ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾವಾಸ್ಯೆ ರಕ್ತಾಕ್ಷಿ ಕಾಟದಿಂದ ಮುಕ್ತಿ ಕೊಡಿಸಿ!

By Prasad
|
Google Oneindia Kannada News

ರವಿ ಅವರೇ, ಮೊದಲು ನಿಮ್ಮನ್ನ ಕಂಡರೆ ಆಗತಿರ್ಲಿಲ್ಲ! ನಿಮ್ಮ ಹಾಯ್ ಬೆಂಗ್ಳೂರ್ ಪತ್ರಿಕೆಯಲ್ಲಿನ ಭಾಷಾ ಬಳಕೆ ನನಗೆ ಹಿಡಿಸಿರಲಿಲ್ಲ. ಅದಕ್ಕೇ ಇರ್ಬೇಕು ನಿಮ್ಮ ಮೇಲಿನ ಮುನಿಸು (ಹುಸಿ).. ಬಟ್, ನಿಮ್ಮ ಒಂದು ಕಾದಂಬರಿ ಓದಿದೆ, "ಹೇಳಿ ಹೋಗು ಕಾರಣ"! ಅಷ್ಟೇ ರೀ, ನಿಮ್ಮ ಕಾದಂಬರಿಗಳ ಪರ್ಮನೆಂಟ್ ಓದುಗನಾದೆ. ನಿಮ್ಮ ಬರವಣಿಗೆ ನನಗೆ ಬಹಳ ಇಷ್ಟ. ನಿಮ್ಮನ್ನ ಇಷ್ಟರಲ್ಲೇ ಮೀಟ್ ಮಾಡುತ್ತೇನೆ. ವಿದ್ಯಾರ್ಥಿ ಭವನ್ ನಲ್ಲಿ ಒಂದು ಒಳ್ಳೆ ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಹೊಡೆಯೋಣ. ಈಗ, ಈ ನಿಮ್ಮ ಆರ್ಟಿಕಲ್ ವಿಚಾರಕ್ಕೆ ಬಂದ್ರೆ, ಖಂಡಿತಾ ಸಿದ್ದನ ಪಂಚೆ ಕಿತ್ತು ಬಿಸಾಡಿ. ಕರ್ನಾಟಕಕ್ಕೆ ಹಿಡಿದಿರೋ ಅಮಾವಾಸ್ಯೆ ರಕ್ತಾಕ್ಷಿ ಕಾಟದಿಂದ ಮುಕ್ತಿ ಕೊಡಿಸಿ. ನಾನಿದ್ದೇನೆ ನಿಮ್ಮ ಜೊತೆ.

Letters to the Oneindia editor

ರಘು ಕೆವಿ

***
100% ಸತ್ಯ. ನಾನು ಸಾವಿರ ಬಾರಿ ಇದನ್ನು ಹೇಳ್ಬೇಕಂತಿದ್ದೆ. ಆದ್ರೆ ನರಿಯ ಕೂಗು ಗಿರಿಗೆ ಕೇಳಿಸುವುದಿಲ್ಲ ಅಂತ ಸುಮ್ನಿದ್ದೆ. ಸತ್ಯ ಎಂದಿದ್ದರೂ ಹೊರಬರುತ್ತದೆ ಎನ್ನುವ ಮಾತಿಗೆ ಇದು ತಾಜಾ ಉದಾಹರಣೆಯಾಗಿದೆ. ಜೆಡಿಎಸ್ ಕಾರ್ಯಕರ್ತರು ಬೀದಿಪಾಲಾಗಿದ್ದಾರೆ. ಬ್ಲಾಕ್ ಮೇಲರ್ಸ್ ಮನೆಯಲ್ಲಿ ಹೆಂಡ್ತಿ ಮಕ್ಕಳುಗಳ ನಂಬಿಗೆ ಕೆಡಿಸಿ ಕೊಂಡವ್ರು ಲೀಡರ್ಗಳಾಗಿದ್ದಾರೆ. ಜೆಡಿಎಸ್ 125! ಕುಮಾರಸ್ವಾಮಿ ಕನಸು ಕಾಣಬೇಕು. ಪ್ರಾಮಾಣಿಕ ಕಾರ್ಯಕರ್ತರ ಶಾಪ ಬೀಳದೆ ಬಿಡುವುದಿಲ್ಲ. ನಾನು ಭಾಳ ನೊಂದು ಹೇಳುತ್ತಿದ್ದೇನೆ. ಪ್ರಜ್ವಲ್ ರೇವಣರಿಗೆ ಹ್ಯಾಟ್ಸ್ ಆಫ್.

