ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀ ಯೋಗೇಶ್, ಚಾಮುಂಡಿ 'ಅಶ್ಲೀಲ ಸ್ತ್ರೀ' ಅಲ್ಲ

By ಮೌರ್ಯ, ಬೆಂಗಳೂರು
|
Google Oneindia Kannada News

ಡುಂಡಿ ಲೇಖಕ ಯೋಗೇಶ್ ಮಾಸ್ಟರ್ ಅವರು ಮುಂಬರುವ ಮಹಿಸೂರಿನ ಕಥೆಯುಳ್ಳ ಕಾದಂಬರಿ ಸಾಕಷ್ಟು ಚರ್ಚೆಗೊಳಲಾಗುತ್ತಿದೆ. ನಂಜುಂಡೇಶ್ವರ ಹಾಗೂ ಚಾಮುಂಡಿಗೆ ಸಂಬಂಧವಿತ್ತು ಎನ್ನುವುದಕ್ಕೆ ಜನಪದ ಸಾಕ್ಷ್ಯವಿದ್ದರೂ, ಬೆಟ್ಟದ ತಾಯಿ ಚಾಮುಂಡಿಯನ್ನು ಅಭಿಸಾರಿಕೆ, ಅಶ್ಲೀಲ ಸ್ತ್ರೀ ಎಂದು ಕರೆಯುವುದು ಯೋಗೇಶ್ ಅವರ ಅಪ್ರಬುದ್ಧತೆಗೆ ಸಾಕ್ಷಿ ಎಂದು ಓದುಗರು ಅಭಿಪ್ರಾಯಪಟ್ಟಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ ತಪ್ಪದೇ ನೋಡಿ-ಒನ್ ಇಂಡಿಯಾ ಕನ್ನಡ.

ಪುರಾಣಗಳು ಅಡಗುಲಜ್ಜಿ ಕತೆಗಳು ಇತಿಹಾಸದ ಸುಳಿವು ಕೊಡಬಲ್ಲ ವಿಷಯಗಳು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಆ ನಿಜ ಇತಿಹಾಸದ ಬದಲು ತಮ್ಮ ಸ್ವಾರ್ಥಕ್ಕಾಗಿ ಮೂಗಿನ ನೇರಕ್ಕೆ ವಿವೇಚಿಸುವ ಇಂತಹ ವ್ಯಕ್ತಿಗಳ ಅವಶ್ಯಕತೆ ನಮ್ಮ ಸಾಹಿತ್ಯ ಲೋಕಕ್ಕೆ ಇದೆಯೇ..? ಸಾಹಿತ್ಯಕ್ಕೆ ಕಪ್ಪು ಚುಕ್ಕೆ ಇವರು.

ಇವರ ಡುಂಡಿ ಹುಟ್ಟು ಹಾಕಿದ ಆದಾರವಿಲ್ಲದ ಹಿಂದೂ ಧರ್ಮದ ಅಶ್ಲೀಲ ಹೀಯಾಳಿಕೆ ವಿವಾದವನ್ನೇ ಇನ್ನು ಯಾರು ಮರೆತಿಲ್ಲ. ಆಗಲೇ ಮತ್ತೊಂದು ವಿವಾದ ಮಾಡುವ ಮೂಲಕ ಪ್ರಚಾರದಲ್ಲಿ ಉಳಿಯುವ ಬುದ್ದಿ. ['ಚಾಮುಂಡೇಶ್ವರಿ ಅಭಿಸಾರಿಕೆ': ಯೋಗೇಶ್ ಮಾಸ್ಟರ್]

ನಿಸರ್ಗದೊಂದಿಗೆ ಭಯ ಭಕ್ತಿ ಕುತೂಹಲಗಳೊಂದಿಗೆ ಬೆಳೆದು ಬಂದ ಮಾನವನ ನಾಗರಿಕತೆ ಅಂದು ತನಗರಿವಿಗೆ ಬಾರದ ಅನೇಕ ನೈಸರ್ಗಿಕ ವಿಕೋಪಗಳಿಗೆ ಕಾರಣ ದುಷ್ಟಶಕ್ತಿ ಎಂದು ಅದರ ವಿರುದ್ದ ನಿಂತು ತಮ್ಮನ್ನು ಕಾಪಾಡುವುದು ದೈವಶಕ್ತಿ ಎಂದು ಭಾವಿಸಿದರು. ತಮಗೆ ಎಲ್ಲವನ್ನು ನಿಡುವ ನಿಸರ್ಗವನ್ನು ಆ ದೈವತ್ವಕ್ಕೆ ಪ್ರತಿಬಿಂಬವಾಗಿಸಿದರು. ಅದಕ್ಕೆ ಅವರ ವಿಗ್ರಹಗಳಲ್ಲಿ ಇಂದಿಗೂ ನಿಸರ್ಗ ತನ್ನನ್ನು ಪ್ರತಿನಿಧಿಸಿಕೊಳ್ಳುತ್ತದೆ.

