ನಾನು ಯಾಕೆ ಒಂದು ಕೈ ನೋಡಬಾರದು ಎಂದು, ಖಾದಿ ಧರಿಸುವ ಹವಣಿಕೆಯಲ್ಲಿದ್ದಾರೆ.

ಕನ್ನಡ ಬಾವುಟದಲ್ಲಿ ಸತ್ಯ ಮೇವ ಜಯತೇ..ಮರೆತಿರಾ?ಕನ್ನಡ ಬಾವುಟದಲ್ಲಿ ಸತ್ಯ ಮೇವ ಜಯತೇ..ಮರೆತಿರಾ?

ಕಾವಿಧಾರಿಗಳು ಉತ್ತಮ ರಾಜಕಾರಣಿ ಆಗಬಾರದೆಂದೇನಿಲ್ಲ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮನಾದ ಸ್ಥಾನವುಂಟು. ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು, ಕಾವಿಧಾರಿಯಾಗಿ ಮಾತ್ರವಲ್ಲ, ರಾಜಕಾರಣಿಯಾಗಿಯೂ ತಮ್ಮ ಸಾಮರ್ಥ್ಯವೇನೆಂದು ಸಾಬೀತುಪಡಿಸಿದ್ದಾರೆ. ಅವರೇ ನನ್ನ ರೋಲ್ ಮಾಡೆಲ್ ಎಂದು ಲಕ್ಷ್ಮೀವರ ತೀರ್ಥರು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಟಿಕೆಟ್ ಸಿಗುತ್ತದಾ? ಸಿಕ್ಕು ಗೆದ್ದರೆ ಅಧಿಕಾರವನ್ನು ಹೇಗೆ ಬಳಸಿಕೊಳ್ಳಲಿದ್ದಾರೆ?

ಇತ್ಯಾದಿ ಪ್ರಶ್ನೆಗಳು ಓದುಗರನ್ನು ಈಗಾಗಲೆ ಕಾಡಲು ಆರಂಭಿಸಿವೆ. ಈ ವಿಷಯದ ಜೊತೆಗೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಓದುಗರು ಮತ್ತೊಂದಿಷ್ಟು ಓದುಗರ ಮತ್ತು ರಾಜಕಾರಣಿಗಳ ಗಮನ ಸೆಳೆದಿದ್ದಾರೆ. ಆ ಸಂಗತಿಗಳು ಏನು, ಓದುಗರು ಕೇಳಿರುವ ಪ್ರಶ್ನೆಗಳೇನು? ಮುಂದೆ ಓದಿರಿ.

ಶೀರೂರು ಶ್ರೀಗಳೇ ಗೆದ್ದರೆ ಏನು ಬದಲಾವಣೆ ತರ್ತೀರಿ?

ಶೀರೂರು ಶ್ರೀಗಳೇ ಗೆದ್ದರೆ ಏನು ಬದಲಾವಣೆ ತರ್ತೀರಿ?

ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳೆ, ರಾಜಕೀಯ ಪ್ರವೇಶದ ನಿಮ್ಮ ನಿರ್ಧಾರಕ್ಕೆ ಸ್ವಾಗತವಿದೆ. ಆದರೆ, ಒಂದು ಮಠದ ಮಡಿ ಮೈಲಿಗೆ ಎಂಬ ಕಟ್ಟುಪಾಡಿನಲ್ಲಿರುವ ನೀವು ಜನಗಳ ಸಮಸ್ಯೆಗೆ ಹೇಗೆ ಸ್ಪಂದಿಸುತ್ತೀರಾ! ನೀವು ಸ್ಪಂದಿಸಲೆತ್ನಿಸಿದರೂ ನಿಮ್ಮ ಸುತ್ತ ಇರುವ ಮಠದ ಭಟ್ಟಂಗಿಗಳು ಬಿಡಬೇಕಲ್ಲಾ!