ಎಸ್ ಕೆ ವಾಡಿಯಾರ್

***
ಮೆಟ್ರೋ ಮುಷ್ಕರ ಸರಿಯಲ್ಲ ಕಾನೂನು ಎಲ್ಲರಿಗೂ ಒಂದೇ, ಸಿಬ್ಬಂದಯಾಗಲಿ ಸಾರ್ವಜನಿಕರಾಗಲಿ ತಪಾಸಣೆ ಒಂದೇ. ಮೆಟ್ರೋ ಸಿಬ್ಬಂದಿಯಾದ ರಾಕೇಶ್ ಮಾಡಿದ ತಪ್ಪಿಗೆ ಸಾರ್ವಜನಿಕರು ಅನುಭವಿಸಬೇಕಾದ ಬವಣೆ ಸಾರ್ವಜನಿಕರು ಅನುಭವಿಸಬೇಕು. ಇದು ತಪ್ಪು. ಮೆಟ್ರೋ ಸಿಬ್ಬಂದಿ ನಡೆದುಕೊಳ್ಳುವ ರೀತಿಯೇ ಬಹಳ ಶೋಚನೀಯ. ಸಿಬ್ಬಂದಿಗಳೇ ಮೆಟ್ರೋ ಮಾಲೀಕರ ಹಾಗೆ ನಡೆದುಕೊಳ್ಳುತ್ತಿದ್ದಾರೆ, ದಾದಾಗಿರಿ ಹೆಚ್ಚು. ಇದಕ್ಕೆ ಮೆಟ್ರೋ ಆಡಳಿತ ವರ್ಗವೇ ಜವಾಬ್ದಾರಿ ಹೊರಬೇಕು. ಇಂತಹವರನ್ನು ಶಿಕ್ಷಿಸಬೇಕು ಇಂದಿನ ನಷ್ಟವನ್ನು ಸರ್ಕಾರಕ್ಕೆ ಮೆಟ್ರೋದವರೇ ಭರಿಸಬೇಕು.

ಆಂಟೋನಿ

***
"beggars don't have choice".. ಎನ್ನುವ ಮಾತೊಂದಿದೆ. ನಮ್ಮ ಸಂಕಷ್ಟದ ಸಂದರ್ಭದಲ್ಲೂ ಅವರಿಗೆ ಕರುಣೆ ತೋರಿಸಿ ನೀರು ಕೊಟ್ರೆ ಅವರ ಬುದ್ಧಿ ಎಲ್ಲಿ ಹೋಗುತ್ತೆ? ನಿಯತ್ತಿಗೂ ಅವರಿಗೂ ಬಹಳ ದೂರ. ಕೊಳಚೆ ನಿರ್ಮೂಲನೆ ಆಗಬೇಕಾಗಿರುವುದು ಅವರ ಮನಸ್ಸುಗಳಲ್ಲಿ. ಗಬ್ಬು ನಾರುವ ಅವರ ಊರು ಕೇರಿಗಳಲ್ಲಿ. ಬೆಂಗಳೂರಿನ ಕಲಾಸಿಪಾಳ್ಯಮ್ ಒಂದೇ ಸಾಕು, ಅವರುಗಳ ಇರೋ ಸ್ಥಳಗಳು ಎಷ್ಟು ಮಾತ್ರ ಸ್ವಚ್ಛವಾಗಿರುತ್ತವೆ ಎಂದು ಕಾಣಲು.

ಬೆಂಗಳೂರಿಗ

***
ನಮ್ಮ ಕಡೆ (ಉತ್ತರ ಕರ್ನಾಟಕ) ಇಂಥ ಆಚರಣೆಗಳು ಬಲು ಬೇಗ ಹಬ್ಬುತ್ತವೆ. ಯಾವ ಪುಣ್ಯಾತ್ಮ ಊದಿ ಬಿಟ್ಟಿರುತ್ತಾನೋ ಪುಂಗಿ.... ಇದೇನು ಮೊದಲ್ಲ, ಕೆಲವು ಉದಾಹರಣೆಗಳು ನಿಮಗಾಗಿ..

ಅಕ್ಕ ತಂಗಿ ಪೀಡಾ, ಹೀರಿ ಮಗನ ಪೀಡಾ, ಒಂದೇ ಮೊಮ್ಮಗ ಇರೋ ಪೀಡಾ, ಅತ್ತಿಗೆ ನಾದಿನಿ ಪೀಡಾ, ತಂದೆ ಪೀಡಾ ತಾಯಿ ಪೀಡಾ, ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತೆ...

ಪರಿಹಾರ ಕೇಳಿದ್ರೆ ದಂಗಾಗ್ತೀರಾ... ಅಕ್ಕ ತಂಗಿಗೆ, ತಂಗಿ ಅಕ್ಕನಿಗೆ ಸೀರೆ ಬಳೆ ಇತ್ಯಾದಿ ಕೊಡ್ಸಿ, ಊಟ ಹಾಕ್ಸೋದು ಅವರಿರೋ ಊರಿಗೆ ಹೋಗಿ, ಅಜ್ಜಿ / ಅಜ್ಜ ಮೊಮ್ಮಗನಿಗೆ ಬಟ್ಟೆ ಬರಿಯ ಕೊಡ್ಸಿ.. ಸಿಹಿ ಊಟ ಹಾಕಿಸ್ಬೇಕು...

ಎಲ್ಲರು ಇದನ್ನೇ ಫಾಲೋ ಮಾಡೋದು, ಉಡುಗೊರೆಯಲ್ಲಿ ವ್ಯತ್ಯಾಸ ಅಷ್ಟೇ.. ಕೆಲವೊಮ್ಮೆ ಬೆಳ್ಳಿ ಬಂಗಾರ ಎಕ್ಸ್ಚೇಂಜ್ ಮಾಡ್ಕೊಳ್ಳೋ ಆಫರ್ಸ್ ಪೀಡೆಗಳು ಇರ್ತವೆ. ನಗಬೇಕಾ ಅಳಬೇಕಾ ಮೂರ್ಖತನದ ಮೂಢನಂಬಿಕೆಗೆ...

ಪ್ರೌಡ್ ಇಂಡಿಯನ್

English summary
Letters to the Oneindia editor. Readers have expressed their views on many stories published in Oneindia Kannada on various topics like Ravi Belagere arrest episode, Women destroying coral stone in Mangalsutra, Namma Metro controversy etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X