• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಜೆಟ್ ಕುರಿತು ಒನ್ಇಂಡಿಯಾ ಓದುಗರ ವಸ್ತುನಿಷ್ಠ ಕಾಮೆಂಟ್

By Prasad
|

ಬೆಂಗಳೂರು, ಫೆಬ್ರವರಿ 02 : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಫೆಬ್ರವರಿ 1ರಂದು ಮಂಡಿಸಿರುವ 2018-19ನೇ ಸಾಲಿನ ಬಜೆಟ್ ಹೇಗಿದೆ? ಸಂಸಸದರು, ರಾಜಕಾರಣಿಗಳು, ಹಣಕಾಸು ತಜ್ಞರು ಮುಂತಾದವರು ತಾವು ಅರ್ಥೈಸಿಕೊಂಡಂತೆ ವಿಶ್ಲೇಷಣೆ ಮಾಡುತ್ತಲೇ ಇದ್ದಾರೆ.

ಒನ್ಇಂಡಿಯಾ ಕನ್ನಡ ಓದುಗರು ಕೂಡ ತಮ್ಮ ವಸ್ತುನಿಷ್ಠ ಅಭಿಪ್ರಾಯಗಳನ್ನು ಮಂಡಿಸಿದ್ದು, ಹಲವರು ಇದರಲ್ಲಿ ಚುನಾವಣೆಯ ರಾಜಕೀಯದ ವಾಸನೆ ಹೊಡೆಯುತ್ತಿದೆ ಎಂದರೆ, ಕೆಲವರು ದಿಕ್ಕುದೆಸೆಯಿಲ್ಲದ ಅರ್ಥಹೀನ ಬಜೆಟ್. ಇದರಲ್ಲಿ ಶ್ರೀಸಾಮಾನ್ಯರಿಗೆ (ಮಧ್ಯಮ ವರ್ಗದವರಿಗೆ) ಏನೂ ಕೊಟ್ಟಿಲ್ಲ ಎಂದು ವ್ಯಾಖ್ಯಾನ ಮಾಡುತ್ತಿದ್ದಾರೆ.

ಮಧ್ಯಮವರ್ಗದ್ದು ದ್ರೌಪದಿಯ ಪಾತ್ರ! ಬಜೆಟ್ ಗೆ ಶ್ರೀಸಾಮಾನ್ಯನ ವ್ಯಂಗ್ಯ

ಬಜೆಟ್ ಅಂದರೆ ಎಲ್ಲರಿಗೂ ಮೆಚ್ಚುಗೆಯಾಗಬೇಕಿಲ್ಲ. ಮೆಚ್ಚುಗೆ ಪಡೆಯುವುದು ಕಷ್ಟವೇ. ಆಡಳಿತ ಪಕ್ಷದವರು ಶಭಾಸ್ ಎಂದರೆ ವಿರೋಧಿಗಳು ಟೀಕೆ ಸುರಿಮಳೆಗರೆಯುತ್ತಿರುತ್ತಾರೆ. ಯಾವುದೇ ಬಜೆಟ್ ಮಂಡನೆಯ ನಂತರ ಕಂಡುಬರುವ ವಿದ್ಯಮಾನವಿದು. ನಮ್ಮ ಓದುಗರು ಏನಂತಾರೆ ಮುಂದೆ ಓದಿರಿ.

***

ಅಚ್ಛೇ ದಿನ್ ಬರಲಿಲ್ಲ, ವ್ಯಥೆ ಮುಗಿಯಲಿಲ್ಲ, ರೈತರ ಬಡವರ ಬವಣೆ ಕಳೆಯಲಿಲ್ಲ. ಕೇಂದ್ರದಿಂದ ಬರೀ ಬವಣೆ ಭಾಗ್ಯ ಮಾತ್ರ, ರಾಜ್ಯದಿಂದ ಕೊಲೆ ಭಾಗ್ಯ ಮಾತ್ರ ಸಿಕ್ಕಿರುವುದು. ನಮ್ಮನ್ನು ದೇವರೇ ಕಾಪಾಡಬೇಕು. ಅಯ್ಯೋ ಶಿವನೇ ಎಲ್ಲಿದ್ದೀಯ ಬೇಗ ಬಾ.

