ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಶಿಷ್ಠ ಕ್ರೆಡಿಟ್ ಸಹಕಾರಿ ಬ್ಯಾಂಕಿನ ಸಮರ್ಥವಿಲ್ಲದ ವರ್ತನೆ

By ದಿವ್ಯಶ್ರೀ.ವಿ, ಬೆಂಗಳೂರು
|
Google Oneindia Kannada News

ಪ್ರತಿ ದಿನ ಕಷ್ಟಪಟ್ಟು ಬೆವರು ಹರಿಸಿ ಮನೆ ಸಂಸಾರ ಮಕ್ಕಳಿಗೋಸ್ಕರ ಸಂಪಾದಿಸಿ ಕೈಯಲ್ಲಿದ್ದರೆ ಹಣ ಖರ್ಚು ಆಗುತ್ತದೆ ಎಂದು ಮುಂದಿನ ಕಷ್ಟ ಸುಖ ದಲ್ಲಿ ಉಪಯೋಗ ಆಗಲಿ ಎನ್ನುವ ಕಾರಣಕ್ಕೆ ಸಹಕಾರಿ ಬ್ಯಾಂಕುಗಳನ್ನು ನಂಬಿ ಅದರಲ್ಲಿ ಜೀವನಪೂರ್ತಿ ದುಡಿದ ಲಕ್ಷ ಲಕ್ಷ ಹಣವನ್ನು ಠೇವಣಿ ಮಾಡಿಟ್ಟ ಎಷ್ಟೋ ಜನರು ಇಂದು ಬೀದಿ ಬದಿ ನಿಲ್ಲುವ ಹಾಗಾಗಿದೆ.

ಮಧ್ಯಮ ವರ್ಗದ ಜನರು, ಸರ್ಕಾರಿ ಹುದ್ದೆಯಿಂದ ನಿವೃತ್ತಿ ಪಡೆದ ಹಿರಿಯ ನಾಗರೀಕರು, ಮತ್ತು ದಿನ ಕೂಲಿ ಮಾಡೋ ಜನರು ತಮಗಾಗಿ ತಮ್ಮ ಸಂಸಾರಕ್ಕಾಗಿ ಹೂಡಿಟ್ಟ ಹಣವನ್ನು ಇಂದು ಬ್ಯಾಂಕ್ ಅಧಿಕಾರಿಗಳು ತಮ್ಮ ದುರಾಸೆಗೆ ಸ್ವ ಉಪಯೋಗಕ್ಕೆ ಬಳಸಿಕೊಂಡು ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ.

ವಶಿಷ್ಠ ಕ್ರೆಡಿಟ್ ಕೋ ಆಪರೇಟೀವ್ ಬ್ಯಾಂಕ್‌ನಿಂದ 430 ಕೋಟಿ ರೂ. ವಂಚನೆ! ವಶಿಷ್ಠ ಕ್ರೆಡಿಟ್ ಕೋ ಆಪರೇಟೀವ್ ಬ್ಯಾಂಕ್‌ನಿಂದ 430 ಕೋಟಿ ರೂ. ವಂಚನೆ!

ಬೆಂಗಳೂರಿನ ಹನುಮಂತನಗರದಲ್ಲಿರುವ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಶಿಷ್ಠ ಕ್ರೆಡಿಟ್ ಸಹಕಾರಿ ಪತ್ತಿನ ಸೌಹಾರ್ದ ಸಂಘದ ನಿರ್ದೇಶಕರಾದ ವೆಂಕಟ ನಾರಾಯಣ ಮತ್ತು ಅವರ ಮಗ ಕೃಷ್ಣಪ್ರಸಾದ್ ಸುಮಾರು 450 ಕೋಟಿ ಹಣವನ್ನು ಜನರಿಗೆ ನೀಡದೆ ವಂಚಿಸಿದ್ದಾರೆ. ಕಳೆದ ಡಿಸೆಂಬರ್‌ನಿಂದ ಮೆಚ್ಯೂರಿಟಿ ಮತ್ತು ಬಡ್ಡಿ ಹಣವನ್ನು ನೀಡದೆ ಕಳ್ಳಾಟವಾಡುತ್ತಿದದ್ದಾರೆ. ಇವರು ಕಾರಣ ಕೇಳಿದರೆ ಕೊರೊನಾ ಸಮಯವಾದ್ದರಿಂದ ಸಾಲ ಪಡೆದವರು ಹಣ ಮರುಪಾವತಿ ಮಾಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದರು.ಇದರಿಂದ ಆತಂಕಕ್ಕೊಳಗಾಗಿದ್ದ ಜನರು ಹನುಮಂತನಗರದ ಆರಕ್ಷಕ ಠಾಣೆಯಲ್ಲಿ FIR ದಾಖಲಿಸಿದರು.

