• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗತಕಾಲದ ಸ್ವಾದ ಕಳೆದುಕೊಂಡಿರುವ ಮಾವಳ್ಳಿ ಟಿಫಿನ್ ರೂಮ್ಸ್

By ಯಶೋಧರ ಪಟಕೂಟ, ಬೆಂಗಳೂರು
|
Google Oneindia Kannada News

ತಿಂಡಿಪೋತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕೂಲ್ ಜಾಯಿಂಟ್ ಗಳು, ಗಲ್ಲಿಗೆ ನಾಲ್ಕರಂತೆ ಸಿಗುವ ದರ್ಶಿನಿಗಳು, ತಲೆಯೆತ್ತುತ್ತಿರುವ ಫುಡ್ ಸ್ಟ್ರೀಟ್ ಗಳು, ಹೊಸರೂಪ ಪಡೆದುಕೊಳ್ಳುತ್ತಿರುವ ಬ್ರಾಹ್ಮಿನ್ಸ್ ಕಾಫಿ ಬಾರಿನಂತಹ ಹಳೆತಲೆಮಾರಿನ ಹೋಟೆಲುಗಳ ನಡುವೆ ಲಾಲ್ ಬಾಗ್ ರಸ್ತೆಯಲ್ಲಿ ಮಾವಳ್ಳಿ ಟಿಫಿನ್ ರೂಮ್ಸ್ ಪಳೆಯುಳಿಕೆಯಂತೆ ನಿಂತಿದೆ.

ಎಂಟಿಆರ್ ಎಂಬ ಬೆಂಗಳೂರಿನ ತಿಂಡಿಪೋತರ ಸ್ವರ್ಗಎಂಟಿಆರ್ ಎಂಬ ಬೆಂಗಳೂರಿನ ತಿಂಡಿಪೋತರ ಸ್ವರ್ಗ

ಈಗ 21ನೇ ಶತಮಾನದ ಎರಡೂಮುಕ್ಕಾಲು ದಶಕ ಕಳೆದಿರುವ ಈ ಸಮಯದಲ್ಲಿ 'ಒಂದಾನೊಂದು ಕಾಲದಲ್ಲಿ...' ಅಂತಲೇ ಮಾವಳ್ಳಿ ಟಿಫಿನ್ ರೂಮ್ಸ್ ಬಗ್ಗೆ ಮಾತನಾಡಬೇಕಿದೆ. ಹೌದು ಒಂದಾನೊಂದು ಕಾಲದಲ್ಲಿ, ಲಾಲ್ ಬಾಗಿನಲ್ಲಿ ಟೀಶರ್ಟ್ ಶಾರ್ಟಿನಲ್ಲಿ ವಾಕಿಂಗ್ ಮುಗಿಸಿಕೊಂಡು ಬರುತ್ತಿದ್ದ ಹಿರಿತಲೆಗಳ ಮೂಗಿನ ಹೊಳ್ಳೆಗಳು, ಇಲ್ಲಿನ ಮಸಾಲೆದೋಸೆಯ ಘಮಲಿಗೆ ಅರಳಿಕೊಳ್ಳುತ್ತಿದ್ದವು.

ಈಗಲೂ ಆ ಹಿರಿತಲೆಗಳನ್ನು ಕೂಡಿಸಿಕೊಂಡು ಕೇಳಿದರೆ, ತಮ್ಮ ಉಬ್ಬಿದ ಹೊಟ್ಟೆಯ ಮೇಲೆ ಕೈಯಾಡಿಸುತ್ತ, ಮಾವಳ್ಳಿ ಟಿಫಿನ್ ರೂಮ್ಸ್ ಬಗ್ಗೆ, ಜೊಲ್ಲು ಸುರಿಸುವಂತೆ ರಸವತ್ತಾದ ಕಥೆಗಳನ್ನು ಹೇಳಲು ಶುರು ಮಾಡುತ್ತಾರೆ. ಮೊದಲಿಗೆ ಒಂದು ಕೇಸರಿ ಭಾತ್, ನಂತರ ಸಿಂಗಲ್ ವಡೆ, ನಂತರ ಮಸಾಲೆಯ ದೋಸೆ ಹೊಟ್ಟೆಗಿಳಿದ ನಂತರ, ಕೈ ವಾಸನೆಯನ್ನು ನೋಡುತ್ತ ಬೆಳ್ಳಿ ಲೇಪಿತ ಲೋಟದಲ್ಲಿ ಹಾಫ್ ಕಾಫಿ ಹೀರುತ್ತಿದ್ದರೆ.... ಸ್ವರ್ಗಸುಖ.

ಅದಕ್ಕೆಂತಲೇ ಅದನ್ನು ತಿಂಡಿಪೋತರ ಸ್ವರ್ಗ ಅಂತಲೇ ಕರೆಯುತ್ತಿದ್ದರು. ಈಗಲೂ ಮಾವಳ್ಳಿ ಟಿಫಿನ್ ರೂಮ್ಸ್ ಅದೇ ಸ್ವರ್ಗ ಸುಖವನ್ನು ತಿಂಡಿಪೋತರಿಗೆ ತೋರಿಸುತ್ತಿದೆಯಾ? ಈಗಲೂ ಮಸಾಲೆ ದೋಸೆ ವಾಸನೆ ಅಘ್ರಾಣಿಸಿದರೆ ಮೂಗಿನ ಹೊಳ್ಳೆಗಳು ಅರಳುತ್ತಿವೆಯಾ? ಈಗಲೇ ಕಾಫಿ ಸ್ವಾದಕ್ಕೆ ಜನರು ಮಾರುಹೋಗುತ್ತಿದ್ದಾರಾ? ಡೌಟು ಸಾರ್ ಡೌಟು!

ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್

ಕೆಲ ದಿನಗಳ ಹಿಂದೆ ಇದೇ ಹೋಟೆಲಿನಲ್ಲಿ ಸಂಜೆ ಹೊತ್ತಿನಲ್ಲಿ ಪೂರಿ ಮೆಲ್ಲೋಣವೆಂದು ಆರ್ಡರ್ ಮಾಡಿದೆ. ಐ ಆಮ್ ಸಾರಿ ಸರ್. ಮಾವಳ್ಳಿ ಟಿಫಿನ್ ರೂಮ್ಸ್ ಬಗ್ಗೆ ಅಪಾರವಾದ ಗೌರವ ಅಭಿಮಾನ ಇಟ್ಟುಕೊಂಡವರಿಗೆ, ಅಲ್ಲಿಯ ರುಚಿಯೇ ಸೂಪರ್ ಎಂದು ಮೊಂಡು ವಾದ ಮಾಡುವವರಿಗೆ ಬೇಜಾರಾಗಬಹುದು. ಅಷ್ಟೊಂದು ಕಳಪೆ ಮಟ್ಟದ ಪೂರಿಯನ್ನು ನಾನು ಜನುಮದಲ್ಲೇ ತಿಂದಿರಲಿಲ್ಲ.

Once upon a time in Mavalli Tiffin Rooms

ಇದು ಒಂದು ಬಾರಿಯಲ್ಲ. ಮತ್ತೊಮ್ಮೆ 250 ರುಪಾಯಿ ತೆತ್ತು ಊಟ ತೆಗೆದುಕೊಂಡಾಗಲೂ, ಈ ಹೋಟೆಲಿನ ಊಟಕ್ಕೂ 60 ರುಪಾಯಿ ಪಡೆದು ಇತರ ಹೋಟೆಲುಗಳು ನೀಡುವ ಊಟಕ್ಕೂ ಏನು ವ್ಯತ್ಯಾಸ? ಎನ್ನುವಂತಾಗಿದೆ. ನೀವಲ್ಲಿ ಚಂದ್ರಹಾರ ತಿನ್ಬೇಕು ಸಾರ್, ಸೂಪರ್ ಆಗಿರತ್ತೆ ಅಂತ ಸ್ನೇಹಿತ ಹೇಳಿದಾಗ, ರುಚಿ ನೋಡೇಬಿಡೋಣ ಅಂತ ಹೋದಾಗ ಮತ್ತೊಮ್ಮೆ ಮೋಸ ಹೋದ ಅನುಭವವಾಗಿತ್ತು.

ಸಿಂಗಪುರದಲ್ಲಿ ಎಂಟಿಆರ್ ಮಾಲೀಕರ ಸಂದರ್ಶನಸಿಂಗಪುರದಲ್ಲಿ ಎಂಟಿಆರ್ ಮಾಲೀಕರ ಸಂದರ್ಶನ

ಮಾವಳ್ಳಿ ಟಿಫಿನ್ ರೂಮ್ಸ್ ತಿಂಡಿ ಪೋತರ ಸ್ವರ್ಗ ಎಂದು ಬರೆಯಲಾದ ಲೇಖನ ಓದಿ ತಡೆಯಲಾರದೆ ಈ ಪತ್ರವನ್ನು ಬರೆಯಬೇಕಾಯಿತು. ಅದೇ ಹಳೆ ಕಟ್ಟಡ, ಅವೇ ಕುರ್ಚಿ, ಮೇಜು... ತನ್ನ ಒರಿಜಿನಲ್ ಸ್ವರೂಪವನ್ನು ಎಂಟಿಆರ್ ಇನ್ನೂ ಉಳಿಸಿಕೊಂಡಿದೆಯಾದರೂ, ತನ್ನ ಅದೇ ಹಳೇ ಸ್ವಾದವನ್ನು ಈಗ ಖಂಡಿತ ಉಳಿಸಿಕೊಂಡಿಲ್ಲ ಎಂದು ಹೇಳುವುದು ಅನಿವಾರ್ಯ.

ಬೆಂಗಳೂರಿನ ಅನೇಕ ಹಳೆ ಹೋಟೆಲುಗಳು ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿವೆ, ಕಾಣಲು ಹಿಂದೇಟು ಹಾಕಿರುವವು ಬಾಗಿಲು ಮುಚ್ಚಿವೆ. ರುಚಿ ಅಭಿರುಚಿಗಳಿಗೆ ತಕ್ಕಂತೆ ಅಪ್‌ಗ್ರೇಡ್ ಆಗದಿದ್ದರೆ 1924ರಲ್ಲಿ ಬ್ರಾಹ್ಮಿನ್ಸ್ ಕಾಫಿ ಹೌಸ್ ಎಂಬ ಹೆಸರಿನಿಂದ ಆರಂಭವಾಗಿದ್ದ ಐತಿಹಾಸಿಕ ಮಹತ್ವವುಳ್ಳ, ಬೆಂಗಳೂರಿನ ಹೆಮ್ಮೆಯ ಮಾವಳ್ಳಿ ಟಿಫಿರ್ ರೂಮ್ಸ್ ಗೆ ಕೂಡ ಹೆಚ್ಚು ಉಳಿಗಾಲವಿಲ್ಲ.

English summary
Letter to the editor : Once upon a time in Bengaluru there was Mavalli Tiffin Rooms.... If the iconic hotel does not change according to the taste and trends, we may have to start the article like above. MTR has lost it's original taste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X