ಬಸವೇಶ್

***

ಇದರಲ್ಲಿ ಪುಗಸಟ್ಟೆ ಭಾಗ್ಯಗಳು ಒಂದೂ ಇಲ್ಲ. ಅದಕ್ಕೆ ಇದು ಜನರಿಗೆ ಅದರಲ್ಲೂ ಆರ್ಥಿಕ (ಕಾಂಗ್ರೆಸ್) ತಜ್ಞರಿಗೆ ಸರಿಯಾಗಿ ಕಾಣಿಸುತ್ತಿಲ್ಲ.

ದೇವರಾಜ ಜಿ

ಬಜೆಟ್ 2018: ಯಾವುದು ಏರಿಕೆ? ಯಾವುದು ಇಳಿಕೆ?

***

ಮಾನ್ಯ ಹಣಕಾಸು ಮಂತ್ರಿಗಳೇ, ನನ್ನದೊಂದು ಸಣ್ಣ ಸಲಹೆ. ಕೈಲಾದರೆ ಸರಕಾರಕ್ಕೆ ಕೆಲಸ ಮಾಡುವ (ಅಂದುಕೊಂಡಿದೀನಿ) ಶಾಸಕರು ಮಂತ್ರಿಗಳು ಎಲ್ಲರನ್ನೂ ಈ ಟ್ಯಾಕ್ಸ್ (ಸುಂಕ) ಕಟ್ಟೋಕ್ಕೆ ಹೇಳಿ. ಕೆಲಸ ಅಂತೂ ಮಾಡಲ್ಲ, ಇನ್ನು ಕೆಲಸ ಮಾಡೋರಿಗೆ ಯಾಕೆ ಈ ಸುಂಕ? ಇದು ಭಾರತೀಯರಾಗಿ ಬ್ರಿಟಿಷರಂತಹ ದಬ್ಬಾಳಿಕೆ ಬೇರೆ.

ಕಾಂತರಾಜು

***

ಅಲ್ಲ ಸಿದ್ದರಾಮಯ್ಯ ಅವರೇ, ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ ಏನೂ ವಿಶೇಷ ಕೊಡುಗೆ ಸಿಕ್ಕಿಲ್ಲ ಅಂತ ಹೇಳುತ್ತೀರಾ ಅಲ್ವಾ? ಕೇಂದ್ರ ಬಜೆಟ್ ಯಾವಾಗಲೂ ದೇಶದ ಹಿತದೃಷ್ಟಿಯಿಂದ ತಾನೇ ಮಂಡಿಸುವುದು? ಇದರಲ್ಲಿ ಪ್ರತೀ ರಾಜ್ಯಕ್ಕೆ ಅಂತ ಬೇರೆ ಬೇರೆ ಬಜೆಟ್ ಮಾಡುತ್ತಾರಾ? ನಿಮ್ಮದು ಎಂಥ ತಲೆ ಮಾರಾಯ್ರೆ?

ಶ್ರೀಕಾಂತ್

***

ಮತ ಗಳಿಸಲು ಬಜೆಟ್ ಮೂಲಕ ಬಿಜೆಪಿ ಯಾವ ಕಸರತ್ತು ಮಾಡಿಲ್ಲ. ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಸೋಲು ಗ್ಯಾರಂಟಿ.

