• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಿನಲ್ಲಿ ಪರಭಾಷಾ ಹಾವಳಿ, ರೋಬೋಗೆ 900 ಸ್ಕ್ರೀನ್ ಬಳುವಳಿ

By ಅಮರನಾಥ್ ಶಿವಶಂಕರ್
|

ಬೆಂಗಳೂರಿನಲ್ಲಿ ಎಗ್ಗಿಲ್ಲದೆ ಆಗುತ್ತಿರುವ ಪರಭಾಷೆ ಚಿತ್ರಗಳ ಬಿಡುಗಡೆ. ರಾಜಧಾನಿಯಲ್ಲೇ ಕನ್ನಡದ ಸಾರ್ವಭೌಮತೆಗೆ ಧಕ್ಕೆ ಅನ್ನುವ ವಿಷಯವಾಗಿ ನನ್ನ ಅಭಿಪ್ರಾಯವನ್ನು ಪ್ರಕಟಿಸಬೇಕಾಗಿ ಮನವಿ

ಕನ್ನಡಿಗರು ಸಹೃದಯಿಗಳು, ನೀರು ಕೇಳಿದರೆ ಮಜ್ಜಿಗೆ ಅಥವಾ ಪಾನಕ ಕೊಡುವ ಮಂದಿ ಅನ್ನುವ ಮಾತ್ತೆಲ್ಲವನ್ನು ಕೇಳಿಕೊಂಡೇ ಬಂದಿದ್ದೇವೆ. ಈ ಮಾತುಗಳನ್ನು ಕೇಳಿ ಹಿಗ್ಗಿದ್ದೇವೆ ಕೂಡ. ನಾಲ್ಕು ಜನರಿಗೆ ಒಳಿತನ್ನು ಮಾಡುವ ಕನ್ನಡಿಗರ ಗುಣ ನಿಜಕ್ಕೂ ಮೆಚ್ಚುವಂತದ್ದೇ.

ಆದರೆ, ಕರ್ನಾಟಕದ ಮಟ್ಟಿಗೆ ಮನರಂಜನೆ ಕ್ಷೇತ್ರದಲ್ಲಿ ಈ ಒಳ್ಳೆತನ ಅತಿಯಾಗಿ ನಮ್ಮ ತಲೆಯ ಮೇಲೆ ನಾವೇ ಚಪ್ಪಡಿ ಕಲ್ಲು ಎಳೆದುಕೊಳ್ಳುವ ದುಸ್ಥಿತಿಗೆ ತಲುಪಿದ್ದೇವೆ. ಇಂದು ನಮ್ಮನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿವೆ.

ಯುಗಾದಿ, ಸಂಕ್ರಾತಿ, ದೀಪಾವಳಿ ಮುಂತಾದ ಹಬ್ಬಗಳ ಸಮಯದಲ್ಲಿ ಕನ್ನಡದ ಯಾವುದೇ ದೊಡ್ಡ ನಂತರ ಚಿತ್ರಗಳು ಬಿಡುಗಡೆಯಾಗದ ಕಾರಣ ಅದೇ ಸಮಯದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳು ಪ್ರವಾಹದಂತೆ ನುಗ್ಗುತ್ತದೆ.

ಇಂತಿ,

ಅಮರನಾಥ್ ಶಿವಶಂಕರ್

ಪರಭಾಷೆ ಚಿತ್ರಗಳಿಗೆ ರತ್ನಗಂಬಳಿ ಏಕೆ?

ಪರಭಾಷೆ ಚಿತ್ರಗಳಿಗೆ ರತ್ನಗಂಬಳಿ ಏಕೆ?

ಬೆಂಗಳೂರಿನಲ್ಲಿ ಎಲ್ಲಿ ನೋಡಿದರು ಪರಭಾಷೆಯ ಚಿತ್ರಗಳು ಓಡುವ ಪರಿಯನ್ನು ನೋಡಿದರೆ, ಇದು ನಿಜಕ್ಕೂ ಕನ್ನಡಿಗರ ಊರೇ ಅನ್ನುವ ಪ್ರಶ್ನೆ ಬರದೇ ಇರದು. ನಮ್ಮ ಕನ್ನಡದ ನಟರು ಪರಭಾಷೆಯ ನಾಯಕ ನಟರುಗಳ ಗೆಳೆತನ ಕಾಪಾಡಿಕೊಳ್ಳುವುದಕ್ಕೋಸ್ಕರ ಕನ್ನಡ ನಾಡಿನಲ್ಲಿ ಪರಭಾಷೆ ಚಿತ್ರಗಳಿಗೆ ಪರೋಕ್ಷವಾಗಿ ರತ್ನಗಂಬಳಿ ಹಾಸಿ ಕೊಡುತ್ತಿದ್ದಾರೆಯೇ ಅಂತ ಅನುಮಾನ ಬರದೇ ಇರದು.

ಡಬ್ಬಿಂಗ್ ವಿರೋಧಿ ನಿಲುವು ಏಕೆ?

ಡಬ್ಬಿಂಗ್ ವಿರೋಧಿ ನಿಲುವು ಏಕೆ?