ರಾಜಕೀಯಕ್ಕೆ ಸೇರುವ ಬದಲು, ಕನಕ ದಾಸರ ಪ್ರಕರಣವಾದರೂ, ಇನ್ನೂ ಪಾಠ ಕಲಿಯದ ನಿಮ್ಮ ಅಷ್ಟ ಮಠಗಳಲ್ಲಿ ಇನ್ನೂ ಜಾರಿಯಲ್ಲಿರುವ ಅನಿಷ್ಟ ಪದ್ದತಿಗಳನ್ನು ತೊಡೆದುಹಾಕಿ. ಸರ್ವರಿಗೂ ಏಕ ಪಂಕ್ತಿ ಭೋಜನ, ಉತ್ತರ ಭಾರತದ ದೇವಸ್ಥಾನಗಳಲ್ಲಿರುವಂತೆ (ಕಾಶಿ ವಿಶ್ವನಾಥ, ಗಯಾ ವಿಷ್ಣು ಪಾದ) ಭಕ್ತರುಗಳೇ ದೇವರನ್ನು ಮುಟ್ಟಿ ಪೂಜಿಸುವ ಪದ್ಧತಿ ಜಾರಿಮಾಡುವುದು, ಮುಂತಾದ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು, ದೇವರು ಭಕ್ತರ ಮದ್ಯೆ ಇರುವ ಪೂಜಾರಿ ಎಂಬ ಗೋಡೆಯನ್ನು ಛಿದ್ರಗೊಳಿಸಿ ಜನಾನುರಾಗಿಗಳಾಗಿ ಆಗ ನೀವು ನಂಬಿರುವ ಶ್ರೀಕೃಷ್ಣ ಪರಮಾತ್ಮನು ಮೆಚ್ಚುವನು.

ರಾಘವೇಂದ್ರ ಮೈಸೂರು

ಇವರಿಗೆ ಈ ಐಡಿಯಾ ಯಾರು ಕೊಟ್ಟರೋ?

ಇವರಿಗೆ ಈ ಐಡಿಯಾ ಯಾರು ಕೊಟ್ಟರೋ?

ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡಲೂ ಬಾರದ ಈ ಉತ್ತರ ಕುಮಾರನ ವೈಖರಿಗೆ ಕಾಂಗ್ರೆಸ್ಸಿನ ಬೂಟು ನೆಕ್ಕುವವರಿಂದ ಮಾತ್ರ ಮೆಚ್ಚುಗೆ ಸಿಗಬಲ್ಲದು. ಹೇಚ್ಚೇನಿಲ್ಲ, ಒಂದು ಗಂಟೆಗಿಂತ ಸ್ವಲ್ಪ ಜಾಸ್ತಿ ಇರುವ ಈ ಇಡೀ ಸಂಭಾಷಣೆ ಯೂಟ್ಯೂಬ್ ನಲ್ಲಿ ಲಭ್ಯವಿದೆ. ಒಮ್ಮೆ ನೋಡಿ, ಈ ದೀಡು ಪಂಡಿತನ ಪರಿಪಾಟಲು ನೋಡಿ ನಗು ಬರುತ್ತದೆಯೇ ಹೊರತು ಮೆಚ್ಚುಗೆ ಬರುವುದಿಲ್ಲ. ಇದರಲ್ಲೇ ಮತ್ತೊಂದು ಮುತ್ತು ಉದುರಿಸಿದ್ದಾರೆ. ಇಂಡಿಯಾದ ಎಲ್ಲ ಆಸ್ಪತ್ರೆಗಳ ಎಂ ಆರ್ ಐ ಮಷಿನುಗಳನ್ನು ಸಂಪರ್ಕಿಸಬೇಕಂತೆ! ಅದ್ಯಾವ ಬೃಹಸ್ಪತಿ ಇವರಿಗೆ ಈ ಐಡಿಯಾ ಕೊಟ್ಟನೋ ತಿಳಿಯದು. ಸ್ಯಾಮ್ ಪಿತ್ರೋಡ ತಲೆ ಚೆಚ್ಚಿಕೊಳ್ಳುತ್ತಿರಬಹುದು, ಇವರನ್ನು ಪ್ರಧಾನಿ ಮಾಡಲು ಹೋಗುತ್ತಿದ್ದೀವಲ್ಲ ಅಂತ.