ಕುಮಾರ್

***

ನಿಮ್ಮ ಸರ್ಕಾರ ಬಂದ್ರೆ ತ್ರಿಗುಣ ಮಾಡ್ತಿರಾ ಮನ್ಮೋಹನ್ ಜಿ? ಲೂಟಿ ಹೊಡೆದು ಹೋದ್ರಲಾ ಸ್ವಾಮಿ ನಿಮ್ಮ ಸರ್ಕಾರ ಇದ್ದಾಗ, ನಿಮ್ಮ ಪಕ್ಷದ ಮಿನಿಸ್ಟರ್ ಗಳು/ಗಾಂಧಿ ಕುಟುಂಬದವರು (ನೀವು ಅಂತ ಹೇಳ್ತಾಇಲ್ಲ, ನಿಮ್ಮ ಬಗ್ಗೆ ಗೌರವ ಇದೆ). ತಾಳ್ಮೆಯಿದ ನೋಡಿ, ಮೋದಿ ಏನ್ ಮಾಡಬಹುದು ಅಂತ. ಪ್ರಶ್ನೆ ಮಾಡೊದು ಬಿಟ್ಟು ಬೇಕಾದ್ರೆ ಅವರಿಗೆ ಮಾರ್ಗದರ್ಶನ ಮಾಡಿ.

ರಾಜ್

***

ಈ ಪ್ರಧಾನಿಯನ್ನು ಟೀ ಮಾರಲಿಕ್ಕೆ ಮತ್ತು ಈ ಹಣಕಾಸು ಮಂತ್ರಿಯನ್ನು ಪಕೋಡ ಮಾಡೋಕೆ ಕಳುಯಿಸಿರಿ. ಅವರಿಬ್ಬರೂ ಅದಕ್ಕೆ ಯೋಗ್ಯರಾಗಿದ್ದಾರೆ.

ಕರುನಾಡು ಪಾರ್ಟಿ

***

ಇನ್ನ ಬಿಜೆಪಿ ಮುಂದೆ ಲೋಕಸಭೆಗೆ ಬರೋದು ಕನಸೇ. ಜೇಟ್ಲಿಗೆ ಪಕೋಡಾ ಮಾರಲಿಕ್ಕೆ ಹೇಳಿ.

ವಿಜಯ್ ಕುಮಾರ್

***

ತುಂಬಾ ಕಳಪೆ ಬಜೆಟ್ ಮತ್ತು ನಿರಾಶಾದಾಯಕ 2018.

ಚೇತನ್

***

ಮೊದಲು ನಿನಗೆ (ಬೃಂದಾ ಕಾರಟ್) ನಾಚಿಕೆ ಆಗಬೇಕು. ನೀನು ಪ್ರೆಸ್ ಮೀಟ್ ಮಾಡಿದ ಮಣಿಪುರದ ಅಗರ್ತಾಲ ಅರವತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಹೊಂದಿಲ್ಲ. ಅದರ ಬಗ್ಗೆ ಮಾತಾಡೋ ಯೋಗ್ಯತೆ ಇಲ್ಲದ ನಿನಗೆ, ದೇಶದ ರೈತರ ಬಗ್ಗೆ ಮಾತಾಡೋ ಯೋಗ್ಯತೆ ಇದೆಯಾ? ಸುಮಾರು ಹದಿನೇಳು ವರ್ಷಗಳ ಹಿಂದೆ ನೀಡಿದ ಸ್ವಾಮಿನಾಥನ್ ವರದಿಯನ್ನು ಇಷ್ಟು ವರ್ಷ ಕಾಂಗ್ರೆಸ್ ಸರ್ಕಾರ ಮಾಡದಿದ್ದು ಈಗ ಮೋದಿ ಸರ್ಕಾರ ಅನುಷ್ಠಾನ ಮಾಡುವುದು ನಿನ್ನಂತಹ ಕವಳಗೀರಾಕಿಗಳಿಗೆ ಬೇಕಿಲ್ಲ ಅನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಲಯನ್ ಸಾಗರ್

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Readers' comments on Union Budget 2018 by Arun Jaitley presented on February 01, 2018. Public has given mixed reactions to the Budget, which is the last budget before Lok Sabha Elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X