Public condemn Yogesh Master defaming deity Chamundeshwari

ತಮ್ಮ ನಡುವೆ ತಮಗಾಗಿ ಬದುಕಿದ, ಹೋರಾಡಿದ, ಮಡಿದ ವೀರ ಶೂರ ಮಹಾತ್ಮರನ್ನು ಸಹ ದೈವತ್ವಕ್ಕೆ ಏರಿಸಿದರು. ಅವರ ಕತೆಗಳನ್ನು ಹಾಡುಗಳನ್ನಾಗಿ ಮಾಡಿ ಹಾಡಿದರು. ಅಂದಿನ ಇತಿಹಾಸವನ್ನು ಅರಿಯಬೇಕಾದರೆ ಹಾಗು ಅಂದಿನ ಅವರ ನಾಯಕರ ಬಗ್ಗೆ ಅವರ ಬಗ್ಗೆ ಇರುವ ಜನಪದ ಸಾಹಿತ್ಯದಿಂದ ತಿಳಿಯಬೇಕಾದರೆ ಯಾವುದೇ ನಿರ್ಧಾರಕ್ಕೆ ಬರುವುದಕ್ಕೂ ಮೊದಲು ಅಂದಿನ ಜೀವನ ಪದ್ದತಿಯನ್ನು ಅರಿಯಬೇಕಾದದ್ದು ಅವಶ್ಯಕ.

ಚಾಮುಂಡಿಯ ಕತೆಯಲ್ಲಿ ಆಕೆ ನಂಜುಂಡೇಶ್ವರನ ಎರಡನೆ ಪತ್ನಿಯಾಗಿ ಇರುವಳೇ ಹೊರತು ನಿಮ್ಮ ಅಶ್ಲೀಲ ಸ್ತ್ರೀ ಆಗಿ ಅಲ್ಲ.ಅದೆಲ್ಲ ಸರಿ ಹಳೆ ಪುರಾಣಗಳನ್ನು ತಿರುಚಿ ಕೆದಕಿ ಇಂದಿನ ಸಮಾಜದಲ್ಲಿ ಅದ್ಯಾಕೆ ಆರ್ಯ ಹಾಗು ದ್ರಾವಿಡ ಎಂಬ ವಿಭಜನೆಯನ್ನು ಬಿತ್ತುತ್ತಿದ್ದಿರಿ? ಹಿಂದೆ ಎಂದೋ ಆರ್ಯ ದ್ರಾವಿಡರು ಇದ್ದರಂತೆ, ಆದರೆ ಇಂದು ಇರುವವರು ನಾವು ಭಾರತೀಯರು ಮಾತ್ರ. ಹೌದು ದಲಿತರಿಗೆ ಮರ್ಯಾದೆಯುತ ಸ್ಥಾನಮಾನ ನೀಡಬೇಕಾದದ್ದು ಈ ಸಮಾಜದ ಕರ್ತವ್ಯ. ಆದರೆ ನೀವು ಒಂದು ಕೆಟ್ಟ ಪದ್ದತಿಯಾದ ಅಸಮಾನತೆಯ ಹೆಸರು ಹೇಳಿಕೊಂಡು ಅವರನ್ನು ಸಂಪೂರ್ಣ ದಾರಿ ತಪ್ಪಿಸುತ್ತಿದ್ದಿರಿ.

ಮೊದಲು ನಮ್ಮ ಜನ ಜಾತಿ ಎಂಬ ವಿಷವನ್ನು ಸಂಪೂರ್ಣವಾಗಿ ಮರೆತರೆ ನಮ್ಮ ಸಂಸ್ಕೃತಿ ತನ್ನ ನಿಜವಾದ ಶ್ರೇಷ್ಟತೆಯನ್ನು ಮರಳಿ ಪಡೆಯುತ್ತದೆ. ದಲಿತರೆನು ಮನುಷ್ಯರಲ್ಲವೇ? ನಮ್ಮವರನ್ನೇ ನಾವು ಅದ್ಯಾಕೆ ಕೀಳು ಎನ್ನುತ್ತೇವೆ ಒಮ್ಮೆ ಯೋಚಿಸಿ. ಇಂತಹ ನಮ್ಮ ತಪ್ಪುಗಳೇ ಈ ಬುದ್ದಿಜೀವಿಗಳ ಬಂಡವಾಳ. ಜಾತಿ ಇರುವ ತನಕ ಇಂತಹ ಬುದ್ದಿಜೀವಿಗಳು ನಮ್ಮ ಸಂಸ್ಕೃತಿಯನ್ನು ಹೀಯಾಳಿಸುತ್ತಲೇ ಇರುತ್ತಾರೆ.

ಸ್ವಾಮೀ ದಯಾನಂದ ಸರಸ್ವತಿ, ವಿವೇಕಾನಂದ ರಂತಹ ಮಹಾತ್ಮರು ಇದೆ ಕಾರಣದಿಂದ ಆರ್ಯ ಸಮಾಜ, ರಾಮಕೃಷ್ಣ ಪಂಥ ಎಂಬಿತ್ಯಾದಿ ಸಂಘಟನೆಗಳನ್ನು ತೆರೆದರು. ಆದರೆ ಅವ್ಯಾವು ತಮ್ಮ ಗುರಿ ಮುಟ್ಟುತ್ತಿಲ್ಲ. ಯಾಕೆಂದರೆ ನಮ್ಮ ಜನ ಇನ್ನು ತಮ್ಮ ಜಾತಿ ಭ್ರಮೆಯಲ್ಲೇ ಇದ್ದಾರೆ.

English summary
Yogesh Master irks Hindus once again with his controversial novel. 'Dhundi' author Yogesh in his upcoming novel has allegedly termed deity Chamundeshwari as whore and said she had illicit relationship with Nanjangud god Nanjundeshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X