ಭರತ್ ಶಾಸ್ತ್ರೀ

ಸುಳ್ಳು ಸುದ್ದಿ ಯಾರೋ ಕಿಡಿಗೇಡಿಗಳು ಹಬ್ಬಿಸುತ್ತಿದ್ದಾರೆ

ಸುಳ್ಳು ಸುದ್ದಿ ಯಾರೋ ಕಿಡಿಗೇಡಿಗಳು ಹಬ್ಬಿಸುತ್ತಿದ್ದಾರೆ

ಈ ಹಿಂದೆ ಪ್ರಕರವಾಗಿದ್ದ ಸುಳ್ಳು ಪಟ್ಟಿ ಇದು. ಬಿಜೆಪಿ ರಾಷ್ಟ್ರಾಧ್ಯಕ್ಷರು ಬಿಡುಗಡೆ ಮಾಡುವ ಪಟ್ಟಿಯೇ ಅಂತಿಮ. ಕೆಲವು ಕಿಡಿಗೇಡಿಗಳು ಜನವರಿ ತಿಂಗಳಲ್ಲಿ ವಾಟ್ಸ್ ಆಪ್ ನಲ್ಲಿ ಸುಳ್ಳುಸುದ್ದಿ ಹರಿಬಿಟ್ಟಿದ್ದು, ಇದು ಕಾಂಗ್ರೆಸ್ ಪಕ್ಷದ ತಂತ್ರ. ಕಾರಣ ಕ್ಷೇತ್ರದಲ್ಲಿ ಈ ಗಾಗಲೇ ಹಲವಾರು ನಾಯಕರುಗಳು ಬಿರುಸಿನಿಂದ ಓಡಾಡುತ್ತಿದ್ದು, ಬಿಜೆಪಿಯ ಶಕ್ತಿಯನ್ನು ಕುಂದಿಸಲು ಕಾಂಗ್ರೆಸ್ ನ ಕೆಲ ನಾಯಕರು ಮಾಡಿರುವ ಕುತಂತ್ರ. ನಂಬಬೇಡಿ, ನಂಬಿ ಶೇರ್ ಮಾಡಬೇಡಿ.

ಸಿಟಿ ಮಂಜುನಾಥ್

ವಿಷಯ ಒಂದು, ಎರಡು ತದ್ವಿರುದ್ಧ ಕಾಮೆಂಟುಗಳು

ವಿಷಯ ಒಂದು, ಎರಡು ತದ್ವಿರುದ್ಧ ಕಾಮೆಂಟುಗಳು

ಕನ್ನಡಿಗರನ್ನ ಕಾಯೋಕೆ ಇಂಥ ಡೋಂಗಿ (ಕಾಳಿ) ಸ್ವಾಮಿ ಬೇಕಾಗಿಲ್ಲ. ಜಾಹೀರಾತು ವಿಮರ್ಶೆ ಬೇಕಿಲ್ಲ. ಎಲ್ಲಿ ಬಟ್ಟೆ ತಗೋಬೇಕೋ ಅದು ಜನರ ನಿರ್ಧಾರ. ಇವನಿಗೆ ಒಂದು ವಿಷಯ ಬೇಕು... ಪ್ರಚಾರಕ್ಕೆ ನಿತ್ಯಾನಂದನ ವಿಚಾರದಲ್ಲಿ ಫಾರ್ಚುನರ್ ಕಾರ್ ಕೇಳಿ ಮಂಗನಾಗಿದ್ದು ಮರ್ತಿರಬೇಕು. ಆದರೆ, ಜನ ಮರೆತಿರುವುದಿಲ್ಲ.

ಶ್ರೀನಿವಾಸ್

ಅತ್ಯಂತ ವಿವಾದಿತ ಋಷಿಕುಮಾರ ಸ್ವಾಮೀಜಿಯವರನ್ನು ಯಾವುದೇ ವಿಚಾರಕ್ಕೆ ಒಪ್ಪದಿದ್ದರೂ ಕನಿಷ್ಠ ಈ ವಿಚಾರಕ್ಕೆ, ಅದೊ ನಮ್ಮ ಕೆಂಪೇಗೌಡರು ಹಾಗೂ ಬೆಂಗಳೂರು ಇತಿಹಾಸದ ಬಗ್ಗೆ "ಪೋತಿಸ್" ಸಂಸ್ಥೆಯವರು ವಿಕೃತವಾಗಿ ಜಾಹೀರಾತು ಮಾಡಿರುವ ವಿಷಯದ ಬಗ್ಗೆ ಎಲ್ಲರ ಗಮನ ಸೆಳೆದಿರುವ ಹಾಗೂ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವ ಋಷಿಕುಮಾರ ಸ್ವಾಮೀಜಿಯವರ ಕ್ರಮಕ್ಕೆ, ಕಾಳಜಿಗೆ ಖಂಡಿತಾ ಒಪ್ಪಲೇಬೇಕು! ಋಷಿಕುಮಾರ ಸ್ವಾಮೀಜಿ ಯವರ ಆಕ್ಷೇಪ ಸರಿಯಾಗಿಯೇ ಇದೆ!

