ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದ ಹೊಳೆ ಹರಿದು ಹಸಿರು ವಲಯ ಕೆಂಪಾದೀತು ಎಚ್ಚರ!

By ದಿವ್ಯಶ್ರೀ ವಿ, ಬೆಂಗಳೂರು
|
Google Oneindia Kannada News

ಸುಮಾರು 42 ದಿನಗಳಿಂದ ಭಾರತವು ಮದ್ಯಮುಕ್ತವಾಗಿತ್ತು. ಇಂದು ಮದ್ಯಪಾನಕ್ಕೆ ನಮ್ಮ ಸರ್ಕಾರ ಅನುಮತಿ ನೀಡಿದೆ. ಅನುಮತಿ ಸಿಕ್ಕಿದ ತಡ ನಮ್ಮ ಜನ ದಾಪುಗಾಲು ಇಟ್ಟುಕೊಂಡು ಬಂದು ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿ ಇಲ್ಲ ಎನ್ನುವುದು ಕೆಲವರ ಅಭಿಪ್ರಾಯವಾಗಿದೆ.

ಮದ್ಯದ ಆದೇಶದಿಂದ ಗ್ರೀನ್ ವಲಯವು ಕೆಂಪಾಗುವ ಸಾಧ್ಯತೆ ಭಾರಿ ಪ್ರಮಾಣದಲ್ಲಿ ಇದೆ. ಮದ್ಯ ಮಾರಾಟ ಆಘಾತಕಾರಿಯಾಗಿದೆ. ಈ ಮಧ್ಯೆ ಮಾರಾಟದಿಂದ ಹಲವು ಮನೆಗಳ ನೆಮ್ಮದಿ ಹಾಳಾಗುವ ಸಾಧ್ಯತೆಯಿದೆ. ನಮ್ಮ ಸರ್ಕಾರ ಈ ಮದ್ಯ ಮಾರಾಟವನ್ನು ಆದಷ್ಟು ಬೇಗ ನಿಲ್ಲಿಸಬೇಕು ಈ ಸಮಯವನ್ನು ಬಳಸಿಕೊಂಡು ನಮ್ಮ ಸರ್ಕಾರ ಸಾಧ್ಯವಾದರೆ ಸಂಪೂರ್ಣವಾಗಿ ಮದ್ಯಪಾನ ನಮ್ಮ ಭಾರತದಲ್ಲಿ ನಿಷೇಧಿಸುವುದಕ್ಕೆ ಮುಂದಾಗಬೇಕು.

ಇಷ್ಟು ದಿನ ಹೋರಾಡಿದ ಯುದ್ಧವನ್ನು ಈ ಮದ್ಯ ಮಾರಾಟದಿಂದ ನೀರಲ್ಲಿ ಹೋಮ ಮಾಡಿದಂತಾಗುವುದು ಬೇಡ. ನಮಗೆ ತಿಳಿದಿರುವ ಹಾಗೆ ಮದ್ಯ ಮಾರಾಟದಿಂದ ಅನೇಕ ಜನರು ಬೀದಿಗೆ ಬಿದ್ದಿದ್ದಾರೆ ಹಾಗೂ ಕುಡಿದ ಅಮಲಿನಲ್ಲಿ ರಸ್ತೆಯಲ್ಲೆ ಬಿದ್ದು ಇರುವುದು ನಾವು ಎಲ್ಲೆಡೆ ನೋಡುತ್ತಿದ್ದೇವೆ. ಹೀಗೆ ಮುಂದುವರೆದರೆ ಕೊರೊನಾ ವೈರಸ್ಸನ್ನು ಎಲ್ಲೆಡೆ ಹರಡುವುದಕ್ಕೆ ಸರ್ಕಾರವೇ ಕಾರಣವಾಗುತ್ತದೆ. ಮದ್ಯ ಮಾರಾಟವು ಎಲ್ಲರ ಮನೆಗಳಲ್ಲಿ ಭಾರಿ ಪ್ರಮಾಣದಲ್ಲಿ ತೊಂದರೆ ಉಂಟುಮಾಡುತ್ತದೆ.

Lockdown: Liquor sales menace amid of Covid19 Pandemic

ಈ ಮದ್ಯಪ್ರಿಯರು ಮದ್ಯದ ದರ ಜಾಸ್ತಿಯಾದರೂ ಅದನ್ನು ಕೊಟ್ಟು ಮದ್ಯಪಾನವನ್ನು ತೆಗೆದುಕೊಳ್ಳುವುದಕ್ಕೆ ಆಗುತ್ತೆ ಆದರೆ ತಮ್ಮ ದಿನಸಿಯನ್ನು ತೆಗೆದುಕೊಳ್ಳುವುದಕ್ಕೆ ಹಲವು ಜನ ತೊಂದರೆ ಎಂದು ಹೇಳಿದರು. ಇನ್ನೂ ಅನೇಕ ಮನೆಗಳಲ್ಲಿ ದಿನಸಿ ಇಲ್ಲದಿದ್ದರೂ ಈ ಮದ್ಯದ ಚಟದಿಂದ ಎಷ್ಟೋ ಮನೆ ಮಂದಿ ಊಟ ಇಲ್ಲದೆ ಉಪವಾಸ ಇರಬೇಕಾಗುತ್ತದೆ ಇದನ್ನು ಸರಕಾರ ಗಂಭೀರವಾಗಿ ಯೋಚಿಸಿ ಆದಷ್ಟು ಬೇಗ ಇನ್ನೂ ಕೆಲವು ದಿನಗಳ ಕಾಲ ಮದ್ಯವನ್ನು ನಿಷೇಧಿಸಬೇಕು.

English summary
Lockdown 3.0: Liquor sales started amid of Covid19 Pandemic which may lead Green zone to turn into Red Zone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X