Reader Reaction on Sri Vashishta Credit Souharda Sahakari Niyamita Scam

ದೂರು ದಾಖಲಿಸಿದ ನಂತರ ತಲೆ ಮರೆಸಿಕೊಂಡಿರುವ ವಸಿಷ್ಠ ಕ್ರೆಡಿಟ್ ಸಂಸ್ಥೆಯ ವೆಂಕಟನಾರಾಯಣ ಮತ್ತು ಕೃಷ್ಣಪ್ರಸಾದ್ ಅವರಿಗೋಸ್ಕರ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯು ಇದೇ ರೀತಿ ಶ್ರೀ ಗುರುರಾಘವೇಂದ್ರ ಸಹಕಾರಿ ಪತ್ತಿನ ಸೌಹಾರ್ದ ಸಂಘ ಬ್ಯಾಂಕ್ ನ್ನು ಕೂಡ NPA (non performing assets)ಆಧಾರದಿಂದ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿತ್ತು.
2700 ಕೋಟಿ ಹಣ ಠೇವಣಿ, ಷೇರು ಮಾಡಿದ್ದ ಗ್ರಾಹಕರು ಆತಂಕಕ್ಕೊಳಗಾಗಿದ್ದರು. ರಾಘವೇಂದ್ರ ಬ್ಯಾಂಕಿನ ನಿರ್ದೇಶಕರಾದ ಡಾ. ರಾಮಕೃಷ್ಣ ಮಯ್ಯ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಖಜಾಂಜಿಯಾಗಿದ್ದವರು ಇವರ ಮೇಲಿನ ನಂಬಿಕೆಗಾಗಿ ಸಾವಿರಾರು ಜನ ಹಣ ಹೂಡಿಕೆ ಮಾಡಿದ್ದರು.

ಆದರೆ ಕೋಟಿ ಕೋಟಿ ಕಮಿಷನ್ ಆಸೆಗಾಗಿ ಸೂಕ್ತ ದಾಖಲೆಗಳಿಲ್ಲದ ಸಾಲಗಾರರಿಗೆ ಸಾಲ ನೀಡಿ ಅದನ್ನು ಮರುಪಾವತಿ ಮಾಡಿಸಿಕೊಳ್ಳಲಾಗದೆ ಠೇವಣಿ, ಷೇರುದಾರರಿಗೆ ಮೋಸ ಮಾಡಿದರು. ಅಧಿಕ ಬಡ್ಡಿ ಆಸೆ ತೋರಿಸಿ ಕೋಟ್ಯಂತರ ಹಣವನ್ನು ಠೇವಣಿ ಮಾಡಿಸಿಕೊಂದಿದ್ದರು. ಅತೀ ಹೆಚ್ಚು ನಿವೃತ್ತಿ ಪಡೆದ 60 ವರ್ಷ ಮೇಲ್ಪಟ್ಟ ಗ್ರಾಹಕರು ತಮ್ಮ ಇಡೀ ಜೀವನಾಂಶ ಹಣವನ್ನು ಠೇವಣಿ ಮಾಡಿ ಕಂಗಾಲಾಗಿದ್ದರು.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ನಡುಕಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದವರಿಗೆ ನಡುಕ

ಹಾಗೂ ಗುರು ಸಾರ್ವಭೌಮ ಸಹಕಾರಿ ಬ್ಯಾಂಕ್ ಸಹ ಸಾವಿರಾರು ಕೋಟಿ ಹಣ ಹಗರಣಗೊಂಡಿದ್ದು ಈ ಪ್ರಕರಣದಲ್ಲಿಯು ಕೂಡ ಒಂದು ರೂಪಾಯಿಯು ಗ್ರಾಹಕರಿಗೆ ಮರುಪಾವತಿಸದೆ ಜನರಿಗೆ
ಮೋಸ ಮಾಡಿದೆ.

ವಶಿಷ್ಠ ಬ್ಯಾಂಕಿನ ನಾರಾಯಣರವರು ತಮ್ಮ ದುರಾಸೆಗಾಗಿ ಸಾರ್ವಜನಿಕರ ಹಣವನ್ನು ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್, ಚಲನಚಿತ್ರ ರಂಗ ಇನ್ನಿತರ ಕ್ಷೇತ್ರಗಳಲ್ಲಿ ತಮಗೆ ಲಾಭ ಮಾಡಿಸಿಕೊಳ್ಳುವುದಕ್ಕೆ ದುರುಪಯೋಗಪಡಿಸಿಕೊಂಡಿದ್ದಾರೆ.

ಪಕ್ಷಪಾತದಿಂದ ತಮಗೆ ಬೇಕಾದ ಕೆಲವು ಗ್ರಾಹಕರಿಗೆ ಸೂಕ್ತ ದಾಖಲೆಗಳಿಲ್ಲದೆ ಸಾಲ ಕೊಟ್ಟಿದ್ದಾರೆ ಮತ್ತು ಈ ಅಕ್ರಮಗಳ ಹಿಂದೆ ಅವರಿಗೆ ರಾಜಕಾರಣಿಗಳ ಬೆಂಬಲವಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

Recommended Video

China ದೇಶದ ಹೊಸ ಬೆಳವಣಿಗೆ ಬಹಳ ಆತಂಕಕಾರಿ | Oneindia Kannada

English summary
Reader Reaction on Sri Vashishta Credit Souharda Sahakari Niyamita, Hanumanathanagar, Bengaluru Bank Scam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X