ರಾಘವೇಂದ್ರ

ತಮಿಳುನಾಡಿನ ಪೋತಿಸ್ ವಿರುದ್ಧ ಋಷಿಕುಮಾರ ಸ್ವಾಮಿ ತಿರುಗಿಬಿದ್ದಿದೇಕೆ? ತಮಿಳುನಾಡಿನ ಪೋತಿಸ್ ವಿರುದ್ಧ ಋಷಿಕುಮಾರ ಸ್ವಾಮಿ ತಿರುಗಿಬಿದ್ದಿದೇಕೆ?

ಮೋದಿಯವರಲ್ಲಿ ಈ ಗುಣದ ಅಭಾವ ಕಾಣುತ್ತಿದೆ

ಮೋದಿಯವರಲ್ಲಿ ಈ ಗುಣದ ಅಭಾವ ಕಾಣುತ್ತಿದೆ

ಇದು ಉದ್ದೇಶಪೂರ್ವಕವಾಗಿಯೇ ಮೋದಿಯವರು ಅಡ್ವಾಣಿಯವರಿಗೆ ಮಾಡಿದ ಸಾರ್ವಜನಿಕ ಅವಮಾನ. ಪಕ್ಷದ ಹಿರಿಯರೊಂದಿಗೆ ಏನೇ ಭಿನ್ನಮತ ಇದ್ದರೂ ತಾಯಿಯನ್ನು ಹೇಗೆ ಗೌರವಿಸುತ್ತಾರೋ ಹಾಗೆಯೇ ಪಿತೃ ಸ್ಥಾನದಲ್ಲಿರುವ ಅಡ್ವಾಣಿಯವರನ್ನು ಕಾಣಬೇಕಿತ್ತು. ಎಷ್ಟೇ ಪ್ರಸಿದ್ಧಿ ಪಡೆದರೂ ಹಿರಿಯರಿಗೆ ಗೌರವ ಕೊಡಬೇಕು. ಮೋದಿಯವರಲ್ಲಿ ಇದರ ಅಭಾವ ಕಾಣುವಂತಿದೆ. ತಪ್ಪನ್ನು ತಿದ್ದಿಕೊಂಡು ಸಂಸ್ಕಾರವಂತರಾಗಿಯೇ ಇರುವರೆಂದು ಆಶಿಸೋಣ.

ಆಚಾರ್ಯ

ವೈರಲ್ ವಿಡಿಯೋ : ಅಡ್ವಾಣಿಯನ್ನು ಕಡೆಗಣಿಸಿದರೆ ಮೋದಿ?ವೈರಲ್ ವಿಡಿಯೋ : ಅಡ್ವಾಣಿಯನ್ನು ಕಡೆಗಣಿಸಿದರೆ ಮೋದಿ?