ಇದೀಗ ರಜನಿಕಾಂತ್ ಅವರ 2.0 ಚಿತ್ರಕ್ಕೆ ಬೆಂಗಳೂರಿನಲ್ಲಿ ಸುಮಾರು 900 ಶೋ ಗಳು ಮೊದಲ ದಿನಕ್ಕೆ ಸಿಕ್ಕಿದೆ ಅನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿವೆ. ಇದರಲ್ಲಿ ತಮಿಳು ಅಷ್ಟೇ ಅಲ್ಲದೆ ಹಿಂದಿ ಮತ್ತು ತೆಲುಗು ಡಬ್ ಆದ ಚಿತ್ರಗಳು ಸಹ ಇದೆ ಅಂತ ಸುದ್ದಿ ಇದೆ. ಕನ್ನಡ ಚಿತ್ರರಂಗದ ಮಂದಿ ಕನ್ನಡದಲ್ಲಿ ಡಬ್ಬಿಂಗ್ ಬರದಂತೆ ಎಲ್ಲ ಅಸ್ತ್ರಗಳನ್ನು ಬಳಸುತ್ತಲೇ ಬಂದಿದ್ದಾರೆ.

ಪರಭಾಷಾ ಹೇರಿಕೆಯನ್ನು ತಡೆಯಬೇಕು?

ಪರಭಾಷಾ ಹೇರಿಕೆಯನ್ನು ತಡೆಯಬೇಕು?

ಒಂದು ಕಡೆ ಪರಭಾಷೆ ಚಿತ್ರಗಳ ಸಂಖ್ಯೆಯನ್ನು ಕಾಯ್ದುಕೊಳ್ಳುವ ಪ್ರಕ್ರಿಯೆಗೆ ನ್ಯಾಯಾಲಯಗಳು ತಡೆಯೋದಿದ್ದರೆ, ಕಡೇ ಪಕ್ಷ ಆ ಚಿತ್ರಗಳನ್ನು ಕನ್ನಡೀಕರಿಸಿ ಜನ ಸಾಮಾನ್ಯರನ್ನು ಕನ್ನಡದಲ್ಲಿಯೇ ಹಿಡಿದಿಟ್ಟುಕೊಳ್ಳುವ ಕೆಲಸವಾದರೂ ಆಗಬೇಕಿದೆ.

ಕನ್ನಡ ಚಿತ್ರರಂಗ, ಕನ್ನಡದ ಸಾಹಿತಿಗಳು, ಕನ್ನಡ ಪರ ಹೋರಾಟಗಾರರೆಲ್ಲರೂ ಒಕ್ಕೊರಲಿನಿಂದ ಈ ಪರಭಾಷಾ ಹೇರಿಕೆಯನ್ನು ತಡೆಯದ್ದಿದರೆ, ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವೇ ಸಾರ್ವಭೌಮ ಭಾಷೆ ಅನ್ನುವ ಮಾತು ಹಾಸ್ಯಾಸ್ಪದವಾಗುತ್ತದೆ.

ಹತ್ತು ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ

ಹತ್ತು ವರ್ಷ ಕಳೆದರೂ ಪರಿಸ್ಥಿತಿ ಬದಲಾಗಿಲ್ಲ

ರಾಜ್ಯದ ಕನ್ನಡ ಚಿತ್ರಮಂದಿರಗಳಿಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ಮನಸ್ಸಿಗೆ ಬಂದಂತೆ, ಅಗತ್ಯಕ್ಕಿಂತ ಹೆಚ್ಚು ಚಲನಚಿತ್ರಗಳ ಮಂದಿರಗಳಲ್ಲಿ ಪರಭಾಷೆ ಚಿತ್ರಗಳನ್ನು ಪ್ರದರ್ಶನ ಕಾಣುತ್ತಿದೆ. ಪರಿಸ್ಥಿತಿ ಬಗ್ಗೆ ಅರಿವಿದ್ದರೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೈಕಟ್ಟಿ ಕೂತಿದೆ ಎಂದು ಕನ್ನಡ ನಿರ್ಮಾಪಕ ಸಂಘದ ಅಳಲು.

ರಾಜ್ಯದ ಕನ್ನಡ ಚಿತ್ರಮಂದಿರಗಳಿಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ಮನಸ್ಸಿಗೆ ಬಂದಂತೆ, ಅಗತ್ಯಕ್ಕಿಂತ ಹೆಚ್ಚು ಚಲನಚಿತ್ರಗಳ ಮಂದಿರಗಳಲ್ಲಿ ಪರಭಾಷೆ ಚಿತ್ರಗಳನ್ನು ಪ್ರದರ್ಶನ ಕಾಣುತ್ತಿದೆ. ಪರಿಸ್ಥಿತಿ ಬಗ್ಗೆ ಅರಿವಿದ್ದರೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೈಕಟ್ಟಿ ಕೂತಿದೆ ಎಂದು ಕನ್ನಡ ನಿರ್ಮಾಪಕ ಸಂಘವು ಕಳೆದ 10 ವರ್ಷಗಳಿಂದ ದನಿಯೆತ್ತುತ್ತಾ ಬಂದಿದೆ. ಆದರೆ, ಪರಿಸ್ಥಿತಿ ಬದಲಾಗಿಲ್ಲ.

English summary
There is no curb on non Kannada film release in Bengaluru. Rajinikanth starrer Robo 2.0 released in more than 900 plus screens across Bengaluru and KFCC is doing nothing about it says Amaranath Shivashankar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more