ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ಚಿಕಿತ್ಸೆ ಅವ್ಯವಸ್ಥೆ, ನರಕವಾಗುತ್ತಿವೆ ಆಸ್ಪತ್ರೆಗಳು

By ದಿವ್ಯಶ್ರೀ, ಬೆಂಗಳೂರು
|
Google Oneindia Kannada News

ಕೊರೋನಾ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳು ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ಆಹಾರವನ್ನು ಕೊಡುತ್ತಿಲ್ಲ ಇದರಿಂದಾಗಿ ಶಂಕಿತರು ಹಾಗೂ ಸೋಂಕಿತರು ಚಿಕಿತ್ಸೆಯಿಲ್ಲದೆ ನರಕವನ್ನು ಅನುಭವಿಸುತ್ತಿದ್ದಾರೆ ಎಂಬ ಸುದ್ದಿ ಓದಿ ಆತಂಕ ಉಂಟಾಗುತ್ತಿದೆ.

Recommended Video

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಬಾರಿ ಮಳೆ | Weather Forecast | KSNDMC | Oneindia Kannada

ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸರಿಯಾದ ವ್ಯವಸ್ಥೆಯನ್ನು ಮಾಡಬೇಕು ಮತ್ತು ಇದರ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರ ತಿಳಿದುಕೊಳ್ಳಬೇಕು. ಜನರ ಸಹಾಯಕ್ಕೆ ಸರ್ಕಾರ ಸ್ಪಂದಿಸಬೇಕು. ದಿನೇದಿನೇ ಸೋಂಕಿನ ಹರಡುವಿಕೆ ಆಗುತ್ತಿದೆ, ನಿಯಂತ್ರಣ ಬರುತ್ತಿಲ್ಲ, ಇನ್ನೂ ಕೆಟ್ಟ ರೀತಿಯಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನ ಇದಕ್ಕೆ ಒಂದು ವ್ಯವಸ್ಥೆಯನ್ನು ಮಾಡಬೇಕು, ಹೆಮ್ಮಾರಿ ಕೊರೊನಾ ಭಯದಿಂದ ರಾಜ್ಯದಲ್ಲಿ ಅನೇಕ ಖಾಸಗಿ ಆಸ್ಪತ್ರೆಗಳು ಮುಚ್ಚಿವೆ,

ಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿಬೆಂಗಳೂರಿನಲ್ಲಿ ಸರ್ಕಾರ ಗುರುತಿಸಿರುವ 66 ಫೀವರ್ ಕ್ಲಿನಿಕ್ ಪಟ್ಟಿ

ಸಾಧಾರಣ ಜ್ವರ ಕೆಮ್ಮು ನೆಗಡಿ ಇರುವವರನ್ನೂ ನೋಡಲು ಯಾವ ವೈದ್ಯರೂ ಸಿಗ್ತಿಲ್ಲ ಮತ್ತು ಮುಂದಾಗುತ್ತಿಲ್ಲ, ಬಿಪಿ ಶುಗರ್ ರೋಗಿಗಳ ಸಂಕಟ ಕೇಳುವವರು ಯಾರು ಇಲ್ಲ, ಕೋವಿಡ್ 19 ಆಸ್ಪತ್ರೆ ಗಳ ಅವ್ಯವಸ್ಥೆ ಹೆಚ್ಚಾಗಿದೆ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಗಳ ಕೊರತೆ, ಊಟದ ಕೊರತೆ ಮತ್ತು ಸರಿಯಾದ ಸಮಯದಲ್ಲಿ ಔಷಧಿಯನ್ನು ಯಾರು ವಿತರಿಸುತ್ತಿಲ್ಲ, ಇನ್ನು ಕೆಲ ಆಸ್ಪತ್ರೆಗಳಲ್ಲಿ ಆಹಾರವಿಲ್ಲದೆ ಜನರು ಒದ್ದಾಡುತ್ತಿದ್ದಾರೆ, ಸೋಂಕಿತರನ್ನು ಮತ್ತು ಶಂಕಿತರನ್ನು ಸರಿಯಾಗಿಯೂ ನಡೆಸಿಕೊಳ್ಳುತ್ತಿಲ್ಲ ಎಲ್ಲರನ್ನು ಒಟ್ಟಿಗೆ ಇರಿಸಿದ್ದಾರೆ ಎಂಬ ವರದಿಗಳು ಬರುತ್ತಿವೆ.

Public reaction on lack of facilities in Covid 19 Hospitals

ಆಸ್ಪತ್ರೆಯ ಅವಾಂತರ ನಿರ್ಲಕ್ಷ್ಯವನ್ನು ಸ್ವತಃ ರೋಗಿಗಳು ಹೇಳಿ ಕೊಂಡಿದ್ದಾರೆ, ಕೋವಿಡ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಅದೆಷ್ಟೋ ಜನರಿಗೆ ತಮ್ಮ ರಿಪೋರ್ಟ್ ಏನೂ ಎನ್ನುವುದನ್ನೂ ಸಹ ಆಸ್ಪತ್ರೆಯವರು ಇನ್ನೂ ಹೇಳಿಲ್ಲ, ತಿಂಗಳಿಂದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಜನರು ತಮಗೆ ಯಾವ ಲಕ್ಷಣಗಳೂ ಇಲ್ಲ, ಆರೋಗ್ಯವಾಗಿದ್ದೇನೆ, ನಮ್ಮನು ಬಿಟ್ಟುಬಿಡಿ ಎಂದು ಕೇಳುತ್ತಿದ್ದರು ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಕೋವಿಡ್ 19 ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆ ಬಿಟ್ಟು ಕ್ಯಾನ್ಸರ್, ಬಿಪಿ, ಶುಗರ್ ರೋಗಿಗಳು ಸಹ ಇದ್ದಾರೆ ಅವರನ್ನು ಕೊರೋನ ರೋಗಿಗಳ ಜೊತೆಗೆ ಇರಿಸಿರುವುದು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ, ಇನ್ನೂ ಖಾಸಗಿ ಆಸ್ಪತ್ರೆ ಗಳಲ್ಲಿ ಕೊರೋನ ಚಿಕಿತ್ಸೆಯು ಶುರುವಾಗಿರುವ ಹಿನ್ನಲೆಯಲ್ಲಿ ಸರ್ಕಾರ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಎಲ್ಲವನ್ನೂ ಒಂದು ವ್ಯವಸ್ಥೆಯನ್ನಾಗಿ ಮಾಡಬೇಕು, ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಮತ್ತು ಆಹಾರ ವಿತರಣೆಯನ್ನು ಸರಿಯಾದ ಸಮಯದಲ್ಲಿ ನೀಡುವಂತೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಎಚ್ಚರ ವಹಿಸಬೇಕು, ಇನ್ನು ಖಾಸಗಿ ಆಸ್ಪತ್ರೆಗಳಿಗೆ ನಿಗದಿತವಾದ ದರದಲ್ಲಿ ಜನರಿಗೆ ಚಿಕತ್ಸೆಯನ್ನು ಕೊಡುವಂತೆ ಆದೇಶಿಸಬೇಕು, ಜನರು ಕೂಡ ಈ ತುರ್ತು ಸಂದರ್ಭದಲ್ಲಿ ತಮ್ಮ ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳಬೇಕು, ಮಾಸ್ಕನ್ನು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು.

English summary
Public fear on report of lack of facilities in Covid 19 Hospitals and no treatment for general check ups in many health centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X