ಇಂದಿರಾ, ಗೌಡರನ್ನು ಮೀರಿಸುವ ರಾಜಕೀಯ

ಇಂದಿರಾ, ಗೌಡರನ್ನು ಮೀರಿಸುವ ರಾಜಕೀಯ

ನೀವು ಪ್ರಧಾನಿ ಆಗಿದ್ದರೆ UPA I ಮತ್ತು IIರಲ್ಲಿ ನಡೆದ ಸ್ಕ್ಯಾಂಡಲ್ ಗಳ ಸುರಿಮಳೆ, ನ್ಯಾಷನಲ್ ಹೆರಾಲ್ಡ್, ಅಳಿಯನ ಅವ್ಯವಹಾರ ಮತ್ತು ಜನಗಳಿಗೆ ತಿಳಿಯದ / ತಿಳಿಸದ ಅವ್ಯವಸ್ಥೆಯ ಆಡಳಿತ ಕೊಡಲು ಸಾಧ್ಯವಾಗುತ್ತಿರಲಿಲ್ಲ. ಆದುದರಿಂದ ಒಂದು ಮೌನ ಪಶುವನ್ನು (ಮನ್ಮೋಹನ್ ಸಿಂಗ್) ಬಲಿತೆಗೆದುಕೊಂಡು ಉತ್ತಮ ವ್ಯಕ್ತಿತ್ವ ಮತ್ತು ಅನುಭವಿ ಎಕನಾಮಿಸ್ಟ್ ನ ಹೆಸರಿಗೆ ಮಸಿ ಬಲಿಯುತಿರಲಿಲ್ಲ. ಇದು ನಿಜವಾದ ಚಾಣಾಕ್ಷತನ, ನೀವು ಇಂದಿರಾಗಾಂಧಿಯನ್ನು, ದೇವೇಗೌಡರನ್ನು ಮೀರಿಸಿ ರಾಜಕೀಯ ಮಾಡಿದಿರಿ. ನಿಮ್ಮ ಚಾಣಾಕ್ಷತನಕ್ಕೆ ದೇಶದ ಅತಿ ದೊಡ್ಡ ಪ್ರಶಸ್ತಿ ಕೊಟ್ಟರೂ ಪರವಾಗಿಲ್ಲ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವವರೆಗೂ ಕಾಯಬೇಕು.

ಶ್ರೀಧರ್ ಬಿಕೆ

ಬರಿ ಕುತಂತ್ರಿಗಳೇ ತುಂಬಿಹೋಗಿದ್ದಾರೆ

ಬರಿ ಕುತಂತ್ರಿಗಳೇ ತುಂಬಿಹೋಗಿದ್ದಾರೆ

ಈ ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ, "ನಾನು ನಿಮ್ಮನ್ನು ಒಮ್ಮೆ ತಬ್ಬಿಕೊಳ್ಳುತ್ತೇನೆ. ಏಕೆಂದರೆ ನನಗೆ ನೀವು ಮುಖ್ಯ. ನೀವು ಒಂದು ಅಭಿಪ್ರಾಯವನ್ನು ಪ್ರತಿನಿಧಿಸುತ್ತಿದ್ದೀರಿ. ಆದ್ದರಿಂದಲೇ ನನಗೆ ನೀವು ಮುಖ್ಯ" ಎಂದು ರಾಹುಲ್ ಗಾಂಧಿ ಹೇಳಿದ ತಕ್ಷಣ ದೇಶ ಉದ್ದಾರವಾಯಿತು. ಈ ದೇಶದಲ್ಲಿ ಹೀಗೆ ಭಾಷಣ ಮಾಡಿದವರು ಯಾರು ಏನು ಮಾಡಲಿಲ್ಲ, ಮಾಡಲಾದವರನ್ನುಳಿಸಲಿಲ್ಲ, ಬರಿ ಕುತಂತ್ರಿಗಳೇ ತುಂಬಿಹೋಗಿದ್ದಾರೆ ರಾಜಕೀಯದಲ್ಲಿ.

ಗುರುಮೂರ್ತಿ ವಿ

ಅದು ಫೇಕ್ ವಿಡಿಯೋ ಎಂದು ಬಸು ಅವರು ಸ್ಪಷ್ಟನೆ ಕೊಟ್ಟಿದ್ದಾರೆ, ಹಾಗೇನೇ ಕಾಂಗ್ರೆಸ್ ಮೇಲೆ ಕಸೆ ಹಾಕ್ತೇನೆ ಅಂತಾನೂ..ಹೇಳಿದ್ದಾರೆ. ಅಸಲಿ ವಿಡಿಯೋ ವೈರಲ್ ಆಗಿರೋದು. ನೀವು ಹೇಳ್ತ ಇರೋದು ಕಾಂಗ್ರೆಸ್ ಎಡಿಟ್ ಮಡಿದ ವಿಡಿಯೋದ ಬಗ್ಗೆ.

ಗಜಾನನ್ ಭಟ್

ಪ್ರಾಮಾಣಿಕ ಅಧಿಕಾರಿಗಳ ಪಾಡು ನೋಡಿದ್ರೆ...

ಪ್ರಾಮಾಣಿಕ ಅಧಿಕಾರಿಗಳ ಪಾಡು ನೋಡಿದ್ರೆ...

ಗೌಡ್ರೆ, ಕಾಂಗ್ರೆಸ್ ಸರ್ಕಾರ ಬಂದ ಮೆಲ್ಲೆ ಲೋಕಾಯುಕ್ತ ಸಂಸ್ಥೆನೆ ಮುಗ್ಸಿದ್ರು. ಈಗ ಆ ಸಂಸ್ಥೆ ಯಾವ ಸ್ಥಿತಿಗೆ ಹೋಗಿದೆ ನೋಡಿ. ಅವರಿಗೆ ಇಲ್ಲದ ರಕ್ಷಣೆ ಸಾಮಾನ್ಯ ಜನರಿಗೆ ಸಿಗುತ್ತಾ? ಇದನೆಲ್ಲ ನೋಡಿದ್ರೆ ಲೋಕಾಯುಕ್ತ ಸಂಸ್ಥೆನ ಪೆರ್ಮೆನೆಂಟ್ ಆಗಿ ಮುಚ್ಬೇಕು ಅಂತ ಉಪಾಯ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಎಸಿಬಿ ಅನ್ನೋ ಸಂಸ್ಥೆ ಬೇಕಾಗಿದೆ. ಏಕೆಂದ್ರೆ ಹೇಗೆ ಬೇಕೊ ಹಾಗೆ ಕ್ಲೀನ್ ಚಿಟ್ ತೆಗೆದುಕೊಳ್ಳಬಹುದಲ್ಲ? ಇಂಥ ಕಾಂಗ್ರೆಸ್ ರಾಜ್ಯಭಾರದಲಿ, ಪಾಪ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಪಾಡು ನೋಡಿದ್ರೆ ಹೆದ್ರಿಕೆ ಆಗುತ್ತೆ. ಎಷ್ಟು ಅಧಿಕಾರಿಗಳ್ಳ ಪಾಡು ಏನ್ ಏನ್ ಆಯಿತು ಈ ನಾಲಕ್ಕು ವರುಷದಲ್ಲಿ ಅಂತ ಗೊತ್ತಲ್ವಾ?

ರಾಜು

ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು

ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು

ಇತ್ತೀಚಿನ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಅಂತಹ ವ್ಯತ್ಯಾಸ ಕಂಡುಬರುತ್ತಿಲ್ಲ. ಈ ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣುತ್ತಿವೆ. ಬಿಜೆಪಿ ಹಿಂದೂಗಳ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದೆ, ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ಹೆಸರನ್ನು ಹೇಳಿಕೊಂಡು ರಾಜಕೀಯ ಮಾಡುತ್ತಿದೆ.

ಕೆಎಸ್ ಪಿ

ಹುಟ್ಟುಹಬ್ಬದ ಬ್ಯಾನರ್, ಪಕ್ಷಗಳ ಬ್ಯಾನ್ನರ್ / ಹೋರ್ಡಿಂಗ್, ಹಳೆಯ ಮಾಸಿದ ಬಾವುಟ, ಅನಧಿಕೃತ ಕೇಬಲ್ ವೈರಿಂಗ್, ಮರಗಳ ಮೇಲೆ ನೇತಾಡುವ, ಸುತ್ತಿ ಬಿಟ್ಟಿರುವ ವೈರ್ ಗಳು, ಕಟ್ಟಡಗಳ ಮೇಲಿರುವ ಅನಧಿಕೃತ ಟವರ್ ಇವುಗಳನ್ನು ಸೇರಿಸಿ ತೆರುವು ಮಾಡಿ, ಪುಣ್ಯ ಬರುತ್ತದೆ.

ಜಗನ್ನಾಥ ಕೆ

ಶಾಂತಿನಗರ: ಬಿಜೆಪಿ ನಾಯಕರ ಫ್ಲೆಕ್ಸ್ ಗಳಿಗೂ ಟ್ರಾಫಿಕ್ ಸಿಗ್ನಲ್ಲೇ ಬೇಕು! ಶಾಂತಿನಗರ: ಬಿಜೆಪಿ ನಾಯಕರ ಫ್ಲೆಕ್ಸ್ ಗಳಿಗೂ ಟ್ರಾಫಿಕ್ ಸಿಗ್ನಲ್ಲೇ ಬೇಕು!

English summary
Readers' letter to articles in Oneindia Kannada. The readers have responded to stories on Shiruru matha seer contesting in Karnataka Assembly Election from Udupi, Rahul Gandhi's speech in Singapore etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X